ಮನೆ ರಾಜ್ಯ ಹೊಸಕೋಟೆ, ನೆಲಮಂಗಲ, ಬಿಡದಿವರೆಗೆ ಮೆಟ್ರೊ ರೈಲು ವಿಸ್ತರಣೆಗೆ ಸರ್ಕಾರ ಚಿಂತನೆ: ಡಿ.ಕೆ.ಶಿವಕುಮಾರ್

ಹೊಸಕೋಟೆ, ನೆಲಮಂಗಲ, ಬಿಡದಿವರೆಗೆ ಮೆಟ್ರೊ ರೈಲು ವಿಸ್ತರಣೆಗೆ ಸರ್ಕಾರ ಚಿಂತನೆ: ಡಿ.ಕೆ.ಶಿವಕುಮಾರ್

0

ಬೆಳಗಾವಿ: ಬೆಂಗಳೂರು ಮೆಟ್ರೋ ರೈಲು ಸೇವೆಯನ್ನು ಮತ್ತಷ್ಟು ವಿಸ್ತರಣೆ ಮಾಡುವುದಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ. ಪೂರ್ವದಲ್ಲಿ ಹೊಸಕೋಟೆ, ಪಶ್ಚಿಮದಲ್ಲಿ ನೆಲಮಂಗಲ ಮತ್ತು ನಗರದ ನೈಋತ್ಯದ ಬಿಡದಿಯವರೆಗೆ ವಿಸ್ತರಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬುಧವಾರ ಹೇಳಿದ್ದಾರೆ.

Join Our Whatsapp Group

ಹಳೆ ಮದ್ರಾಸ್ ರಸ್ತೆಯಲ್ಲಿ ಕೆಆರ್ ಪುರಂನಿಂದ ಹೊಸಕೋಟೆವರೆಗೆ ತೀವ್ರ ಸಂಚಾರ ದಟ್ಟಣೆ ಕುರಿತು ಕರ್ನಾಟಕ ವಿಧಾನಸಭೆಯಲ್ಲಿ ಶರತ್ ಬಚ್ಚೇಗೌಡ ಅವರು ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರಿಸಿದರು. ಈ ವೇಳೆ ಅವರು ಸರ್ಕಾರದ ಚಿಂತನೆ ಬಗ್ಗೆ ಪ್ರಕಟಿಸಿದರು.

ನನಗೆ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ತಿಳಿದಿದೆ. ನಾನು ಅದಕ್ಕಾಗಿ ಯೋಜಿಸುತ್ತಿದ್ದೇನೆ ಮತ್ತು ವಿವರವಾದ ಸಮೀಕ್ಷೆಯೊಂದನ್ನು ಮಾಡುತ್ತಿದ್ದೇನೆ. ಸರ್ಕಾರ ಮತ್ತು ನಮ್ಮ ಮೆಟ್ರೋ ಶಾಸಕರ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸುತ್ತದೆ ಎಂದು ಡಿಸಿಎಂ ಶಿವಕುಮಾರ್​​ ಶಾಸಕರ ಪ್ರಶ್ನೆಗೆ ಉತ್ತರಿಸಿದರು. ಉಪಮುಖ್ಯಮಂತ್ರಿ ಶಿವಕುಮಾರ್, ಹೊಸಕೋಟೆ, ನೆಲಮಂಗಲ, ಬಿಡದಿವರೆಗೆ ಮೆಟ್ರೊ ರೈಲು ವಿಸ್ತರಣೆ ಕುರಿತು ವರದಿ ಕೇಳುತ್ತಿದ್ದೇವೆ ಎಂದರು. ಪ್ರತಿನಿತ್ಯ 10,000 ಜನರು ಕೋಲಾರದಿಂದ ರೈಲಿನಲ್ಲಿ ಬೆಂಗಳೂರಿಗೆ ಕೆಲಸಕ್ಕೆ ಎಂದು ಪ್ರಯಾಣ ಮಾಡುತ್ತಾರೆ ಎಂದು ಅಂಕಿ- ಅಂಶಗಳ ಸಮೇತ ವಿಧಾನಸಭೆಯಲ್ಲಿ ತಿಳಿಸಿದರು