ಗ್ವಾಲಿಯರ್: 15 ವರ್ಷ ಪ್ರಾಯದ ಬಾಲಕಿಯನ್ನು ಆಕೆಯ ಹೆತ್ತವರ ಎದುರುಗಡೆಯೇ ಗನ್ ಪಾಯಿಂಟ್ ನಲ್ಲಿ ಮೂವರು ಅತ್ಯಾಚಾರಗೈದ ಘಟನೆ ಸೋಮವಾರ ರಾತ್ರಿ ಮಧ್ಯಪ್ರದೇಶದ ಗ್ವಾಲಿಯರ್ ನ ಭನ್ವಾರ್ ಪುರ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಎರಡು ದಿನಗಳ ಬಳಿಕ ಪೊಲೀಸರ ಬಳಿ ದೂರು ನೀಡಲಾಗಿದೆ ಎಂದು ಎಎಸ್ ಪಿ ರಿಶಿಕೇಷ್ ಮೀನಾ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.
ಬಾಲಕಿಯ ಕುಟುಂಬವು ಒಂದು ತಿಂಗಳ ಹಿಂದೆಯಷ್ಟೇ ಈ ಸ್ಥಳಕ್ಕೆ ಬಂದಿತ್ತು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.














