ಕೊಪ್ಪಳ : ಅಲೆಮಾರಿ ಸಮುದಾಯಕ್ಕೆ 1% ಮೀಸಲಾತಿ ಮಾಡಿಸಿ ಕೊಡ್ತೀನಿ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಭರವಸೆ ನೀಡಿದ್ದಾರೆ.
ಕೊಪ್ಪಳದ ಕುಕನೂರು ಪಟ್ಟಣಕ್ಕೆ ಬಸವರಾಜ ರಾಯರೆಡ್ಡಿ ಅವರು ಕಾರ್ಯಕ್ರಮಕ್ಕೆಂದು ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಅಲೆಮಾರಿ ಸಮುದಾಯದವರು ರಾಯರೆಡ್ಡಿ ಅವರನ್ನು ಇಂದು ಭೇಟಿ ಮಾಡಿದರು.
ಈ ವೇಳೆ ಅಲೆಮಾರಿ ಸಮುದಾಯದವರು ಮಾತನಾಡಿ ಅವರು, 1% ಮೀಸಲಾತಿಗಾಗಿ ಅಲೆಮಾರಿ ಸಮುದಾಯದವರು ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದೇವೆ. ಜೊತೆಗೆ ಮೀಸಲಾತಿಗಾಗಿ ಬೆಂಗಳೂರಿಗೆ ಹೋಗುತ್ತೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ನಿಮಗೆ 1% ಮೀಸಲಾತಿ ಮಾಡಿಸಿ ಕೊಡ್ತೀನಿ ಎಂದು ಹೇಳಿದ್ದಾರೆ.














