ಮನೆ ರಾಜ್ಯ ಗೋ ಬ್ಯಾಕ್ ಪೋಸ್ಟರ್: ಆರೋಪ ಸಾಬೀತಾದರೆ ನಾಮಪತ್ರ ಸಲ್ಲಿಸುವುದಿಲ್ಲ ಎಂದ ಸುನೀಲ್ ಬೋಸ್

ಗೋ ಬ್ಯಾಕ್ ಪೋಸ್ಟರ್: ಆರೋಪ ಸಾಬೀತಾದರೆ ನಾಮಪತ್ರ ಸಲ್ಲಿಸುವುದಿಲ್ಲ ಎಂದ ಸುನೀಲ್ ಬೋಸ್

0

ಚಾಮರಾಜನಗರ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ಬೆಳಿಗ್ಗೆ ಕೆಲವೆಡೆ ಮರಳು ಮಾಫಿಯಾದ ಅನಭಿಷಿಕ್ತ ದೊರೆ ಗೋ ಬ್ಯಾಕ್ ಎಂಬ ಪೋಸ್ಟರ್‌ಗಳು ಕಂಡು ಬಂದವು.

Join Our Whatsapp Group

ಮರಳು ಮಾಫಿಯಾದವರಿಗೆ ಮರಳಾಗಬೇಡಿ ಎಂಬ ಶೀರ್ಷಿಕೆಯಲ್ಲಿ ಮಂಗಳವಾರ ತಡರಾತ್ರಿ ಅಪರಿಚಿತರು ಪೋಸ್ಟರ್‌ಗಳನ್ನು ನಗರದ ಭುವನೇಶ್ವರಿ ವೃತ್ತ, ಜೋಡಿ ರಸ್ತೆ ಹಾಗೂ ಸಂತೆಮರಹಳ್ಳಿ ರಸ್ತೆಯ ಬದಿಗಳಲ್ಲಿ ಅಂಟಿಸಿದ್ದರು. ಈ ಪೋಸ್ಟರ್ ಗಳಲ್ಲಿ ಹಸ್ತದ ಚಿಹ್ನೆಯನ್ನು ತಲೆಕೆಳಕಾಗಿ ಹಾಕಿ ಎಕ್ಸ್‌ ಮಾರ್ಕ್ ಬರೆಯಲಾಗಿದೆ.

ಈ ವಿಷಯ ಪೊಲೀಸರಿಗೆ ತಿಳಿದು ನಂತರ ಆ ಪೋಸ್ಟರ್ ಗಳನ್ನು ತೆರವುಗೊಳಿಸಿದರು.

ಸಾಮಾಜಿಕ ಜಾಲತಾಣದಿಂದ ದೂರು: ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಮೈಸೂರು ಗ್ರಾಮಾಂತರ ವಿಭಾಗ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗದ ಹೇಮಂತ್‌ಕುಮಾರ್ ದೂರು ಸಲ್ಲಿಸಿದ್ದಾರೆ. ಅಭ್ಯರ್ಥಿ ಸುನಿಲ್ ಬೋಸ್ ಅವರ ವ್ಯಕ್ತಿತ್ವ ಹರಣ ಮತ್ತು ಅಪಪ್ರಚಾರ ಮಾಡುವ ಪೋಸ್ಟರ್ ಗಳನ್ನು ಹಾಕಿರುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ದೂರು ದಾಖಲಿಸಿದ್ದಾರೆ.

ಆರೋಪ ಸಾಬೀತಾದರೆ ನಾಮಪತ್ರ ಸಲ್ಲಿಸುವುದಿಲ್ಲ: ಈ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅಭ್ಯರ್ಥಿ ಸುನೀಲ್ ಬೋಸ್, ಬಿಜೆಪಿಯವರು ಹತಾಶರಾಗಿದ್ದಾರೆ

ನನ್ನ ಮೇಲಿಕ ಪ್ರಕರಣ ಹೈ ಕೋರ್ಟ್‌ನಲ್ಲಿ ವಜಾ ಆಗಿ ಕ್ಲೀನ್ ಚಿಟ್ ಸಿಕ್ಕಿದೆ. ನಾನು ನಿರ್ದೋಷಿ ಎಂದು ತೀರ್ಪು ನೀಡಿದೆ. ನನ್ನ ಮೇಲಿನ ಆರೋಪ ಸಾಬೀತು ಮಾಡಿದರೆ ನಾಮಪತ್ರ ಸಲ್ಲಿಸುವುದಿಲ್ಲ ಎಂದು ಸವಾಲು ಹಾಕಿದರು.

ಬಿಜೆಪಿಯವರಿಗೆ ಬೇರೆ ವಿಷಯಗಳಿಲ್ಲ. ಯಾರ ಮೇಲೂ ವೈಯಕ್ತಿಕ ಟೀಕೆ ಮಾಡಬಾರದೆಂದು ಚುನಾವಣಾ ಆಯೋಗವೇ ಹೇಳಿದೆ. ಪೋಸ್ಟರ್ ಅಂಟಿಸಿದರವರ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ. ಇದು ಬೆಜೆಪಿಯವರ ಕೆಲಸ ಎಂದು ಆರೋಪಿಸಿದರು.

ಹಿಂದಿನ ಲೇಖನಮೋದಿ ಪ್ರಧಾನಿಯಾದರೆ ದೇಶ ತೊರೆಯುತ್ತೇನೆ ಎಂದಿದ್ದ ದೇವೇಗೌಡರು‌ ಈಗ ಮೋದಿಗೂ‌ ತಮಗೂ‌ ಅವಿನಾಭಾವ ಸಂಬಂಧ ಇದೆ ಎನ್ನುತ್ತಿದ್ದಾರೆ: ಸಿಎಂ ವ್ಯಂಗ್ಯ
ಮುಂದಿನ ಲೇಖನಮೈಸೂರು ಅನಂತಸ್ವಾಮಿ ಸಂಯೋಜನಾ ಧಾಟಿಯಲ್ಲಿನ ನಾಡಗೀತೆ ಖಾಸಗಿ ಶಾಲೆಗಳಿಗೂ ಅನ್ವಯ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ