ಮನೆ ಸುದ್ದಿ ಜಾಲ ಹೆಣ್ಣುಮಕ್ಕಳು ಸವಾಲುಗಳನ್ನು ಮೀರಿ ಬೆಳೆದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ: ಶೀತಲ್ ಶೆಟ್ಟಿ

ಹೆಣ್ಣುಮಕ್ಕಳು ಸವಾಲುಗಳನ್ನು ಮೀರಿ ಬೆಳೆದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ: ಶೀತಲ್ ಶೆಟ್ಟಿ

0

ಮೈಸೂರು(Mysuru):  ಸಿನಿಮಾ ಕ್ಷೇತ್ರದಲ್ಲಿ ಹೆಣ್ಣುಮಕ್ಕಳಿಗೆ ತುಂಬಾ ಅವಕಾಶಗಳಿರುವುದರ ಜೊತೆಗೆ ಹಲವಾರು ಸಾವಲುಗಳು ಇರುತ್ತದೆ. ಇಂತಹ ಸವಾಲುಗಳನ್ನು ಹೆಣ್ಣುಮಕ್ಕಳು ಮೀರಿ ಬೆಳೆದರೆ ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಬಹುದು ಎಂದು ನಿರ್ದೇಶಕಿ ಶೀತಲ್ ಶೆಟ್ಟಿ ಅವರು ಹೇಳಿದರು.

ಶನಿವಾರ ನಗರದ ಮಾನಸಗಂಗೋತ್ರಿಯ ಆವರಣದಲ್ಲಿರುವ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆದ ಚಲನಚಿತ್ರ ನಿರ್ಮಾಣ ಪೂರ್ವ ತಯಾರಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮೂರು ದಿನಗಳ ಕಾಲ ನಡೆದ ಈ ಕಾರ್ಯಾಗಾರದಲ್ಲಿ ಸಿನಿಮಾವನ್ನು ಹೇಗೆ ನಿರ್ಮಾಣ ಮಾಡಬೇಕು, ಹೇಗೆ ನಿರ್ದೇಶನ ಮಾಡಬೇಕು ಎಂಬುದು ಸಂಪನ್ಮೂಲ ವ್ಯಕ್ತಿಗಳಿಂದ ತಿಳಿಸಲಾಗಿದೆ. ಹೀಗಾಗಿ ನಿರ್ಮಾದ ಬಗ್ಗೆ ನಿಮಗೆ ಈಗಾಗಲೇ ಮಾಹಿತಿ ಇರುವುದರಿಂದ ಮುಂದೆ ಬಂದು ಕೆಲಸ ಮಾಡಬೇಕು ಎಂದರು.

ಸಿನಿಮಾ ಕ್ಷೇತ್ರದಲ್ಲಿ ಹೆಣ್ಣುಮಕ್ಕಳು ಮುಂದೆ ಬಂದು ಕೆಲಸ ಮಾಡಬೇಕು. ಸಿನಿಮಾ ಎಂಬುದು ಕೇವಲ ಫ್ಯಾಷನ್ ಅಲ್ಲ ಎಂದು ತಿಳಿದುಕೊಳ್ಳಬಾರದು. ಸಿನಿಮಾದ ಯಾವುದೇ ವಿಭಾಗದಲ್ಲಿ ಕೆಲಸ ಮಾಡುವುದರ ಜೊತೆ ಡೈನಾಮಿಕ್ ವಿಭಾಗದಲ್ಲಿಯೂ ಕಾಣಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರದರ್ಶನಗೊಂಡ ಕಿರುಚಿತ್ರಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.

ಪ್ರಥಮ ಬಹುಮಾನವನ್ನು ಸಂತೋಷ್ ಕುಮಾರ್ ನಿರ್ಮಾಣದ ಜೆ.ಪ್ರದೀಪ್ ಕುಮಾರ್ ನಟಿಸಿರುವ ನಮ್ಮ ಪೊಲೀಸ್ ಚಿತ್ರ ಪ್ರಥಮ ಪ್ರಶಸ್ತಿ ಪಡೆದರೆ, ದ್ವೀತಿಯ ಸ್ಥಾನವನ್ನು ಆರ್ಯವರ್ತ ಚಿತ್ರ ಪಡೆದುಕೊಂಡಿತು.

ಕಾರ್ಯಕ್ರಮದಲ್ಲಿ ಸಿ.ಎಂ.ಮಹದೇವಯ್ಯ, ಕಿರಣ್ ಜಯರಾಮೇಗೌಡ, ಹೊನ್ನಳ್ಳಿ ವೆಂಕಟೇಶ್, ಪ್ರಕಾಶ್ ಪಟೇಲ್, ಉದ್ದೀತ್ ಗೌಡ,  ಚಲನಚಿತ್ರೋತ್ಸವದ ಉಪ ವಿಶೇಷಾಧಿಕಾರಿಯಾದ ಆರ್.ಶೇಷ, ಚಲನಚಿತ್ರೋತ್ಸವದ ಸದಸ್ಯ ಕಾರ್ಯದರ್ಶಿಯೂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಕೆ.ಹರೀಶ್ ಸೇರಿದಂತೆ ಇತರರು ಹಾಜರಿದ್ದರು.