ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಶರವಣ ಮಾಲೀಕತ್ವದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನ ಚಿನ್ನ ಕಳುವಾಗಿದೆ. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಸಂಸ್ಥೆಯಲ್ಲಿ ಮ್ಯಾನೇಜರ್ ಭೀಮರಾಜು ನೌಕರ ಭರತ್ ಕುಮಾರ್ ರಾವಲ್ ಎಂಬುವವರಿಗೆ ಸಂಸ್ಥೆಯ ಪರವಾಗಿ ಚಿನ್ನಾಭರಣಗಳಿಗೆ ಹಾಲ್ ಮಾರ್ಕ್ ಮಾಡಿಸಿಕೊಂಡು ಬರಲು ಜನವರಿ 14 ರಂದು ಸಂಜೆ 05:30ರ ಸುಮಾರಿಗೆ 1 ಕೆಜಿ 249 ಗ್ರಾಂ ಚಿನ್ನದ ಬಳೆಗಳು (22 ಕ್ಯಾರೇಟ್) ಕೊಟ್ಟು ನಗರತ್ ಪೇಟೆಯಲ್ಲಿನ ಭರತ್ ಚಾಟಡ್ರವರ ಮಾಲೀಕತ್ವದ ಕೋನಾರ್ಕ್ ಹಾಲ್ ಮಾರ್ಕಿಂಗ್ ಮತ್ತು ಆಸೆಯಿಂಗ್ ಸೆಂಟರ್ಗೆ ಕಳುಹಿಸಿದ್ದಾರೆ.
ಭರತ್ ಕುಮಾರ್ ಬಂಗಾರದ ಬಳೆಗಳನ್ನು ಭರತ್ ಚಾಟಡ್ಗೆ ಕೊಟ್ಟಿದ್ದು, ಪ್ಯಾಕಿಂಗ್ ಲಿಸ್ಟ್ ಎಂಬ ಹೆಸರಿನಲ್ಲಿ ರಸೀದಿ ನೀಡಿದ್ದಾರೆ. ಮರುದಿನ ಜನವರಿ 15 ರಂದು ಭರತ್ ಚಾಟಡ್ ಬಳಿ ಹೋಗಿ ಹಾಲ್ ಮಾರ್ಕಿಂಗ್ಗಾಗಿ ಕೊಟ್ಟಿದ್ದ ಚಿನ್ನದ ಬಳೆಗಳನ್ನು ವಾಪಸ್ ನೀಡಿ ಎಂದು ಮ್ಯಾನೇಜರ್ ಭೀಮರಾಜು ಕೇಳಿದ್ದಾರೆ.
ಆಗ, ಭರತ್ ಚಾವಡ್ “ನೀವು ನೀಡಿದ್ದ ಎಲ್ಲ ಚಿನ್ನದ ಬಳೆಗಳನ್ನು ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಕೆಲಸಗಾರ ಕಳ್ಳತನ ಮಾಡಿಕೊಂಡು ಹೋಗಿದ್ದಾನೆ” ಎಂದು ಹೇಳಿದ್ದಾರೆ. ಈ ಸಂಬಂಧ ಹಾಲ್ ಮಾರ್ಕ್ ಸೆಂಟರ್ ಮಾಲೀಕ ಭರತ್ ಚಟಡ್ ವಿರುದ್ಧ ದೂರು ದಾಖಲಿಸಿದ್ದಾರೆ.