ರಾಬರ್ಟ್ ಲೀ ಕಾನ್ಛಿಡರೇಟ್ ಸೈನ್ಯದ ಮಹಾ ನಾಯಕರಾಗಿದ್ದರು. ಅವರು ಒಮ್ಮೆ ತಮ್ಮ ಅಧಿಕಾರಿಗಳು ಹಾಗು ಸೈನಿಕರೊಂದಿಗೆ ಟ್ರೇನಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಟ್ರೇನ್ ಒಂದು ನಿಲ್ದಾಣದಲ್ಲಿ ನಿಂತಿತು. ಆಗ ಒಬ್ಬ ಬಡ ಹೆಂಗಸು ಹತ್ತಿದಳು. ಅಲ್ಲಿ ಖಾಲಿ ಸ್ಥಳವಿರಲಿಲ್ಲ. ಯಾರೂ ಅವಳಿಗೆ ಸೀಟು ನೀಡುವ ಗೋಜಿಗೆ ಹೋಗಲಿಲ್ಲ. ಅವಳನ್ನು ನೋಡಿದ ರಾಬರ್ಟ್ ತಮ್ಮ ಸೀಟನ್ನು ಅವಳಿಗೆ ನೀಡಿದರು. ಕೂಡಲೇ ಎಲ್ಲರೂ ತಮ್ಮ ಸೀಟನ್ನು ರಾಬರ್ಟ್‌ಗೆ ನೀಡಲು ಮುಂದಾಗಿ ಎದ್ದು ನಿಂತರು. ಲೀ ಅವರಿಗೆ ಏನೋ ಹೇಳಿದರು. ಅದನ್ನು ಕೇಳಿ ಅವರೆಲ್ಲಾ ತಲೆ ತಗ್ಗಿಸಿದರು.
ಪ್ರಶ್ನೆಗಳು
1. ಅವರು ಸೈನಿಕರಿಗೆ ಮತ್ತು ಅಧಿಕಾರಿಗಳಿಗೆ ಏನು ಹೇಳಿದರು?
2. ಈ ಕಥೆಯ ನೀತಿಯೇನು?
ಉತ್ತರಗಳು
1. “ಮಹನೀಯರೇ, ನಿಮಗೆ ಒಬ್ಬ ಬಡ ಹೆಂಗಸಿಗೆ ಸೀಟು ನೀಡಲಾಗದಿದ್ದರೆ ನಾನೂ ನಿಮ್ಮಿಂದ ಸೀಟನ್ನು ಒಪ್ಪಲಾರೆ.” ಎಂದರು.
2. ರಾಬರ್ಟ್‌ರ ವಿನಮ್ರತೆ ಮತ್ತು ಉದಾರಿತನ ಬಹಳ ಶ್ಲಾಘನೀಯ. ನಿಸ್ವಾರ್ಥ ಹಾಗೂ ತ್ಯಾಗದಿಂದ ಅನಂತಾನಂದ ಲಭಿಸುತ್ತದೆ. ನಾವು ಇತರರಿಗಾಗಿ ನಮ್ಮ ಅನುಕೂಲವನ್ನು ತ್ಯಾಗ ಮಾಡಿದಾಗ ಶಾಶ್ವತವಾದ ಸಂತೋಷ ದೊರಕುತ್ತದೆ. ವ್ಯಕ್ತಿಯ ಸಾಮಾಜಿಕ ಅಂತಸ್ತನ್ನು ನೋಡಿ ಒಳ್ಳೆಯ ಕೆಲಸಮಾಡಬಾರದು.