ಮನೆ ಸುದ್ದಿ ಜಾಲ ಬಾಲಕಿಗೆ ನಿತ್ಯ ಕಿರುಕುಳ – ಗುಂಡು ಹಾರಿಸಿ ಆರೋಪಿ ಎಸ್ಕೇಪ್‌..!

ಬಾಲಕಿಗೆ ನಿತ್ಯ ಕಿರುಕುಳ – ಗುಂಡು ಹಾರಿಸಿ ಆರೋಪಿ ಎಸ್ಕೇಪ್‌..!

0

ಚಂಡೀಗಢ : ಫರಿದಾಬಾದ್‌ನಲ್ಲಿ 17 ವರ್ಷದ ಬಾಲಕಿಯನ್ನು ಹಲವಾರು ದಿನಗಳಿಂದ ಹಿಂಬಾಲಿಸುತ್ತಿದ್ದ ವ್ಯಕ್ತಿಯೊಬ್ಬ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಬಾಲಕಿ ಮತ್ತು ಆರೋಪಿ ಇಬ್ಬರೂ ಒಂದೇ ಲೈಬ್ರರಿಯಲ್ಲಿ ಓದಲು ಬರುತ್ತಿದ್ದರು. ಗ್ರಂಥಾಲಯದ ಹೊರಗೆ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.

ಆರೋಪಿಗೆ ಹುಡುಗಿಯ ದಿನಚರಿಯ ಬಗ್ಗೆ ತಿಳಿದಿತ್ತು. ಅವಳ ಆಗಮನಕ್ಕಾಗಿ ಮುಂಚಿತವಾಗಿ ಬಂದು ಕಾಯುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯು ಹುಡುಗಿಯ ಚಲನವಲನಗಳನ್ನು ಗಮನಿಸುತ್ತಿದ್ದ. ಆಕೆ ಗ್ರಂಥಾಲಯಕ್ಕೆ ಬರುವುದನ್ನೇ ಕಾದು ಕುಳಿತುಕೊಳ್ಳುತ್ತಿದ್ದ.

ಗಾಯಗೊಂಡಿರುವ ಬಾಲಕಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆರೋಪಿಯನ್ನು ಗುರುತಿಸಿದ್ದಾಳೆ. ಆತ ಹಲವು ಬಾರಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾಳೆ. ಆರೋಪಿ ನನಗೆ ಗೊತ್ತು. ಆತ ಬಹಳ ಸಮಯದಿಂದ ನನಗೆ ತೊಂದರೆ ನೀಡುತ್ತಿದ್ದ ಎಂದು ಪೊಲೀಸರು ಬಳಿ ಬಾಲಕಿ ದೂರಿದ್ದಾಳೆ.

ಬಾಲಕಿಯ ಮೇಲೆ ಗುಂಡು ಹಾರಿಸಿದ ನಂತರ, ಆರೋಪಿಯು ಅದನ್ನು ಸ್ಥಳದಲ್ಲಿ ಎಸೆದು ಪರಾರಿಯಾಗಿದ್ದಾನೆ. ಪೊಲೀಸರು ಪಿಸ್ತೂಲನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಬಂಧನಕ್ಕೆ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.