ಮನೆ ರಾಜ್ಯ ನದಿಯಲ್ಲಿ ತೇಲಿ ಹೋಗಿದ್ದ ಗ್ಯಾಸ್ ಟ್ಯಾಂಕರ್: ನೀರು, ಗಾಳಿಯಲ್ಲಿ 18 ಕ್ವಿಂಟಲ್ ಗ್ಯಾಸ್ ಹೊರಕ್ಕೆ

ನದಿಯಲ್ಲಿ ತೇಲಿ ಹೋಗಿದ್ದ ಗ್ಯಾಸ್ ಟ್ಯಾಂಕರ್: ನೀರು, ಗಾಳಿಯಲ್ಲಿ 18 ಕ್ವಿಂಟಲ್ ಗ್ಯಾಸ್ ಹೊರಕ್ಕೆ

0

ಕಾರವಾರ: ಶಿರೂರು ಗುಡ್ಡ ಕುಸಿತದ ರಭಸಕ್ಕೆ ಹೆದ್ದಾರಿಯಿಂದ ಗಂಗಾವಳಿ ನದಿಗೆ ಉರುಳಿಬಿದ್ದು ಸಡಗೇರಿ ಬಳಿ ಕೊಚ್ಚಿ ಹೋಗಿದ್ದ ಎಚ್.ಪಿ.ಗ್ಯಾಸ್ ಟ್ಯಾಂಕರ್ ​ನಿಂದ ಗ್ಯಾಸ್ ಹೊರಬಿಟ್ಟು ಖಾಲಿ ಮಾಡುವ ಕಾರ್ಯಾಚರಣೆ ನಡೆಯುತ್ತಿದೆ.

Join Our Whatsapp Group

ಘಟನೆ ನಡೆದ ಸ್ಥಳದಿಂದ ಹಲವು ಕಿ.ಮೀಗಳಷ್ಟು ನದಿಯಲ್ಲಿ ತೇಲಿ ಹೋಗಿದ್ದ ಟ್ಯಾಂಕರ್ ಅನ್ನು ಸಗಡಗೇರಿಯ ಸಮೀಪದಲ್ಲಿ ನಿಲ್ಲಿಸಲಾಗಿದೆ. ಕೋಸ್ಟ್ ಗಾರ್ಡ್ ಸಮ್ಮುಖದಲ್ಲಿ ಕಂಪೆನಿಯ ತಜ್ಞರು ಟ್ಯಾಂಕರ್​ನಲ್ಲಿದ್ದ 18 ಕ್ವಿಂಟಲ್ ಗ್ಯಾಸ್ ಹೊರಬಿಡುತ್ತಿದ್ದಾರೆ. ಶೇ 60ರಷ್ಟು ಗ್ಯಾಸ್ ಅನ್ನು ನದಿಗೆ ಬಿಡಲಾಗುತ್ತಿದೆ.

ಮುಂಜಾಗೃತಾ ಕ್ರಮವಾಗಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್, ಎಸ್​ಡಿಆರ್​ಎಫ್, ಎನ್‌ಡಿಆರ್‌ಎಫ್, ಹೆಚ್​ಪಿ ಕಂಪನಿಯ ಸಿಬ್ಬಂದಿ, ವೈದ್ಯಕೀಯ ತಂಡದವರು ಸ್ಥಳದಲ್ಲಿದ್ದಾರೆ. ಟ್ಯಾಂಕರ್​ನಲ್ಲಿರುವ ಗ್ಯಾಸ್ ಅನ್ನು ಮೀಟರ್ ಮಾಪನನಿಂದ ಅಳೆದು ನದಿ ಹಾಗೂ ಗಾಳಿಯಲ್ಲಿ ಬಿಡಲಾಗುತ್ತಿದೆ.

ಸಗಡಗೇರಿ ಗ್ರಾಮದ 34 ಕುಟುಂಬಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಮೊಬೈಲ್, ವಾಹನ ಸಂಚಾರ, ಒಲೆ ಉರಿಸುವುದು, ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕುರಿತು ಊರಿನ ಸುತ್ತ ಡಂಗೂರ ಕೂಡಾ ಸಾರಲಾಗಿದೆ.