ಮನೆ ರಾಷ್ಟ್ರೀಯ ಅಂಚೆ ಕಚೇರಿಗೆ ಬರುವ ಪತ್ರ, ಕೋರಿಯರ್’ಗಳನ್ನು ತೆರೆದು ನೋಡಲು ಹಾಗೂ  ಮುಟ್ಟುಗೋಲು ಹಾಕಲು ಸರ್ಕಾರಿ ಅಧಿಕಾರಿಗಳಿಗೆ...

ಅಂಚೆ ಕಚೇರಿಗೆ ಬರುವ ಪತ್ರ, ಕೋರಿಯರ್’ಗಳನ್ನು ತೆರೆದು ನೋಡಲು ಹಾಗೂ  ಮುಟ್ಟುಗೋಲು ಹಾಕಲು ಸರ್ಕಾರಿ ಅಧಿಕಾರಿಗಳಿಗೆ ಅವಕಾಶ

0

ನವದೆಹಲಿ: ಅಂಚೆ ಕಚೇರಿಗೆ ಬರುವ ಪತ್ರಗಳನ್ನು ಯಾವುದೇ ಸರ್ಕಾರಿ ಅಧಿಕಾರಿಗಳು ತೆರೆದು ನೋಡುವ ಹಾಗೂ ಮುಟ್ಟುಗೋಲು ಹಾಕುವ ಅಧಿಕಾರ ನೀಡುವ ಮಸೂದೆಗೆ ಲೋಕಸಭೆ ಒಪ್ಪಿಗೆ ನೀಡಿದೆ.

ದೇಶದ ಭದ್ರತೆಯ ದೃಷ್ಟಿಯಿಂದ ಈ ಮಸೂದೆಗೆ ಒಪ್ಪಿಗೆಯನ್ನು ನೀಡಲಾಗಿದ್ದು, ಪತ್ರಗಳು ಮಾತ್ರವಲ್ಲದೇ ಖಾಸಗಿ ಕೊರಿಯರ್’ಗಳನ್ನೂ ಈ ಮಸೂದೆ ವ್ಯಾಪ್ತಿಗೆ ತರಲಾಗಿದೆ.

ಈ ಮಸೂದೆ ಪ್ರಕಾರ ಕೊರಿಯರ್ ಕಚೇರಿಗೆ ಬರುವ ಶಂಕಾಸ್ಪದ ಪತ್ರಗಳನ್ನು ಅಥವಾ ಯಾವುದೇ ವಸ್ತುಗಳನ್ನು ತೆರೆದು ನೋಡಿ ಮುಟ್ಟುಗೋಲು ಹಾಕುವ ಅಧಿಕಾರ ಇದೀಗ ಸರ್ಕಾರಕ್ಕೆ ದೊರಕಿದ್ದು, ಈ ಹೊಸ ಕಾಯ್ದೆ 125 ವರ್ಷಗಳಷ್ಟು ಹಳೆಯ ಅಂಚೆ ಕಚೇರಿ ಕಾಯ್ದೆಯನ್ನು ಬದಲಿಸಿದೆ.

ಈ ಮಸೂದೆಗೆ ರಾಜ್ಯಸಭೆಯಲ್ಲಿ ಡಿಸೆಂಬರ್ 4 ರಂದೇ ಅಂಗೀಕಾರ ದೊರೆತಿದ್ದು, ಸಂಸತ್‌ನಲ್ಲಿ ಭದ್ರತಾ ಲೋಪದ ಬಗ್ಗೆ ಅಮಿತ್ ಶಾ ಉತ್ತರ ನೀಡಬೇಕು ಎಂದು ವಿಪಕ್ಷಗಳು ಗದ್ದಲ ನಡೆಸಿದ ಸಂದರ್ಭದಲ್ಲಿಯೇ ಈ ಮಸೂದೆಯನ್ನು ಅಂಗೀಕರಿಸಲಾಗಿದೆ.

ಹಿಂದಿನ ಲೇಖನರಾಮ ಮಂದಿರ ಉದ್ಘಾಟನೆಗೆ ಎಲ್‌.ಕೆ.ಆಡ್ವಾಣಿ, ಜೋಶಿ ಅವರನ್ನು ಆಹ್ವಾನಿಸಿದ ವಿಎಚ್‌ ಪಿ
ಮುಂದಿನ ಲೇಖನಅಮಾನತುಗೊಂಡ 141 ಸಂಸದರು ಸಂಸತ್ತಿನ ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸದಂತೆ ಸುತ್ತೋಲೆ