ಬೆಳಗಾವಿ: ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಕಾರ್ಯಕ್ರಮ ಇಂದು ಮತ್ತು ನಾಳೆ ನಡೆಯಲಿದ್ದು ಈ ಮಧ್ಯೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಬಿಜೆಪಿಯವರಿಗೆ ಗೂಡ್ಸೆಯೇ ಆದರ್ಶ. ಗೂಡ್ಸೆಯನ್ನ ಮಹಾನಾಯಕನನ್ನಾಗಿ ಮಾಡಲು ಬಿಜೆಪಿಗರು ಹೊರಟಿದ್ದಾರೆ. ಗೂಡ್ಸೆಯ ಪುಸ್ತಕಗಳನ್ನ ಹಂಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.