ಬೆಂಗಳೂರು : ಗಿರಿನಗರದ ಇಂಡಿಯನ್ ಬ್ಯಾಂಕ್ ಸಹಾಯಕ ಮ್ಯಾನೇಜರ್ ಕಿರಣ್ ಕುಮಾರ್ ಗ್ರಾಹಕರಿಗೆ ಸೇರಿದ್ದ, 2 ಕೆಜಿ 787 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾನೆ.
ಕಳೆದ ಜೂನ್ ನಲ್ಲಿ ಇಂಡಿಯನ್ ಬ್ಯಾಂಕ್ಗೆ ವರ್ಗ ಆಗಿ ಬಂದಿದ್ದ ಸಹಾಯಕ ವ್ಯವಸ್ಥಾಪಕ ಕಿರಣ್ ಕುಮಾರ್ ಗೆ ಆನ್ಲೈನ್ ಬೆಟ್ಟಿಂಗ್ ಆಡುವ ಚಟ ಇತ್ತು. ಆದ್ದರಿಂದ ಹಣಕ್ಕಾಗಿ ತನ್ನ ಬ್ಯಾಂಕ್ನ ಸೇಫ್ ಲಾಕರ್ನಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾನೆ.
ಚಿನ್ನಾಭರಣ ಇರಿಸಿದ್ದ ಸೇಫ್ಟಿ ಲಾಕರ್ನ ಕೀಗಳು ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಬಳಿ ಇತ್ತು. ಮ್ಯಾನೇಜರ್ ಇಲ್ಲದ ವೇಳೆ ಅಸಿಸ್ಟೆಂಟ್ ಮ್ಯಾನೇಜರ್ ಕಿರಣ್ ಕುಮಾರ್ ಕೀ ಬಳಸಿ ಹಂತ ಹಂತವಾಗಿ ಚಿನ್ನಾಭರಣ ಕಳವು ಮಾಡಿದ್ದಾನೆ.
ಹಾಗೇ ಕದ್ದ ಚಿನ್ನವನ್ನು ವಿವಿಧ ಫೈನಾನ್ಸ್ ಕಂಪನಿಗೆ ಮಾರಿ ಹಣ ಪಡೆದು ಆನ್ಲೈನ್ ಜೂಜಾಟ ಆಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಕೊಂಡ ಪೊಲೀಸರು, ಅಸಿಸ್ಟೆಂಟ್ ಮ್ಯಾನೇಜರ್ನ ಬಂಧಿಸಿ 700 ಗ್ರಾಂ ಚಿನ್ನ ರಿಕವರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.














