ಮೈಸೂರು : ಸರ್ಕಾರಿ ಬಸ್ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ ಸಂಭವಿಸಿದ ಘಟನೆ ಮೈಸೂರಿನ ನಗರ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ನಡೆದಿದೆ. ನಗರ ಸಾರಿಗೆ ಬಸ್ಗಳು ಹಾಗೂ ಆಟೋ ನಡುವೆ ಸರಣಿ ಅಪಘಾತ ನಡೆದಿದ್ದು, ಅಪಘಾತದಲ್ಲಿ ಎರಡು ಬಸ್ ಹಾಗೂ ಒಂದು ಆಟೋ ಜಖಂಗೊಂಡಿದೆ.
ಬ್ರೇಕ್ ಫೇಲ್ ಆದ ಪರಿಣಾಮ ಒಂದು ಬಸ್ ಇನ್ನೊಂದು ಬಸ್ಗೆ ಗುದ್ದಿದೆ. ನಂತರ ಮುಂದೆ ಹೋಗುತ್ತಿದ್ದ, ಆಟೋಗೆ ನಗರ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಿಂದ ವಾಹನಗಳು ಸ್ಥಳದಲ್ಲೇ ಜಖಂ ಆಗಿ ನಿಂತಿವೆ. ಅಪಘಾತದ ಘಟನೆಯಿಂದ ಸ್ಥಳದಲ್ಲಿ ವಾಹನ ಸಂಚಾರ ಬಂದ್ ಆಗಿದೆ.















