ಮನೆ ಸುದ್ದಿ ಜಾಲ ಒಳ್ಳೆಯ ಕೆಲಸಗಳು ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತವೆ: ಚಿತ್ರನಟ ಶ್ರೀನಾಥ್‌

ಒಳ್ಳೆಯ ಕೆಲಸಗಳು ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತವೆ: ಚಿತ್ರನಟ ಶ್ರೀನಾಥ್‌

0

ಮೈಸೂರು(Mysuru): ಕೀರ್ತಿ ಮತ್ತು ಹಣವು ವ್ಯಕ್ತಿಯನ್ನು ಶ್ರೇಷ್ಠರನ್ನಾಗಿ ಮಾಡುವುದಿಲ್ಲ. ಒಳ್ಳೆಯ ಕೆಲಸಗಳು ಮಾತ್ರವೇ ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತವೆ ಎಂದು ಚಿತ್ರನಟ ಶ್ರೀನಾಥ್‌ ಹೇಳಿದರು.

ಇಲ್ಲಿನ ಕೆಎಸ್‌’ಒಯು ಘಟಿಕೋತ್ಸವ ಭವನದಲ್ಲಿ ಭಾನುವಾರ ನಡೆದ ಕೌಟಿಲ್ಯ ವಿದ್ಯಾಲಯದ ವಾರ್ಷಿಕೋತ್ಸವ, ‘ಕಿರಿಯರ ಕೀರ್ತಿಗೆ, ಹಿರಿಯರ ಸ್ಫೂರ್ತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಜೀವನ ಮೌಲ್ಯಗಳನ್ನು ಕಲಿಸಬೇಕು. ಅದು ಪೋಷಕರ ಆದ್ಯ ಕರ್ತವ್ಯವಾಗಿದೆ. ಶಾಲೆಗಳು ಕೂಡ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡುವ ಶಿಕ್ಷಣವನ್ನು ಒದಗಿಸಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ಉತ್ತಮ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹ ಪಠ್ಯ ಚಟುವಟಿಕೆಗಳ ಪಾತ್ರ ಅಪಾರವಾದುದು ಎಂದು ಮೇಯರ್‌ ಶಿವಕುಮಾರ್‌ ಹೇಳಿದರು.

ಗೀತಾ ಶ್ರೀನಾಥ್ ಪಾಲ್ಗೊಂಡಿದ್ದರು.

ಪೂರ್ವ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳ ಅಜ್ಜ–ಅಜ್ಜಿಯರಿಗೆ ರ್ಯಾಂಪ್ ವಾಕ್ ಮೊದಲಾದ ಚಟುವಟಿಕೆಗಳು ನಡೆದವು. ಪಾಲ್ಗೊಂಡಿದ್ದವರಿಗೆ ಸ್ಮರಣಿಕೆ ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಹಿಂದಿನ ಲೇಖನ2024ರ ಮಕರ ಸಂಕ್ರಮಣಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಮುಂದಿನ ಲೇಖನಎಂಥ ಅಂದ ಎಂಥ ಚಂದ ಶಾರದಮ್ಮ ನೀನು