ಮನೆ ರಾಜ್ಯ ಕಬ್ಬಿಗೆ ಸರ್ಕಾರ ನಿಗದಿಪಡಿಸಿರುವ ಸೂಕ್ತ ಬೆಲೆಯನ್ನು ರೈತರಿಗೆ ನೀಡಿ: ಡಾ. ಕೆ ವಿ ರಾಜೇಂದ್ರ

ಕಬ್ಬಿಗೆ ಸರ್ಕಾರ ನಿಗದಿಪಡಿಸಿರುವ ಸೂಕ್ತ ಬೆಲೆಯನ್ನು ರೈತರಿಗೆ ನೀಡಿ: ಡಾ. ಕೆ ವಿ ರಾಜೇಂದ್ರ

0

    ಮೈಸೂರು: ರಾಜ್ಯ ಸರ್ಕಾರದಿಂದ ಕಬ್ಬು ಬೆಳೆಗಾರರಿಗೆ ನಿಗಧಿಯಾರಿಗಿರುವ ಬೆಲೆಯನ್ನು ಸಂಪೂರ್ಣವಾಗಿ ರೈತರಿಗೆ ತಲುಪಿಸಬೇಕು. ರೈತರು ಬೆಳೆಯುತ್ತಿರುವ ಬೆಳೆಗಳಿಗೆ ಸೂಕ್ತವಾದ ದರ ಸಿಗದೇ ಇರುವುದು ರೈತರ ಧರಣಿಗಳಿಗೆ ಕಾರಣವಾಗುತ್ತವೆ. ಆದ್ದರಿಂದ ರೈತರಿಗೆ ಸರಿಯಾದ ರೀತಿಯಲ್ಲಿ ನಿಗದಿಯಾಗಿರುವ ಬೆಲೆಗಳನ್ನು ನೀಡಬೇಕೆಂದು ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಸೂಚಿಸಿದರು.

    Join Our Whatsapp Group

    ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಬ್ಬು ಕಾರ್ಖಾನೆಯ ನಿರ್ವಾಹಕರು ಮತ್ತು ರೈತ ಮುಖಂಡರ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಜಿಲ್ಲೆಯಲ್ಲಿ ರೈತರಿಗಾಗುತ್ತಿರುವ ತೊಂದರೆಗಳ ಕುರಿತು ಸಭೆಯಲ್ಲಿ ಚರ್ಚಿಸಿದರು. ರೈತರು ಬೆಳೆಯುತ್ತಿರುವ ಕಬ್ಬಿಗೆ ಉತ್ತಮವಾದ ಬೆಲೆ ಸಿಗದೆ ರೈತರು ಸಂಕಷ್ಟಕ್ಕೇ ಇಡಾಗುತ್ತಿದ್ದಾರೆ. ಸರ್ಕಾರದಿಂದ ನಿಗದಿಯಾಗಿರುವ ಸಂಪೂರ್ಣ ಹಣವನ್ನು ರೈತರಿಗೆ ನೀಡಬೇಕೆಂದು ತಿಳಿಸಿದರು.

    ಕಬ್ಬಿನ ಕಟಾವಿನ ಸಂದರ್ಭದಲ್ಲಿ ರೈತರಿಗೆ ಆಗುತ್ತಿರುವ ನಷ್ಟವನ್ನು ಸರಿಪಡಿಸಲು ಕಾರ್ಖಾನೆಗಳಿಂದಲೇ ನೇರವಾಗಿ ಕಬ್ಬನ್ನು ಕಟಾವು ಮಾಡಿಕೊಳ್ಳುವಂತೆ ಸ್ಟೇಟ್ ಕಮಿಷನ್ ವರದಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.

    ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆಗಳ ದ್ವಿಪಕ್ಷ ಒಪ್ಪಂದದಲ್ಲಿ ಅಗತ್ಯವಾದ ಅಂಶಗಳನ್ನು ಸೇರಿಸಲು ಕ್ರಮವಹಿಸಲಾಗುವುದು ಮತ್ತು ಎಕ್ಸ್ ಫೀಲ್ಡ್ ರೀತಿ ರೈತರ ಜಮೀನಿನಲ್ಲಿ ಕಾರ್ಖಾನೆಯವರು ನೇರವಾಗಿ ಕಬ್ಬನ್ನು ಕಟಾವು ಮಾಡಬೇಕು. ಕಟಾವು ಸಂದರ್ಭದಲ್ಲಿ ರೈತರಿಗೆ ಆಗುತ್ತಿರುವ ನಷ್ಟವನ್ನು ತಪ್ಪಿಸಲು ಕಟಾವು ಮಾಡುವ ಲೇಬರ್ಸ್ ಗಳ ಜೊತೆ ಕಾರ್ಖಾನೆ ಮಾಲೀಕರು ಅಥವಾ ವ್ಯವಸ್ಥಾಪಕರು ನೇರವಾಗಿ ನಿಗದಿತವಾದ ಕೂಲಿಯೊಂದಿಗೆ ಒಪ್ಪಂದ ಮಾಡಿಕೊಂಡು ರೈತರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಿ ಎಂದು ತಿಳಿಸಿದರು.

    ಕಬ್ಬು ಬೆಳೆಗೆ ಸಂಬoಧಿಸಿದoತೆ ಸರ್ಕಾರದಿಂದ 150 ರೂಪಾಯಿ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದ್ದು ಆ ಹಣವನ್ನು ಸಂಬoಧಿತ ರೈತರ ಖಾತೆಗೆ ಶೀಘ್ರದಲ್ಲಿ ಜಮೆ ಮಾಡಬೇಕೆಂದು ಕಾರ್ಖಾನೆ ನಿರ್ವಾಹಕ ಮಂಡಳಿಗೆ ಸೂಚಿಸಲಾಯಿತು.

    ಸಭೆಯಲ್ಲಿ ರೈತ ಮುಖಂಡರುಗಳು ಮಾತನಾಡಿ ಒಂದು ಕಾರ್ಖಾನೆಯಿಂದ ಮತ್ತೊಂದು ಕಾರ್ಖಾನೆಗೆ 15 ಕಿಲೋಮೀಟರ್ ಅಂತರವನ್ನು ಒಳಗೊಂಡಿರಬೇಕು ಎಂಬ ಅಂಶವನ್ನು ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಪರಿಶೀಲಿಸದೆ ರೈತರಿಗೆ ತೊಂದರೆಗಳಾಗುತ್ತಿವೆ. ಕಬ್ಬಿನ ಬೆಳೆಯನ್ನು 12 ರಿಂದ 14 ತಿಂಗಳ ಒಳಗಡೆ ಕಟಾವು ಮಾಡಬೇಕಿದೆ ಆದರೆ ಕಟಾವಿನ ಸಂದರ್ಭದಲ್ಲಿ ಕೂಲಿ ಆಳುಗಳ ಕೊರತೆಯು ನಮಗೆ ಹೆಚ್ಚಿನದಾಗಿದೆ.
    ಕಬ್ಬು ಕಡಿದ ನಂತರದಲ್ಲಿ ಕಾರ್ಖಾನೆಗಳಿಂದ ನ್ಯಾಯಯುತವಾದ ಬೆಲೆಗಳು ದೊರೆಯುತ್ತಿಲ್ಲ, ರೈತರಿಗೆ ತುಂಬಾ ಸಮಸ್ಯೆಗಳಾಗುತ್ತವೆ. ನಿಯಮಾನಸಾರವಾಗಿ ಕಬ್ಬು ಖರೀದಿ ಮಾಡಿದ 14 ದಿನದ ಒಳಗಡೆ ರೈತರಿಗೆ ಹಣವನ್ನು ಪಾವತಿ ಮಾಡಬೇಕು ಅಧಿಕಾರಿಗಳ ನಿರ್ಲಕ್ಷದಿಂದ ತಿಂಗಳುಗಳಾದರೂ ಕೂಡ ರೈತರಿಗೆ ಕಬ್ಬಿನ ಹಣ ದೊರೆಯುತ್ತಿಲ್ಲ, ಮುಂದಿನ ದಿನಗಳಲ್ಲಿ ಪ್ರತಿ ಟನ್ ಕಬ್ಬಿಗೆ ಬಾಕಿ ಇರುವ 150 ಬೆಂಬಲ ಬೆಲೆಯನ್ನು ಕೂಡಲೇ ಪಾವತಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು

    ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವಕುಮಾರ್, ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಕುಮುದಾ ಅವರು ಸೇರಿದಂತೆ ವಿವಿಧ ತಾಲ್ಲೂಕಿನ ರೈತ ಮುಖಂಡರು ಭಾಗವಹಿಸಿದ್ದರು.

    ಹಿಂದಿನ ಲೇಖನಕಬಿನಿ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಳ: ನದಿಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ
    ಮುಂದಿನ ಲೇಖನವಿಜಯಪುರ: ಭಾರಿ ಮಳೆಗೆ ಮನೆ ಮೇಲ್ಛಾವಣಿ ಕುಸಿದು ವೃದ್ಧೆ ಸಾವು