ಭ್ರಮರಾಂಬಿಕೆ ದೇವಿಯೇ ವರವ ನೀಡಮ್ಮ ।
ನಂದಿನಿಯ ಕಟಿಯಲ್ಲಿ ನೆಲೆಸಿದ ನಮ್ಮಮ್ಮ ।
ಶ್ರೀಗಂಧ ಪ್ರಸಾದ ನೀಡಿ ಆನಂದ ನೀಡಮ್ಮ ।।೧।।
ಪುಣ್ಯವಾಹಿನಿ ನಂದಿನಿಯಲ್ಲಿ ಮಿಂದು ಬಂದಿರುವೆ ।
ಕಟೀಲೇಶ್ವರಿ ಪೂಜೆಗೆಂದು ಮಲ್ಲಿಗೆ ತಂದಿರುವೆ ।
ಬಡವರ ಭಾಗ್ಯದ ನಿಧಿಯೇ ದೇವಿ ಭ್ರಮರಾಂಬೆ ತಾಯೆ ।
ಬದುಕಿನ ಕಷ್ಟವ ಕಳೆದು ಇಷ್ಟವ ನೀಡಮ್ಮ ತಾಯೆ ।।೨।।
ಬಂಗಾರದ ಪೀಠವನೇರಿದ ಭುವನೇಶ್ವರಿ ತಾಯೆ ।
ಶ್ರೀ ಗಂಧ ಹೂವಿನ ಪೂಜೆಯ ಪಡೆವ ಮಹಾಮಾಯೆ ।
ಶಕ್ತಿ ರೂಪಿಣಿ ಸಿಂಹವಾಹಿನಿ ಪರಮೇಶ್ವರಿ ತಾಯೆ ।
ತ್ರಿಭುವನ ಜನನಿ ಕರುಣ ಭರಣಿ ವರದಾಯಿನಿಯೇ ।।೩।।