Facebook Instagram Share Twitter Youtube
  • ಸುದ್ದಿ ಜಾಲ
    • ಅಂಕಣ
    • ಅಂತರಾಷ್ಟ್ರೀಯ
    • ಆಟೋ ಮೊಬೈಲ್
    • ಕೃಷಿ
    • ತಂತ್ರಜ್ಞಾನ
  • ವೀಡಿಯೋಗಳು
  • ರಾಜಕೀಯ
  • ಅಪರಾಧ
  • ಕಾನೂನು
  • ಕ್ರೀಡೆ
  • ಶಿಕ್ಷಣ
  • ಮನರಂಜನೆ
  • ಜ್ಯೋತಿಷ್ಯ
ಹುಡುಕಾಟ
Thursday, March 19, 2026
  • About Us
  • Contact us
Facebook Instagram Share Twitter Youtube
Saval News
  • ಸುದ್ದಿ ಜಾಲ
    • ಯುಗಾದಿ ಹಬ್ಬ – ಬೇರೆ ರಾಜ್ಯಗಳಲ್ಲಿ ಯುಗಾದಿ ಆಚರಣೆ ಹೇಗೆ..?
      ಯುಗಾದಿ ಸ್ಪೆಷಲ್‌ – ಬೇವು, ಬೆಲ್ಲ ಮಾಡುವ ವಿಧಾನ..!
      ಕೋರ್ಟ್ ಆದೇಶವಿದ್ರೂ ದರ್ಶನ್‌ಗೆ ಒಳ ಸಂದರ್ಶನಕ್ಕಿಲ್ಲ ಅವಕಾಶ – ಹೆಂಡ್ತಿ, ಮಗನ ಭೇಟಿ ಇಲ್ಲ..!
      ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆಯಾಗುತ್ತಿವೆ; ಮಧ್ಯವರ್ತಿಗಳಿಲ್ಲದೆ ಆಟೋ ಮ್ಯುಟೇಶನ್ – ಕೃಷ್ಣಭೈರೇಗೌಡ
      ‘ಧುರಂಧರ್-2’‌ ಸಿನಿಮಾ ಬಗ್ಗೆ ಮಾತನಾಡಿದ ಕೆನಡಾ ಪ್ರಧಾನಿ, ಫಿನ್‌ಲ್ಯಾಂಡ್‌ ಅಧ್ಯಕ್ಷ
      ಎಲ್ಲಾಅಂಕಣಅಂತರಾಷ್ಟ್ರೀಯಆಟೋ ಮೊಬೈಲ್ಕೃಷಿತಂತ್ರಜ್ಞಾನ
  • ವೀಡಿಯೋಗಳು
    • ಚುನಾವಣಾ ನಿಯಮ ತಿದ್ದುಪಡಿ ವಿಚಾರ: ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಮೂರು ವಾರಗಳ ಕಾಲಾವಕಾಶ
      ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್ ಸ್ಫೋಟ: ಟಿಎಂಸಿ ಕಾರ್ಯಕರ್ತ ಸಾವು
  • ರಾಜಕೀಯ
    • ಆಪರೇಷನ್‌ ಕಮಲದ ಭೀತಿ; ಬಿಡದಿ ರೆಸಾರ್ಟ್‌ಗೆ ಅಸ್ಸಾಂ ಕಾಂಗ್ರೆಸ್‌ ಶಾಸಕರು ಶಿಫ್ಟ್‌..!
      ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕರ ಗಲಾಟೆ; ಕೈಕೈ ಮಿಲಾಯಿಸುವ ಹಂತಕ್ಕೆ ಜಗಳ
      ಡಿಸಿಎಂ ಡಿಕೆಶಿ ಔತಣಕೂಟದಲ್ಲಿ ಸಿಎಂ ಸಿದ್ದರಾಮಯ್ಯ ರಾಜಿ ಸಂಧಾನ..!
      ಕೇಂದ್ರದ ಅನ್ಯಾಯದಿಂದ ಸಾಲದ ಹೊರೆ; ಸಾಲರಾಮಯ್ಯ ಎಂದ ಬಿಜೆಪಿಗೆ ತಿರುಗೇಟು – ಪ್ರಿಯಾಂಕ್ ಖರ್ಗೆ
      ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ – ಬಿ.ವೈ. ವಿಜಯೇಂದ್ರ
  • ಅಪರಾಧ
  • ಕಾನೂನು
  • ಕ್ರೀಡೆ
  • ಶಿಕ್ಷಣ
  • ಮನರಂಜನೆ
  • ಜ್ಯೋತಿಷ್ಯ
ಮನೆ ರಾಷ್ಟ್ರೀಯ ರೈಲು ಪ್ರಯಾಣಿಕರಿಗೆ ಗುಡ್​​​ ನ್ಯೂಸ್​: ಇನ್ಮುಂದೆ ರೈಲಿನಲ್ಲಿ ಊಟ ಉಚಿತ
  • ರಾಷ್ಟ್ರೀಯ
  • ಸುದ್ದಿ ಜಾಲ

ರೈಲು ಪ್ರಯಾಣಿಕರಿಗೆ ಗುಡ್​​​ ನ್ಯೂಸ್​: ಇನ್ಮುಂದೆ ರೈಲಿನಲ್ಲಿ ಊಟ ಉಚಿತ

February 2, 2026
0
Share
WhatsApp
Telegram
Facebook
Twitter
Email

    ಭಾರತೀಯ ರೈಲ್ವೆಯ ಪ್ರೀಮಿಯಂ ರೈಲುಗಳಾದ ರಾಜಧಾನಿ, ಶತಾಬ್ದಿ ಮತ್ತು ದುರಂತೋ ಎಕ್ಸ್‌ಪ್ರೆಸ್‌ಗಳಲ್ಲಿ ಪ್ರಯಾಣಿಸುವವರಿಗೆ ಒಂದು ವಿಶೇಷ ಸೌಲಭ್ಯವಿದೆ. ಇತ್ತೀಚೆಗೆ ರಾಜಧಾನಿ ಎಕ್ಸ್‌ಪ್ರೆಸ್ 6 ಗಂಟೆ ವಿಳಂಬವಾದಾಗ ಪ್ರಯಾಣಿಕರೊಬ್ಬರಿಗೆ ಉಚಿತ ಊಟ ದೊರೆತ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಭಾರತೀಯ ರೈಲ್ವೆಯ ಆಹಾರ ಪೂರೈಕೆ ನೀತಿಯ ಅಡಿಯಲ್ಲಿ ಈ ಸೌಲಭ್ಯ ನೀಡುತ್ತದೆ. ನಿಮ್ಮ ರೈಲು (ರಾಜಧಾನಿ, ಶತಾಬ್ದಿ ಅಥವಾ ದುರಂತೋ) ಅದರ ನಿಗದಿತ ಸಮಯಕ್ಕಿಂತ 2 ಗಂಟೆ ಅಥವಾ ಅದಕ್ಕಿಂತ ಹೆಚ್ಚು ವಿಳಂಬವಾದರೆ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಉಚಿತವಾಗಿ ಉಪಾಹಾರ ನೀಡಬೇಕು.

    ಈ ನಿಯಮವು ಮುಖ್ಯವಾಗಿ ಟಿಕೆಟ್ ದರದೊಂದಿಗೆ ಆಹಾರದ ಶುಲ್ಕವನ್ನೂ ಒಳಗೊಂಡಿರುವ ಪ್ರೀಮಿಯಂ ರೈಲುಗಳಿಗೆ ಅನ್ವಯಿಸುತ್ತದೆ. ವಿಳಂಬವಾದ ಸಮಯಕ್ಕೆ ಅನುಗುಣವಾಗಿ ರೈಲಿನಲ್ಲಿ ನೀಡುವ ಊಟದಲ್ಲೂ ಬದಲಾವಣೆಗಳು ಆಗುತ್ತದೆ. ಮುಂಜಾನೆ ಅಥವಾ ಸಂಜೆ ರೈಲು ವಿಳಂಬವಾದರೆ, ಆ ಹೊತ್ತಿಗೆ ಚಹಾ ಅಥವಾ ಕಾಫಿ ಮತ್ತು ಬಿಸ್ಕತ್ತುಗಳನ್ನು ನೀಡಲಾಗುವುದು.

    ಬೆಳಗಿನ ಉಪಾಹಾರದಲ್ಲಿ ಬ್ರೆಡ್ ಸ್ಲೈಸ್‌ಗಳು, ಬೆಣ್ಣೆ ಮತ್ತು ಜ್ಯೂಸ್​​ ನೀಡಲಾಗುವುದು. ಮಧ್ಯಾಹ್ನ ಅಥವಾ ರಾತ್ರಿ ರೈಲು ವಿಳಂಬವಾದರೆ, ಅನ್ನ, ದಾಲ್ (ಬೇಳೆ ಸಾರು), ರಾಜ್ಮಾ ಅಥವಾ ಚೋಲೆ, ಮತ್ತು ಉಪ್ಪಿನಕಾಯಿ. ಕೆಲವು ಸಂದರ್ಭಗಳಲ್ಲಿ 7 ಪೂರಿ ಮತ್ತು ಮಿಕ್ಸ್ ವೆಜಿಟೆಬಲ್ ಸಾಗುವನ್ನು ನೀಡಲಾಗುತ್ತದೆ. ಅನೇಕ ಬಾರಿ ರೈಲ್ವೆ ಸಿಬ್ಬಂದಿ ಸ್ವತಃ ಆಹಾರ ನೀಡದಿದ್ದರೆ, ಪ್ರಯಾಣಿಕರು ಈ ನಿಯಮವನ್ನು ನೆನಪಿಸಿ ಆಹಾರವನ್ನು ಕೇಳಿ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಎಂದು ಇಲಾಖೆ ಹೇಳಿದೆ. ಒಂದು ವೇಳೆ ರೈಲು 3 ಗಂಟೆಗಿಂತ ಹೆಚ್ಚು ವಿಳಂಬವಾದರೆ ಅಥವಾ ಮಾರ್ಗ ಬದಲಾವಣೆಯಾದರೆ, ಪ್ರಯಾಣಿಕರು ತಮ್ಮ ಟಿಕೆಟ್ ರದ್ದುಗೊಳಿಸಿ ಪೂರ್ಣ ಹಣವನ್ನು ಮರಳಿ ಪಡೆಯಬಹುದು.

    ಇದರ ಜತೆಗೆ ವಿಳಂಬವಾದ ಸಂದರ್ಭದಲ್ಲಿ ನಿಲ್ದಾಣಗಳಲ್ಲಿರುವ ವೇಟಿಂಗ್ ರೂಮ್‌ಗಳನ್ನು ಪ್ರಯಾಣಿಕರು ಉಚಿತವಾಗಿ ಬಳಸಿಕೊಳ್ಳಬಹುದು. ಈ ನಿಯಮವು ರೈಲ್ವೆಯ ಈ ನೀತಿಯು ವಿಶೇಷವಾಗಿ ಚಳಿಗಾಲದಲ್ಲಿ ಮಂಜಿನಿಂದಾಗಿ ರೈಲುಗಳು ವಿಳಂಬವಾದಾಗ ಪ್ರಯಾಣಿಕರಿಗೆ ತುಂಬಾ ಸಹಕಾರಿಯಾಗುತ್ತದೆ. ರೈಲು ಅದರ ಪ್ರಾರಂಭದ ನಿಲ್ದಾಣದಿಂದ 3 ಗಂಟೆಗಿಂತ ಹೆಚ್ಚು ವಿಳಂಬವಾಗಿದ್ದರೆ ಮತ್ತು ನೀವು ಆ ರೈಲಿನಲ್ಲಿ ಪ್ರಯಾಣ ಮಾಡದಿದ್ದರೆ, ನೀವು ಪೂರ್ಣ ಹಣವನ್ನು ಪಡೆಯಲು ಟಿಡಿಆರ್‌ ಸಲ್ಲಿಸಬಹುದು. ರೈಲು ಹೊರಡುವ ಮುನ್ನ ಅಥವಾ ರೈಲು ಹೊರಟ ಕೆಲವೇ ಗಂಟೆಗಳ ಒಳಗೆ (ಸಾಮಾನ್ಯವಾಗಿ 3-6 ಗಂಟೆ) ಟಿಡಿಆರ್‌ ಸಲ್ಲಿಸಬೇಕು.

    ಆನ್‌ಲೈನ್‌ನಲ್ಲಿ TDR ಸಲ್ಲಿಸುವುದು ಹೇಗೆ? – ಮೊದಲು IRCTC ವೆಬ್‌ಸೈಟ್ ಅಥವಾ ಆಪ್‌ಗೆ ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ. ಮೆನುವಿನಲ್ಲಿರುವ ‘My Account’ ವಿಭಾಗಕ್ಕೆ ಹೋಗಿ, ಅಲ್ಲಿ ‘My Transactions’ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಕಾಣುವ ‘File TDR’ ಎಂಬ ಆಯ್ಕೆಯನ್ನು ಆರಿಸಿ.

    ನೀವು ಯಾವ ಟಿಕೆಟ್‌ಗೆ ರಿಫಂಡ್ ಪಡೆಯಬೇಕೋ ಆ PNR ಸಂಖ್ಯೆಯನ್ನು ಆರಿಸಿ. ಅಲ್ಲಿ ಹಲವು ಕಾರಣಗಳ ಆಯಕ್ಎ ಇರುತ್ತದೆ. ರೈಲು ವಿಳಂಬವಾಗಿದ್ದರೆ “Train Late More Than Three Hours and Passenger Not Traveled” ಎಂಬ ಆಯ್ಕೆಯನ್ನು ಆರಿಸಿ. ಫೈಲ್ ಮಾಡಿದ ನಂತರ ನಿಮಗೆ ಒಂದು ಕನ್ಫರ್ಮೇಷನ್ ಸಿಗುತ್ತದೆ.

    ಹಣ ಯಾವಾಗ ವಾಪಸ್ ಬರುತ್ತದೆ? – TDR ಸಲ್ಲಿಸಿದ ನಂತರ ಅದನ್ನು ಪರಿಶೀಲಿಸಲು ರೈಲ್ವೆ ಇಲಾಖೆಯು 15 ರಿಂದ 90 ದಿನಗಳವರೆಗೆ ಸಮಯ ತೆಗೆದುಕೊಳ್ಳಬಹುದು. ಹಣವು ನೀವು ಟಿಕೆಟ್ ಬುಕ್ ಮಾಡುವಾಗ ಬಳಸಿದ ಬ್ಯಾಂಕ್ ಅಕೌಂಟ್‌ಗೆ ನೇರವಾಗಿ ಜಮೆಯಾಗುತ್ತದೆ.

    • ಟ್ಯಾಗ್ಗಳು
    • be free
    • Catering
    • Catering Policy
    • Full Refund
    • good news
    • IRCTC
    • IRCTC Catering Policy
    • Meals
    • Method
    • My Account
    • My Transactions
    • Original
    • Original Payment Method
    • payment
    • Payment Method
    • PNR
    • policy
    • Source Station
    • TDR
    • train passengers
    • trains
    • will now
    Share
    WhatsApp
    Telegram
    Facebook
    Twitter
    Email
      ಹಿಂದಿನ ಲೇಖನಭಾರತದ ವಿರುದ್ಧ ಪಂದ್ಯವಾಡದೇ ಇದ್ದರೆ, ಪಾಕಿಗೆ 200 ಕೋಟಿ ನಷ್ಟ..!
      ಮುಂದಿನ ಲೇಖನಗ್ಯಾಸ್ ಸೋರಿಕೆಯಾಗಿ ಅಗ್ನಿ ಅವಘಡ – ಒಂದೇ ಕುಟುಂಬದ ಮೂವರು ಸಾವು..!
      Saval

      ಸಂಬಂಧಿತ ಲೇಖನಗಳುಲೇಖಕರಿಂದ ಇನ್ನಷ್ಟು

      ರಾಜ್ಯ

      ಯುಗಾದಿ ಹಬ್ಬ – ಬೇರೆ ರಾಜ್ಯಗಳಲ್ಲಿ ಯುಗಾದಿ ಆಚರಣೆ ಹೇಗೆ..?

      ರಾಜ್ಯ

      ಯುಗಾದಿ ಸ್ಪೆಷಲ್‌ – ಬೇವು, ಬೆಲ್ಲ ಮಾಡುವ ವಿಧಾನ..!

      ರಾಜ್ಯ

      ಕೋರ್ಟ್ ಆದೇಶವಿದ್ರೂ ದರ್ಶನ್‌ಗೆ ಒಳ ಸಂದರ್ಶನಕ್ಕಿಲ್ಲ ಅವಕಾಶ – ಹೆಂಡ್ತಿ, ಮಗನ ಭೇಟಿ ಇಲ್ಲ..!

      EDITOR PICKS

      ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ ಎಂಬಂತೆ ಬಿಜೆಪಿಯವರ ಸ್ಥಿತಿ: ಪ್ರಿಯಾಂಕ್ ಖರ್ಗೆ

      Saval - September 12, 2022

      ಜುಲೈ 12 ರಂದು ಮೊದಲನೇ ಆಶಾಢ ಶುಕ್ರವಾರ: ಅಗತ್ಯ ಸಿದ್ಧತೆಗೆ ಸೂಚನೆ

      Saval - June 21, 2024

      ಕಾಣೆಯಾಗಿದ್ದ ಯುವಕನ ಶವ ಗವಿರಂಗ ಸ್ವಾಮಿ ಬೆಟ್ಟದ ಬಳಿ ಕೊಳೆತ ಸ್ಥಿತಿಯಲ್ಲಿ ಪತ್ತೆ

      Saval - January 9, 2024

      ನಮ್ಮಿಂದಲೇ ಕೆಪಿಎಸ್​ಸಿ ಶುದ್ಧೀಕರಣ, ಅಕ್ರಮಗಳನ್ನು ಸಾರ್ವಜನಿಕರ ಮುಂದಿಡಲಾಗುವುದು: ಹೈಕೋರ್ಟ್

      Saval - March 7, 2025
      Saval TV on YouTube
      ಸವಾಲ್ ಟಿವಿ : ಕರ್ನಾಟಕದ ಸುದ್ದಿ ಜಾಲ, ರಾಜಕೀಯ, ಅಪರಾಧ, ಕ್ರೀಡೆ, ಶಿಕ್ಷಣ, ಮನರಂಜನೆ, ಕಾನೂನು, ಜ್ಯೋತಿಷ್ಯ ಉದ್ಯೋಗ ಮಾಹಿತಿ, ಮತ್ತು ದೈನಂದಿನ ಆನ್‌ಲೈನ್ ವರದಿಗಳು, ಸಮರ್ಥ ಸುದ್ದಿಮೂಲ.

Whats app Page Link  - https://whatsapp.com/channel/
Telegram Page  Link - https://t.me/savaltv/
Facebook Page Link - https://www.facebook.com/savalpathrike/
https://www.facebook.com/SavalPradeep/
https://www.facebook.com/pdpsavaltv/
Twitter Page Link - https://x.com/savaltv
Instagram Page Link - https://www.instagram.com/savaltv/
Website Link - https://savaltv.com
      ಚಿತ್ರದುರ್ಗದಲ್ಲಿ ಹೆಚ್ಚಾಯ್ತು ಕಳ್ಳರ ಹಾವಳಿ #shorts
      ಸವಾಲ್ ಟಿವಿ : ಕರ್ನಾಟಕದ ಸುದ್ದಿ ಜಾಲ, ರಾಜಕೀಯ, ಅಪರಾಧ, ಕ್ರೀಡೆ, ಶಿಕ್ಷಣ, ಮನರಂಜನೆ, ಕಾನೂನು, ಜ್ಯೋತಿಷ್ಯ ಉದ್ಯೋಗ ಮಾಹಿತಿ, ಮತ್ತು ದೈನಂದಿನ ಆನ್‌ಲೈನ್ ವರದಿಗಳು, ಸಮರ್ಥ ಸುದ್ದಿಮೂಲ.

Whats app Page Link  - https://whatsapp.com/channel/
Telegram Page  Link - https://t.me/savaltv/
Facebook Page Link - https://www.facebook.com/savalpathrike/
https://www.facebook.com/SavalPradeep/
https://www.facebook.com/pdpsavaltv/
Twitter Page Link - https://x.com/savaltv
Instagram Page Link - https://www.instagram.com/savaltv/
Website Link - https://savaltv.com
      Chicken Pepper Special #shorts
      ಸವಾಲ್ ಟಿವಿ : ಕರ್ನಾಟಕದ ಸುದ್ದಿ ಜಾಲ, ರಾಜಕೀಯ, ಅಪರಾಧ, ಕ್ರೀಡೆ, ಶಿಕ್ಷಣ, ಮನರಂಜನೆ, ಕಾನೂನು, ಜ್ಯೋತಿಷ್ಯ ಉದ್ಯೋಗ ಮಾಹಿತಿ, ಮತ್ತು ದೈನಂದಿನ ಆನ್‌ಲೈನ್ ವರದಿಗಳು, ಸಮರ್ಥ ಸುದ್ದಿಮೂಲ.

Whats app Page Link  - https://whatsapp.com/channel/
Telegram Page  Link - https://t.me/savaltv/
Facebook Page Link - https://www.facebook.com/savalpathrike/
https://www.facebook.com/SavalPradeep/
https://www.facebook.com/pdpsavaltv/
Twitter Page Link - https://x.com/savaltv
Instagram Page Link - https://www.instagram.com/savaltv/
Website Link - https://savaltv.com
      ಸುತ್ತೂರು ಜಾತ್ರಾ ಮಹೋತ್ಸವ 2026 #shorts
      Load More... Subscribe
      • Privacy
      • Contact Us
      © Savalnews.com. All rights reserved.
      Designed & developed by Crisant Technologies