ಮನೆ ಸ್ಥಳೀಯ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಉಚಿತವಾಗಿ ನೀಡಿ: ರೈತರ ಒತ್ತಾಯ

ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಉಚಿತವಾಗಿ ನೀಡಿ: ರೈತರ ಒತ್ತಾಯ

0

ಮೈಸೂರು: ತೀವ್ರ ಬರಗಾಲದ ಆರ್ಥಿಕ  ಸಂಕಷ್ಟದಲ್ಲಿರುವ ರೈತರಿಗೆ ಕೃಷಿ ಚಟುವಟಿಕೆ ಮಾಡಲು ಬಿತ್ತನೆ ಬೀಜ, ರಸಗೊಬ್ಬರ  ಉಚಿತವಾಗಿ ನೀಡಬೇಕು, ಅರ್ ಟಿ ಸಿ ಗೆ ಆಧಾರ್ ಲಿಂಕ್ ಮಾಡುವುದನ್ನು ಸರಳೀಕರಣಗೊಳಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

Join Our Whatsapp Group

 ಮೈಸೂರು ತಾಲೂಕಿನ ರೈತರು ಬರಗಾಲ ಸಂಕಷ್ಟದಲ್ಲಿದ್ದು ಕೃಷಿ ಚಟುವಟಿಕೆ ನಡೆಸಲು ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದಾರೆ. ಬರ ಪರಿಹಾರದ ಹಣ ಎಲ್ಲಾ ರೈತರಿಗೂ ಸಿಗುವಂತಾದರೆ ಈ ಸಂದಿಗ್ಧ ಪರಿ ಸ್ಥಿತಿಯಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ರೈತರ ಹಿತ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಸರ್ಕಾರ ಘೋಷಣೆ ಮಾಡಿದ ಕಬ್ಬಿನ ಹೆಚ್ಚುವರಿ ದರ ಟನ್ ಕಬ್ಬಿಗೆ 150 /- ರೂ  ಬಣ್ಣಾರಿ ಸಕ್ಕರೆ ಕಾರ್ಖಾನೆ ರೈತರಿಗೆ ಇನ್ನೂ ಪಾವತಿ ಮಾಡಿಲ್ಲ ಈ ಬಗ್ಗೆ ತಾಲೂಕಿನ ಕಬ್ಬು ಬೆಳೆಗಾರ ರೈತರಿಗೆ ಹಣ ಕೊಡಿಸುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕು. ಇತ್ತೀಚೆಗೆ ಭಾರಿ ಮಳೆ ಗಾಳಿಯಿಂದ.ತಾಲೂಕಿನ ರೈತರ ಬಾಳೆ, ಕಬ್ಬು ಮಾವು ಮತ್ತಿತರ ಬೆಳೆಗಳು ತುಂಬಾ ಹಾನಿಯಾಗಿದೆ ಈ ಬಗ್ಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಸಮೀಕ್ಷೆ ನಡೆಸಿ ನ್ಯಾಯಯುತ ಪರಿಹಾರ ಹಣ ಸಮರ್ಪಕವಾಗಿ ರೈತರಿಗೆ ಕೊಡಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಮುಂಗಾರು ಮಳೆ ಆರಂಭವಾಗುತ್ತಿರುವ ಕಾರಣ ತಾಲೂಕಿನ ಎಲ್ಲಾ ಕೆರೆಗಳ ಕಾಲುವೆಗಳ ಊಳೆತ್ತುವ ಕಾರ್ಯ ಸಮರೋಪಾದಿಯಲ್ಲಿ ಕೈಗೊಂಡು ಕೆರೆ ಕಟ್ಟೆ ತುಂಬಲು ಹಾಗೂ ಕೃಷಿ ಪಂಪ್ ಸೆಟ್ ಅಂತರ್ಜಲ ವೃದ್ಧಿಯಾಗಲು ಸಹಕಾರಿಯಾಗುತ್ತದೆ. ಬರ ಪರಿಹಾರ ಜಂಟಿ ಖಾತೆದಾರ ರೈತರಿಗೆ.ಬಗರ್ ಹುಕುಂ ಸಾಗುವಳಿ ರೈತರಿಗೆ ಪರಿಹಾರ ಸಿಕ್ಕಿಲ್ಲ ಇವರಿಗೂ ಪರಿಹಾರ ಸಿಗುವಂತಾಗಬೇಕು. ಬ್ಯಾಂಕುಗಳು ಸರ್ಕಾರದ ಪರಿಹಾರದ ಹಣ ರೈತರ ಸಾಲದ ಖಾತೆಗೆ ಜಮಾ ಮಾಡಿಕೊಳ್ಳುವುದನ್ನು ತಪ್ಪಿಸಬೇಕು, ಎಲ್ಲ ಬ್ಯಾಂಕುಗಳ ಮುಂದೆ ರೈತರಿಗೆ ಸಿಗುವ ಸಾಲ ಸೌ ಲ ಭ್ಯ ಬಿತ್ತಿ ಫಲಕಗಳನ್ನು ಹಾಕಬೇಕು. ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ವಸುಲಾತಿಗಾಗಿ ಹಣ ವಸೂಲಿ ಗೂಂಡಾಗಳ ಹಾವಳಿಗೆ ನಿಯಂತ್ರಣ ಹಾಕಬೇಕು. ಎನ್ ಆರ್ ಇ ಜಿ ಕಾಮಗಾರಿ ಹಣ ಬಿಡುಗಡೆ ಮಾಡಲು ತುರ್ತು ಕ್ರಮ ಕೈಗೊಳ್ಳಬೇಕೆಂದು ತಾಲೂಕು ಆಡಳಿತವನ್ನು ಒತ್ತಾಯಿಸಿದರು.

ಇಂದಿನ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್ ಪ್ರಧಾನ ಕಾರ್ಯದರ್ಶಿ ಕಾಟೂರು ಮಾದೇವಸ್ವಾಮಿ ವರಕೋಡು ನಾಗೇಶ್,ಸಂಘಟನಾ ಕಾರ್ಯದರ್ಶಿ ಗಿರೀಶ್, ನಂಜುಂಡಸ್ವಾಮಿ, ಸಿದ್ದರಾಮ, ಪ್ರಕಾಶ್, ಸೋಮು, ಮುಖಂಡರಗಳಾದ ಶ್ರೀಕಂಠ ನಾಗೇಶ್, ಶಿವಣ್ಣ, ಚೋರನಹಳ್ಳಿ ಪುಟ್ಟಸ್ವಾಮಿ, ಮಾರ್ಬಳ್ಳಿ ಗುಂಡು ಬಸವರಾಜು ಹಾಜರಿದ್ದರು.

ಹಿಂದಿನ ಲೇಖನಬೆಂಗಳೂರಿಗೆ ಬರಲು ವಿಮಾನ ಟಿಕೆಟ್ ಕಾಯ್ದಿರಿಸಿದ ಪ್ರಜ್ವಲ್ ರೇವಣ್ಣ
ಮುಂದಿನ ಲೇಖನಪತ್ನಿಯ ಕತ್ತು ಕತ್ತರಿಸಿ ದೇಹದ ಚರ್ಮ ಸುಲಿದು, ಅಂಗಾಂಗಗಳನ್ನು ತುಂಡಾಗಿ ಕತ್ತರಿಸಿದ ವ್ಯಕ್ತಿ