ಮನೆ ಪ್ರವಾಸ ಭಾರತದಲ್ಲಿನ ಗಾಜಿನ ಸೇತುವೆ

ಭಾರತದಲ್ಲಿನ ಗಾಜಿನ ಸೇತುವೆ

0

ಸೇತುವೆಗಳು ಎಂದಾಕ್ಷಣ ನಮಗೆ ವಿದೇಶಗಳು ನೆನಪಿಗೆ ಬರುವುದು ಸಾಮಾನ್ಯ. ಆದರೆ ನಮ್ಮದೇ ದೇಶದಲ್ಲಿರುವ ಸೇತುವೆಗಳ ಬಗ್ಗೆ ಮಾಹಿತಿಯೇ ತಿಳಿದಿರುವುದಿಲ್ಲ. ಉಸಿರುಗಟ್ಟಿಸುವ ಅದ್ಭುತ ಸೇತುವೆ ಇರುವುದು ಬೇರೆಲ್ಲೂ ಅಲ್ಲ, ಬಿಹಾರ ರಾಜ್ಯದಲ್ಲಿ. ಬಿಹಾರ ರಾಜ್ಯದಲ್ಲಿ ಗಾಜಿನ ಸೇತುವೆ ಇದೆ.

ಭಾರತದ ಎರಡನೇ ಅತಿದೊಡ್ಡ ಗಾಜಿನ ಸೇತುವೆ

ಬಿಹಾರದಲ್ಲಿರುವ ಈ ರಾಜ್’ಗೀರ್ ಗಾಜಿನ ಸೇತುವೆ ಬಿಹಾರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಚೀನಾದ ಹ್ಯಾಂಗ್ಝೌ ಸೇತುವೆಯನ್ನು ನೋಡಿದ ನಂತರ ಈ ರಾಜಗೀರ್’ನ ಗಾಜಿನ ಸೇತುವೆಯನ್ನು ನಿರ್ಮಿಸಲಾಗಿದೆ.

ವಿಶ್ವದಲ್ಲಿ ಕೆಲವೇ ಕೆಲವು ದೇಶಗಳಲ್ಲಿ ಮಾತ್ರ ಗಾಜಿನ ಸೇತುವೆಗಳನ್ನು ನೀವು ನೋಡಬಹುದು. ಅವುಗಳಲ್ಲಿ ಬಿಹಾರದ ರಾಜ್’ಗೀರ್ ನ ಗಾಜಿನ ಸೇತುವೆ ಕೂಡ ಒಂದು. ಇದು ಭಾರತದ ಎರಡನೇ ಅತಿದೊಡ್ಡ ಗಾಜಿನ ಸೇತುವೆ ಎಂಬುದು ನಿಮಗೆ ತಿಳಿದಿರಲಿ. ಈ ಸೇತುವೆಯ ಮೇಲೆ ನಿಂತಾಗ ಎದೆ ಝಲ್ ಎನ್ನಿಸುವ ಅನುಭವ ಉಂಟಾಗದೇ ಇರದು.

ಸೇತುವೆಯ ವೈಶಿಷ್ಟ್ಯತೆ

ಇನ್ನು, ಈ ಗಾಜಿನ ಸೇತುವೆಯ ವೈಶಿಷ್ಟ್ಯತೆಯ ಬಗ್ಗೆ ನಾವು ನಿಮಗೆ ಹೇಳಲೇಬೇಕು. ಇದು 200 ಅಡಿ ಎತ್ತರ, 6 ಅಡಿ ಅಗಲವನ್ನು ಹೊಂದಿದೆ. ಸೇತುವೆಯನ್ನು ಬಹಳ ಗಟ್ಟಿಯಾಗಿ ನಿರ್ಮಿಸಲಾಗಿದೆ. ಇದು ಗಾಜಿನ ಸೇತುವೆಯಾಗಿರುವ ಕಾರಣ ಈ ಸೇತುವೆಯ ಮೇಲೆ 40ಕ್ಕೂ ಹೆಚ್ಚು ಮಂದಿ ನಿಲ್ಲಬಹುದಾದ ಸಾಮರ್ಥ್ಯ ಹೊಂದಿದೆ. ಇಂತಹ ಅದ್ಭುತವಾದ ಸೇತುವೆಯನ್ನು ನೀವು ಬಿಹಾರದ ಪ್ರವಾಸದಲ್ಲಿ ತಪ್ಪಿಸಬಾರದು.

ರಾಜಗೀರ್ ಸೇತುವೆ

ಸೇತುವೆಗಳು ನಿಜಕ್ಕೂ ಮೈನವಿರೇಳಿಸುತ್ತದೆ. ಹಾಗೆಯೇ ಈ ರಾಜಗೀರ್ ಸೇತುವೆಯು ಕೂಡ ದಟ್ಟವಾದ ಕಾಡಿನ ನಡುವೆ ನಿರ್ಮಿಸಲಾಗಿದೆ. ಈಗಾಗಲೇ ಹೇಳಿದಂತೆ ಸೇತುವೆಯು ಸುಮಾರು 200 ಅಡಿ ಎತ್ತರದಲ್ಲಿದೆ. ಬಿಹಾರದ ವಿಹಂಗಮ ನೋಟವನ್ನು ಒಮ್ಮೆ ಕಣ್ತುಂಬಿಕೊಳ್ಳಬಹುದು.

ಇದಲ್ಲದೆ, ನೀವು ಸೈಕ್ಲಿಂಗ್, ಜೀಪ್ ಸ್ಕೈ ಬುಕಿಂಗ್ ಮತ್ತು ವಾಲ್ ಕ್ಲೈಂಬಿಂಗ್ , ರಾಜಗೀರ್ ಮೃಗಾಲಯದಂತಹ ಸಾಹಸ ಚಟುವಟಿಕೆಗಳನ್ನು ಅಂತ್ಯವಿಲ್ಲದೇ ಆನಂದಿಸಬಹುದು.

ರಾಜ್ ಗೀರ್ ಗಾಜಿನ ಸೇತುವೆಯ ಪ್ರವೇಶ ಶುಲ್ಕವೆಷ್ಟು?

ಹೌದು, ಬಿಹಾರದ ಈ ಅದ್ಭುತವಾದ ಗಾಜಿನ ಸೇತುವೆಯ ಮೇಲೆ ನಿಂತು ಥ್ರಿಲ್ಲಿಂಗ್ ಅನುಭವ ಪಡೆಯಲು ಪ್ರವೇಶ ಶುಲ್ಕವನ್ನು ಪಾವತಿಸಲೇಬೇಕು. ಈ ಸುಂದರವಾದ ಸ್ಥಳಕ್ಕೆ ಭೇಟಿ ನೀಡಲು ನೀವು ಕೇವಲ 200 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಗಾಜಿನ ಸೇತುವೆಗೆ ಹೋಗಲು ಪ್ರವೇಶ ಶುಲ್ಕ 50 ರೂ, ಆದರೆ ಈ ಸೇತುವೆಯ ಮೇಲೆ ನಡೆಯಲು ನೀವು ರೂ 150 ಪಾವತಿಸಬೇಕಾಗುತ್ತದೆ.

ಹಾಗೆಯೇ, ಈ ಸೇತುವೆಗೆ ಭೇಟಿ ನೀಡಲು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಹೋಗಬಹುದಾಗಿದೆ.

ಬುಕ್ ಮಾಡಬೇಕು

ನಿಮಗಿದು ತಿಳಿದಿರಲಿ, ಗಾಜಿನ ಸೇತುವೆಯ ಸೌಂದರ್ಯವನ್ನು ಸವಿಯಲು ಈ ಮೊದಲೇ ಅಧಿಕೃತ ವೆಬ್ ಸೈಟಿಗೆ ಹೋಗುವ ಮೂಲಕ ಬುಕ್ ಮಾಡಬೇಕು.

ನೀವು https://rajgirzoosafari.bihar.gov.in/website/ ಗೆ ಭೇಟಿ ನೀಡುವ ಮೂಲಕ ಟಿಕೆಟ್ ಗಳನ್ನು ಬುಕ್ ಮಾಡಬಹುದು.