ಮನೆ ರಾಜ್ಯ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿ, ಸಮ್ಮಿಶ್ರ ಸರ್ಕಾರ ಎಂದರೆ ಶಾಪ: ಸಚಿವ ಡಾ.ಕೆ.ಸುಧಾಕರ್‌

ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿ, ಸಮ್ಮಿಶ್ರ ಸರ್ಕಾರ ಎಂದರೆ ಶಾಪ: ಸಚಿವ ಡಾ.ಕೆ.ಸುಧಾಕರ್‌

0

ಬೆಂಗಳೂರು: ಬಿಜೆಪಿಗೆ ಒಮ್ಮೆ ಸ್ಪಷ್ಟ ಬಹುಮತ ನೀಡಿದರೆ, ಐದು ವರ್ಷಗಳಲ್ಲಿ ರಾಮರಾಜ್ಯದ ಪರಿಕಲ್ಪನೆ ಸಾಕಾರಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

Join Our Whatsapp Group

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯಕ್ಕೆ ಸಮ್ಮಿಶ್ರ ಸರ್ಕಾರವು ಶಾಪವಾಗಿದೆ. ಇಂತಹ ಸರ್ಕಾರಗಳಿಂದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂಬುದನ್ನು ನೋಡಿದ್ದೇವೆ. ಆದ್ದರಿಂದ ಜನರು ಸ್ಪಷ್ಟವಾದ ಬಹುಮತವನ್ನು ಜನರು ಬಿಜೆಪಿ ನೀಡಬೇಕು. ಕೇಂದ್ರದಲ್ಲಿರುವ ಪಕ್ಷದ ಸರ್ಕಾರವೇ ರಾಜ್ಯದಲ್ಲೂ ಇದ್ದರೆ, ಅನುದಾನ ತರಲು, ಯೋಜನೆ ನೀಡಲು ಸುಲಭವಾಗುತ್ತದೆ. ಕರ್ನಾಟಕದ ಜನರು ಹೆಚ್ಚು ರಾಜಕೀಯ ಪ್ರಜ್ಞೆ ಹೊಂದಿದ್ದಾರೆ ಎಂದರು.

ಬಿಜೆಪಿಗೆ ರಾಜ್ಯದಲ್ಲಿ ಸ್ಪಷ್ಟವಾದ ಬಹುಮತ ಸಿಕ್ಕಿಲ್ಲ. ಕೇಂದ್ರದಲ್ಲಿ ಪ್ರಧಾನಿ ಮೋದಿಯವರಿಗೆ ಸ್ಪಷ್ಟ ಬಹುಮತ ಸಿಕ್ಕಿದ್ದರಿಂದ ಅವರು ದಿಟ್ಟ ತೀರ್ಮಾನಗಳನ್ನು ಕೈಗೊಳ್ಳಲು ಸಾಧ್ಯವಾಯಿತು. ಅದೇ ರೀತಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಕೊಟ್ಟರೆ, ಐದು ವರ್ಷಗಳಲ್ಲಿ ರಾಮರಾಜ್ಯದ ಪರಿಕಲ್ಪನೆ ಸಾಕಾರಗೊಳಿಸಲಾಗುವುದು ಎಂದರು.

ಕೋವಿಡ್‌ ಬಂದು ಆರ್ಥಿಕ, ಸಾಮಾಜಿಕ ವ್ಯವಸ್ಥೆಗೆ ಧಕ್ಕೆಯುಂಟುಮಾಡಿದಾಗ ಪ್ರಧಾನಿ ನರೇಂದ್ರ ಮೋದಿಯವರು ದಿಟ್ಟ ನಾಯಕತ್ವ ತೋರಿದರು. ವಸುದೈವ ಕುಟುಂಬಕಂ ಎಂಬ ಆದರ್ಶದಲ್ಲಿ ನಂಬಿಕೆ ಇಟ್ಟಿರುವ ಪ್ರಧಾನಿ ಮೋದಿಯುವರು, ಬಡ ದೇಶಗಳಿಗೆ ಕೋವಿಡ್‌ ಲಸಿಕೆ ಪೂರೈಸಿ ಹೃದಯ ಶ್ರೀಮಂತಿಕೆ ಮೆರೆದಿದ್ದರು. ದೇಶದಲ್ಲಿ 220 ಕೋಟಿ ಹಾಗೂ ರಾಜ್ಯದಲ್ಲಿ 12 ಕೋಟಿಗೂ ಅಧಿಕ ಲಸಿಕೆಗಳನ್ನು ನೀಡಲಾಗಿದೆ. ರಾಜ್ಯದಲ್ಲಿ 1.15 ಕೋಟಿ ಬೂಸ್ಟರ್‌ ಡೋಸ್‌ ನೀಡಲಾಗಿದೆ. ರಾಜ್ಯಕ್ಕೆ ಉಚಿತವಾಗಿ ನೀಡಿದ ಲಸಿಕೆಗಳ ಬೆಲೆ 2,141 ಕೋಟಿ ರೂ. ಆಗಿದ್ದು, ಇದನ್ನು ಕೇಂದ್ರವೇ ನೀಡಿದೆ ಎಂದರು.

ಮುಂದುವರಿದ ದೇಶಗಳು ಕೂಡ ಕೋವಿಡ್‌ ಅನ್ನು ಭಾರತದಂತೆ ನಿರ್ವಹಣೆ ಮಾಡಲು ಸಾಧ್ಯವಾಗಲಿಲ್ಲ. ಅಮೆರಿಕ ಸೇರಿದಂತೆ ಅನೇಕ ದೇಶಗಳು ಮೊದಲ ಅಲೆಯಲ್ಲೇ ತತ್ತರಿಸಿಹೋಗಿದ್ದವು. ಮೊದಲ ಅಲೆಯಲ್ಲಿ ಭಾರತ ಉತ್ತಮವಾಗಿ ನಿಯಂತ್ರಣ ಮಾಡಿದೆ. ಪ್ರಧಾನಿ ಮೋದಿಯವರು ಗರೀಬ್‌ ಕಲ್ಯಾಣ ಅನ್ನ ಯೋಜನೆಯಡಿ, ಉಚಿತವಾದ ಅಕ್ಕಿ ನೀಡಿದರು. ರಾಜ್ಯದ್ದು ಕೂಡ ಸೇರಿ ಮೂರು ವರ್ಷಗಳ ಕಾಲ ತಲಾ 10 ಕೆಜಿ ನೀಡಲಾಗಿದೆ ಎಂದರು.

ಲಸಿಕೆಯಲ್ಲಿ ರಾಜಕೀಯ

ಲಸಿಕೆ ಬರುವ ಮುನ್ನವೇ ಕಾಂಗ್ರೆಸ್‌ ರಾಜಕೀಯ ಆರಂಭಿಸಿತ್ತು. ದೇಶಕ್ಕೆ ತುರ್ತು ಪರಿಸ್ಥಿತಿ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳು ದೇಶವನ್ನು ಕಾಪಾಡುತ್ತವೆ. ಆದರೆ ಕಾಂಗ್ರೆಸ್‌ ಎಲ್ಲದರಲ್ಲೂ ರಾಜಕಾರಣವನ್ನು ಬೆರೆಸಿದೆಯೇ ಹೊರತು, ಸರ್ಕಾರಕ್ಕೆ ಸಹಕಾರ ನೀಡಲಿಲ್ಲ. ಇದು ಜನರಿಗೆ ಮಾಡಿದ ಘೋರ ಅಪರಾಧ. ಆದರೂ ಪ್ರಧಾನಿಯವರ ನಾಯಕತ್ವದಲ್ಲಿ ಸಮರ್ಥವಾಗಿ ಕೋವಿಡ್‌ ಎದುರಿಸಿ ಹಿಂದಿನ ಸ್ಥಿತಿಗೆ ಮರಳಿದ್ದೇವೆ. ಆರ್ಥಿಕ ಪರಿಸ್ಥಿತಿ ಕೂಡ ಚೇತರಿಸಿಕೊಂಡಿದೆ ಎಂದರು.

ಲಸಿಕೆಯನ್ನು ಅಪಹಾಸ್ಯ ಮಾಡಿ, ʼಮೋದಿ ಲಸಿಕೆʼ ಎಂದು ಕರೆಯಲಾಯಿತು. ಲಸಿಕೆ ಪಡೆದರೆ ಸಂತಾನ ಶಕ್ತಿ ಕಳೆದುಕೊಳ್ಳುತ್ತಾರೆ ಎಂಬ ಅಪಪ್ರಚಾರವನ್ನು ಕಾಂಗ್ರೆಸ್‌ ಮಾಡಿತು. ಆದರೆ ಕೋವಿಡ್‌ ತೀವ್ರವಾದ ಬಳಿಕ ಕಾಂಗ್ರೆಸ್‌ ನಾಯಕರು ಸಾಲಿನಲ್ಲಿ ನಿಂತು ಲಸಿಕೆ ಪಡೆದರು. ಲಸಿಕೆ ಬಂದ ಬಳಿಕ ಅದರ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಂಶೋಧನಾ ಸಂಸ್ಥೆಗಳಿಗೆ ಅಪಮಾನ ಮಾಡಿದ್ದರು. ಪೋಲಿಯೋ ಲಸಿಕೆ ಬರಲು 23 ವರ್ಷ, ಹೆಪಟೈಟಿಸ್‌ ಬಿ ಲಸಿಕೆ ಬರಲು 20 ವರ್ಷವಾಯಿತು. ಕೋವಿಡ್‌ ಲಸಿಕೆ ಮಾತ್ರ ನಮ್ಮ ದೇಶದಲ್ಲೇ ತಯಾರಾಗಿ ಬೇಗ ಜನರಿಗೆ ದೊರೆಯಿತು ಎಂದರು.

ಇಡೀ ರಾಜ್ಯದಲ್ಲಿ 5-6 ಸಾವಿರ ಆಕ್ಸಿಜನ್‌ ಹಾಸಿಗೆಗಳಿದ್ದವು. ಕೆಲವೇ ತಿಂಗಳಲ್ಲಿ ಜಿಲ್ಲಾಸ್ಪತ್ರೆಯಿಂದ ಮೆಡಿಕಲ್‌ ಕಾಲೇಜು ತನಕ 30 ಸಾವಿರ ಹಾಸಿಗೆಗಳಿಗೆ ಆಕ್ಸಿಜನ್‌ ಅಳವಡಿಸಲಾಯಿತು. 2,025 ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗಿದೆ. 1.12 ಕೋಟಿ ಜನರು ಟೆಲಿ ಕನ್ಸಲ್ಟೇಶನ್‌ ಮೂಲಕ ಆರೋಗ್ಯ ಸೇವೆ ಪಡೆದಿದ್ದಾರೆ ಎಂದು ತಿಳಿಸಿದರು.

ಮಾಜಿ ಸಿಎಂ  ಬಿ.ಎಸ್‌.ಯಡಿಯೂರಪ್ಪನವರು ಹಾಗೂ ಸಿಎಂ ಬಸವರಾಜ ಬೊಮ್ಮಾಯಿಯವರು ದೀರ್ಘ ಕಾಲದ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ನೀರಾವರಿ ಯೋಜನೆ, ಶಿಕ್ಷಣ ಉನ್ನತೀಕರಣ, ರಸ್ತೆ ಮೂಲಸೌಕರ್ಯ ಮೊದಲಾದವುಗಳಲ್ಲಿ ಹೆಚ್ಚು ಅಭಿವೃದ್ಧಿಯಾಗಿದೆ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ದೊಡ್ಡ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದರು.

ಹಿಂದಿನ ಲೇಖನನೈಸರ್ಗಿಕ ಅನಿಲದ ದರ ನಿಗದಿ ಪಡಿಸಲು ಹೊಸ ವಿಧಾನ:  ಸಿ.ಎನ್.ಜಿ ಶೇ.9, ಪಿ.ಎನ್.ಜಿ ಶೇ.10 ರಷ್ಟು ಅಗ್ಗ ಸಾಧ್ಯತೆ
ಮುಂದಿನ ಲೇಖನಕೊಡವರಿಗೆ ಪ್ರತ್ಯೇಕ ಸ್ಥಾನಮಾನ: ಹೈಕೋರ್ಟ್’ಗೆ ಮೆಮೊ ಸಲ್ಲಿಸಿದ ಸಂಸದ ಸುಬ್ರಮಣಿಯನ್ ಸ್ವಾಮಿ; ಏ.17ಕ್ಕೆ ವಿಚಾರಣೆ