ಮೈಸೂರು: ಪ್ರಿಯಕರನ ಮನೆಯಲ್ಲಿ ವಿಷಸೇವಿಸಿ ಪ್ರಿಯತಮೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ನಡೆದಿದೆ. ಕಂದೇಗಾಲದ ತ್ಯಾಗರಾಜ್ ನಿವಾಸದಲ್ಲಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕಳೆದ 4 ವರ್ಷಗಳಿಂದ ತ್ಯಾಗರಾಜ್ ಎಂಬ ಯುವಕ ಮತ್ತು ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ನಿನ್ನೆ ತ್ಯಾಗರಾಜ್ ಹುಟ್ಟುಹಬ್ಬ ಆಚರಣೆಗಾಗಿ ತನ್ನ ಪ್ರಿಯತಮೆಯನ್ನು ಮನೆಗೆ ಆಹ್ವಾನಿಸಿದ್ದ. ಪ್ರಿಯತಮನ ಬರ್ತ್ಡೇ ದಿನವೇ ಯುವತಿ ವಿವಾಹ ವಿಚಾರ ಪ್ರಸ್ತಾಪಿಸಿದ್ದಳು. ಎಲ್ಲರ ಎದುರು ವಿವಾಹ ವಿಚಾರ ಪ್ರಸ್ತಾಪಿಸಿದ್ದಕ್ಕೆ ಯುವಕ ಕಪಾಳಮೋಕ್ಷ ಮಾಡಿದ್ದಾನೆ. ಜನರ ಎದುರು ಕಪಾಳಕ್ಕೆ ಹೊಡೆದಿದ್ದಕ್ಕೆ ಯುವತಿಗೆ ತೀವ್ರ ಬೇಸರವಾಗಿತ್ತು. ಹೀಗಾಗಿ ಮನನೊಂದ ಯುವತಿ ತನ್ನ ಪ್ರಿಯತಮ ತ್ಯಾಗರಾಜ್ ಮನೆಯಲ್ಲೇ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಯುವತಿ ಅಸ್ವಸ್ಥಗೊಂಡಿದ್ದು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.