‘ ಗೋ ’ಎಂದರೆ ಹಸು, ಆಕಳು; ‘ಮುಖ’ ಎಂದರೆ ಮೋರೆ ಆಸನದ ಭಂಗಿ, ಆಕಳಿನ ಮುಖದ ಆಕಾರವನ್ನು ತಡೆಯುವುದರಿಂದ ಇದಕ್ಕೆ ಈ ಹೆಸರು.ಅಲ್ಲದೇ ‘ಗೋಮುಖ’ ವೆಂಬುದು ಒಂದು ವಿಶೇಷ ಸಂಗೀತವಾದ್ಯ ಈ ವಾದ್ಯದ ಒಂದು ಕೊನೆ ಚಿಕ್ಕದಾಗಿದ್ದು ಇನ್ನೊಂದು ಕಡೆಗೆ ಬರಲಿರುವ ಅದು ವಿಶಾಲವಾಗಿ, ಆಕಳಿನ ಮುಖದಾಕಾರವನ್ನು ಹೊಂದಿರುತ್ತದೆ
ಅಭ್ಯಾಸ ಕ್ರಮ
ನೆಲದ ಮೇಲೆ ಕುಳಿತು, ಕಾಲುಗಳನ್ನು ನೇರವಾಗಿ ಮುಂಗಡೆಗೆ ಚಾಚಿಡಬೇಕು.
ಬಳಿಕ ಅಂಗೈಗಳೆರಡನ್ನೂ ನೆಲದ ಮೇಲೂರಿ ಆಸನವನ್ನು ಮೇಲೆತ್ತಬೇಕು.
ಆಮೇಲೆ ಎಡಮಂಡಿಯನ್ನು ಮಂಡಿಸಿ ಕಾಲನ್ನು ಹಿಮ್ಮುಖ ಮಾಡಿ, ಎಡಪಾದದ ಮೇಲೆ ಊರಿಟ್ಟು ಕುಳಿತುಕೊಳ್ಳಬೇಕು. ಬಳಿಕ ಕೈಗಳನ್ನು ನೆಲದಿಂದ ತೆಗೆದು, ಬಲಗಾಲನ್ನು ಮೇಲೆತ್ತಿ, ಬಲತೊಡೆಯು ಎಡತೊಡೆಯ ಮೇಲೆ ಬರುವಂತೆ ಅಳವಡಿಸಬೇಕು. ಅನಂತರ ವೃಷ್ಟಗಳನ್ನು ಮೇಲೆತ್ತಿ, ಕೈಗಳ ನೆರವಿನಿಂದ ಕಲ್ಗಿಣ್ಣುಗಳೂ ಮತ್ತು ಹಿಮ್ಮಡಿಯ ಹಿಂಬದಿಗಳೂ ಒಂದನ್ನೂಂದು ಮುಟ್ಟುವಂತೆ ಹೊಂದಿಸಬೇಕು.
ಅನಂತರ ಗಿಣ್ಣುಗಳನ್ನು ನೆಲೆ ನಿಲ್ಲಿಸಿ,ಕಾಲ್ಬೆರಳನ್ನು ಹಿಂದಕ್ಕೆ ತುದಿಮಾಡಿಡಬೇಕು.
ಇದಾದಮೇಲೆ ಎಡಗೈಯನ್ನು ತಲೆಯಮೇಲೆ ನೇರವಾಗಿ ಎತ್ತಿ, ಅದನ್ನು ಮೊಣಕೈಯಲ್ಲಿ ಭಾಗಿಸಿ, ಬೆನ್ನಹಿಂದೆ ತಂದು ಕತ್ತಿನ ಹಿಂಬದಿಯ ಭುಜಗಳ ನಡುತಾಣದ ಹೆಡೆಕನ್ನು ತಾಗುವಂತೆ ಅದನ್ನಿರಿಸಬೇಕು. ಈ ಬಲಗೈಯನ್ನು ತಗ್ಗಿಸಿ, ಬಳಿ ಬಾಗಿಸಿ, ಬಲದ ಮೇಲ್ದೋಳನ್ನು ಮೇಲೆಕ್ಕೆ ಸರಿ ಸಿಟ್ಟು, ಹೆಗಲೆಲುಬುಗಳ ಮಧ್ಯ ಭಾಗಕ್ಕೆ ಸರಿಯಾಗಿ ಪರಸ್ಪರ ಬಿಗಿ ಹಿಡಿಯುವಂತೆ ಮಾಡಬೇಕು.
ಈ ಭಂಗಿಯಲ್ಲಿ ಸಾಮಾನ್ಯ ಉಸಿರಾಟದಿಂದ, ಸುಮಾರು 30 40 ಸೆಕೆಂಡುಗಳ ಕಾಲ ನೆಲೆಸಬೇಕು ಆಗ ಕತ್ತು ಮತ್ತು ತಲೆ ಇದನ್ನು ನಿಲ್ಲಿಸಿ, ನೇರವಾಗಿ ಮುಂಗಡೆಗೆ ದಿಟ್ಟಿಸುತ್ತಿರಬೇಕು.
ಆಮೇಲೆ ಕೈಗಳನ್ನು ಬಿಗಿತದಿಂದ ಬೇರ್ಪಡಿಸಿ, ಇದೇ ಭಂಗಿಯನ್ನು ಇನ್ನೊಂದು ಕಡೆಯಲ್ಲಿಯೂ ಅಭ್ಯಸಿಸಬೇಕು. ಅಂದರೆ ಮೇಲಿನ ವಿವರಣೆಯಲ್ಲಿ ಬಲ ಎಡ ಪದಗಳನ್ನು ಕ್ರಮವಾಗಿ ಅಳವಡಿಸಿ ಅದರಂತೆ ಅಭ್ಯಾಸಕ್ರಮವನ್ನು ಅನುಸರಿಸಬೇಕು. ಭಂಗಿಗಳಲ್ಲಿ ನೆಲೆಸುವ ಕಾಲ ಎರಡು ಕಡೆಯಲ್ಲಯೂ ಸಮವಾಗಿರಬೇಕು.ಈ ಭಂಗಿಗಳನ್ನು ಮಾಡಿ ಮುಗಿಸಿದ ಬಳಿಕ ಬೆನ್ನ ಹಿಂಬದಿಯಲ್ಲಿ ಕಟ್ಟಿದ ಕೈಗಳನ್ನು ಬಿಚ್ಚಿ ಕಾಲುಗಳನ್ನು ಚಾಚಿಟ್ಟು ವಿಶ್ರಮಿಸಿಕೊಳ್ಳಬೇಕು.
ಪರಿಣಾಮಗಳು
ಈ ಆಸನವು ಕಾಲುಗಳಲ್ಲಿಯ ಪೇಡಸುತನವನ್ನು (ಬಿಗಿಹಿಡಿತ, cramps)ಹೋಗಲಾಡಿಸಿ, ಅವುಗಳಲ್ಲಿಯ ಮಾಂಸಖಂಡಗಳಲ್ಲಿ ಸ್ಥಿತಿ ಸ್ಥಾಪಕತ್ವವನ್ನು ಮೂಡಿಸುತ್ತದೆ. ಅಲ್ಲದೆ ಇದು ಎದೆಯ ಭಾಗವನ್ನು ಚೆನ್ನಾಗಿ ಹಿಗ್ಗಿತ್ತದೆ. ಬೆನ್ನನ್ನು ನೆಟ್ಟಗೆ ನಿಲ್ಲಿಸುತ್ತದೆ ಜೊತೆಗೆ ಹೆಗಲಿನ ಕೀಲುಗಳು ಸರಾಗವಾಗಿ ಚಲಿಸುವಂತಹ ಹೆಗಲುಗಳ ಮಧ್ಯಭಾಗದ ಬೆನ್ನುಕಡೆಯ ಮಾಂಸಖಂಡಗಳು ( Latissimus dorsi) ಹೆಚ್ಚು ಹಿಗ್ಗಲು ಈ ಭಂಗಿಯು ತುಂಬಾ ಸಹಕಾರಿಯಾಗಿದೆ.