ಮನೆ ರಾಜ್ಯ ಲೋಕ ಚುನಾವಣೆ: ಕಾಂಗ್ರೆಸ್ ಪಕ್ಷದ ದೊಂಬರಾಟ ನೆಡೆಯುವುದಿಲ್ಲ- ಬಂಡೆಪ್ಪ ಕಾಶೆಂಪುರ್‌

ಲೋಕ ಚುನಾವಣೆ: ಕಾಂಗ್ರೆಸ್ ಪಕ್ಷದ ದೊಂಬರಾಟ ನೆಡೆಯುವುದಿಲ್ಲ- ಬಂಡೆಪ್ಪ ಕಾಶೆಂಪುರ್‌

0

ಮಂಡ್ಯ:ಕಾಂಗ್ರೆಸ್ ಪಕ್ಷದ ದೊಂಬರಾಟ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದು ಸಚಿವ ಮಾಜಿ ಬಂಡೆಪ್ಪ ಕಾಶೆಂಪುರ್‌ ತಿಳಿಸಿದರು.

Join Our Whatsapp Group


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಡ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಗೆ ನಿಂತಿರುವುದು ಅದು ನಮ್ಮ ಸೌಭಾಗ್ಯ ಎಂದರು.ಪ್ರಸ್ತುತ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಪ್ರಬಲ ನಾಯಕರಿಲ್ಲ ಈಗ ಕುಮಾರಸ್ವಾಮಿ ಅವರು ತೆಗೆದುಕೊಂಡಿರುವ ತೀರ್ಮಾನ ನಮ್ಮ ಸೌಭಾಗ್ಯ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಶಾದಿಭಾಗ್ಯ, ಅನ್ನ ಭಾಗ್ಯ,ಶೂ ಭಾಗ್ಯ ಸೇರಿದಂತೆ ಹಲವಾರು ಭಾಗ್ಯಗಳನ್ನು ನೀಡಿದೆ ಆದರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಜನರು 130 ಸ್ಥಾನದಲ್ಲಿ ಗೆದ್ದಿದ್ದ ಕಾಂಗ್ರೆಸ್ ಪಕ್ಷವನ್ನು 70 ಸ್ಥಾನಕ್ಕೆ ಇಳಿಸಿದರು ಎಂದರು .
ಕಾಂಗ್ರೆಸ್ ಪಕ್ಷ ಗ್ಯಾರಂಟಿ ಮೂಲಕ ಜನರನ್ನು ಮತ್ತೆ ಮರಳು ಮಾಡಲು ಹೋಗುತ್ತಿದೆ.ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ನೀಡುತ್ತಿದೆ. ರಾಜ್ಯ ಸರ್ಕಾರ 170 ನೀಡಿದರೆ ಈ ಹಣದಲ್ಲಿ 3 ಕೆಜಿ ಅಕ್ಕಿ ಮಾತ್ರ ಸಿಗುತ್ತದೆ ಎಂದರು .
ರಾಜ್ಯ ಅಭಿವೃದ್ಧಿ ಅಭಿವೃದ್ಧಿ ಶೂನ್ಯವಾಗಿದೆ.ಗ್ಯಾರಂಟಿಗಾಗಿ 1 ಲಕ್ಷ ಕೋಟಿ ಹಣ ನೀಡಿದ್ದು,ಇದರ ಹೊರೆ ಜನರ ಮೇಲೆ ಬೀಳುತ್ತಿದೆ ಎಂದು ಗ್ಯಾರಂಟಿ ಯೋಜನೆಯನ್ನು ಟೀಕಿಸಿದರು .
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲವನ್ನು ಮನ್ನಾ ಮಾಡಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ದೊಂಬರಾಟ ನಡೆಯುವುದಿಲ್ಲ ಎಂದು ತಿಳಿಸಿದಲ್ಲದೆ, ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಯರಾಮ್ ನಾಗರಾಜು ,ಶ್ರೀಧರ್ ಸೇರಿದಂತೆ ಇತರರಿದ್ದರು.