ಮನೆ ರಾಷ್ಟ್ರೀಯ ಬಾಲಕಿ ಮೇಲೆ ಗ್ಯಾಂಗ್‌ ರೇಪ್‌ – ಹತ್ಯೆ ಬಳಿಕ 3 ಅಂತಸ್ತಿನಿಂದ ಮೃತದೇಹ ಎಸೆದ ಕಿರಾತಕರು

ಬಾಲಕಿ ಮೇಲೆ ಗ್ಯಾಂಗ್‌ ರೇಪ್‌ – ಹತ್ಯೆ ಬಳಿಕ 3 ಅಂತಸ್ತಿನಿಂದ ಮೃತದೇಹ ಎಸೆದ ಕಿರಾತಕರು

0

ಲಕ್ನೋ : ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಸಿಕಂದರಾಬಾದ್ ಕೈಗಾರಿಕಾ ಪ್ರದೇಶದಲ್ಲಿ 6 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ. ಬಳಿಕ ಆಕೆಯನ್ನ ಹತ್ಯೆ ಮಾಡಲಾಗಿದ್ದು, ಗುರುತು ಮರೆಮಾಚಲು ಕಿರಾತಕರು ದೇಹವನ್ನ ಮನೆಯ ಛಾವಣಿಯಿಂದ ಕೆಳಗೆ ಎಸೆದಿದ್ದಾರೆ.

ಘಟನೆಗೆ ಸಂಬಂಧಿಸಿದ ಆರೋಪಿಗಳನ್ನ ಪೊಲೀಸರು ಎನ್‌ಕೌಂಟರ್‌ ಬಳಿಕ ಬಂಧಿಸಿದ್ದಾರೆ. ಘಟನೆಯು ಶುಕ್ರವಾರ ಸಂಜೆ ನಡೆದಿದೆ. ಫಿರೋಜಾಬಾದ್ ಜಿಲ್ಲೆಯ ಕಾರ್ಮಿಕನ ಮಗಳಾದ ಈ ಬಾಲಕಿ ಮನೆಯ ಮೇಲ್ಛಾವಣಿಯಲ್ಲಿ ಆಟವಾಡುತ್ತಿದ್ದಳು. ನೆರೆ ಮನೆಯಲ್ಲಿ ಬಾಡಿಗೆಗೆ ಇದ್ದ ಇಬ್ಬರು ಯುವಕರು – ರಾಜೂ (ಬಲರಾಂಪುರ ಜಿಲ್ಲೆಯ ಭಗವಾನ್‌ಪುರ ಮೂಲದವನು) ಮತ್ತು ವೀರು ಕಶ್ಯಪ್ (ಲಖೀಂಪುರ ಖೀರಿ ಜಿಲ್ಲೆಯ ಗೋಲಾ ಗೋರಖನಾಥ ಮೂಲದವನು) – ಮದ್ಯ ಅಮಲಲ್ಲಿ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದಾರೆ.

ಬಾಲಕಿ ತೀವ್ರವಾಗಿ ಒದ್ದಾಡಿ ಕೂಗಾಡಿದ್ದರಿಂದ ಆಕೆಯನ್ನ ಕೊಂದು ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ 3ನೇ ಮಹಡಿಯ ಛಾವಣಿಯಿಂದ ಕೆಳಗೆ ಎಸೆದಿದ್ದಾರೆ. ಮೊದಲು ಬಾಲಕಿ ಛಾವಣಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂಬ ಸುದ್ದಿ ಹರಡಿತ್ತು. ಆದರೆ ಪೊಲೀಸ್ ತನಿಖೆಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಸತ್ಯ ಬಯಲಾಗಿದೆ.

ಬಾಲಕಿ ಕಾಣೆಯಾದ ಸುದ್ದಿ ತಿಳಿದ ತಕ್ಷಣ ಪೊಲೀಸರು ಶೋಧ ಕಾರ್ಯ ಆರಂಭಿಸಿದರು. ರಾತ್ರಿ ವೇಳೆ ಆರೋಪಿಗಳು ಒಂದು ನಿರ್ಮಾಣ ಹಂತದ ಕಾಲೋನಿಯಲ್ಲಿ ಅಡಗಿಕೊಂಡಿದ್ದ ಸ್ಥಳಕ್ಕೆ ಪೊಲೀಸ್ ತಂಡಗಳು ದಾಳಿ ನಡೆಸಿದವು. ಪೊಲೀಸರನ್ನು ಕಂಡ ಆರೋಪಿಗಳು ಗುಂಡು ಹಾರಿಸಿದರು. ಇದಕ್ಕೆ ಪ್ರತಿಯಾಗಿ ಕಾರ್ಯಾಚರಣೆಯಲ್ಲಿ ಪೊಲೀಸರು ಗುಂಡು ಹಾರಿಸಿದ್ದು, ಇಬ್ಬರು ಆರೋಪಿಗಳ ಕಾಲಿನಲ್ಲಿ ಗಾಯಗೊಂಡಿದೆ. ನಂತರ ಅವರನ್ನು ಬಂಧಿಸಲಾಗಿದೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬುಲಂದ್‌ಶಹರ್ ಎಸ್‌ಎಸ್‌ಪಿ ದಿನೇಶ್ ಕುಮಾರ್ ಸಿಂಗ್ ಮಾತನಾಡಿ, ಆರೋಪಿಗಳು ಮದ್ಯದ ಅಮಲಲ್ಲಿ ಇದ್ದರು ಮತ್ತು ಪ್ರಾಥಮಿಕ ವಿಚಾರಣೆಯಲ್ಲಿ ಅತ್ಯಾಚಾರ ಹಾಗೂ ಹತ್ಯೆಯನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳು ಬಾಲಕಿ ತಮ್ಮನ್ನು ಗುರುತಿಸಿ ಹೇಳಿಕೊಡುವ ಭಯದಿಂದ ಆಕೆಯನ್ನು ಛತದಿಂದ ಎಸೆದಿದ್ದಾರೆ ಪ್ರಕರಣವನ್ನು ತನಿಖೆ ಮುಂದುವರಿದಿದೆ ಎಂದು ಹೇಳಿದರು.