ಮನೆ ಕಾನೂನು ಎಂಎಲ್​ಸಿ ಶಶೀಲ್ ನಮೋಶಿ ವಿರುದ್ಧದ ವಂಚನೆ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಎಂಎಲ್​ಸಿ ಶಶೀಲ್ ನಮೋಶಿ ವಿರುದ್ಧದ ವಂಚನೆ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

0

ಬೆಂಗಳೂರು: ಹೈದರಾಬಾದ್-ಕರ್ನಾಟಕ ಶಿಕ್ಷಣ ಸೊಸೈಟಿಯ (ಹೆಚ್‌ಕೆಇಎಸ್) ಅಧ್ಯಕ್ಷರೂ ಆಗಿರುವ ಬಿಜೆಪಿ ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

Join Our Whatsapp Group

ತಮ್ಮ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣ ರದ್ದು ಕೋರಿ ನಮೋಶಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಕೋರ್ಟ್​ ಆದೇಶದ ವಿವರ: ವಂಚನೆ ಆರೋಪ ಸಂಬಂಧದ ಪ್ರಕರಣಗಳಲ್ಲಿ ನೋಂದ ವ್ಯಕ್ತಿ ಇಲ್ಲದೇ ಇತರರು 15 ವರ್ಷಗಳ ಬಳಿಕ ದೂರು ದಾಖಲಿಸುವುದಕ್ಕೆ ಅವಕಾಶವಿಲ್ಲ. ಆರೋಪ ಬೆಳಕಿಗೆ ಬಂದು 6 ವರ್ಷಗಳ ಬಳಿಕವೂ ಯಾವುದೇ ವಿದ್ಯಾರ್ಥಿ ತನಗೆ ಸ್ಟೈಫಂಡ್ ಬಂದಿಲ್ಲ ಎಂಬುದಾಗಿ ದೂರು ದಾಖಲಿಸಿಲ್ಲ. ದಾಖಲೆಗಳನ್ನು ಪರಿಶೀಲಿಸಿದಾಗ 2024ರ ಮಾರ್ಚ್ 31ರಂದು ಸೊಸೈಟಿಯ ಆಡಳಿತ ಮಂಡಳಿಯ ವಿರುದ್ಧ ಇದೇ ಆರೋಪದಲ್ಲಿ ದೂರು ದಾಖಲಾಗಿದೆ. ಅಲ್ಲದೆ, ನಮೋಶಿ ಮತ್ತಿಯರರು ದಾಖಲಿಸಿದ ದೂರಿನ ತನಿಖೆಗಾಗಿ ವಿಚಾರಣಾ ಸಮಿತಿ ರಚಿಸಲಾಗಿದೆ. ಹೀಗಾಗಿ, ಇದು ಸೇಡಿನ ಕೃತ್ಯವಾಗಿರಬಹುದು ಎಂಬ ವಾದವನ್ನು ತಳ್ಳಿಹಾಕಲಾಗುವುದಿಲ್ಲ ಎಂಬುದಾಗಿ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ: 2024ರ ಆಗಸ್ಟ್ ತಿಂಗಳಲ್ಲಿ ಸಲ್ಲಿಸಲಾದ ಮೊದಲ ದೂರಿನಲ್ಲಿ ಹೆಚ್‌ಕೆಇಎಸ್ ಸದಸ್ಯರೂ ಆಗಿದ್ದ ವಕೀಲ ಪ್ರದೀಪ್ ದುಬೈಟ್ಟಿ ದೂರು ದಾಖಲಿಸಿ, 2009 ಮತ್ತು 2018ರ ನಡುವೆ ಸೊಸೈಟಿ ಆಡಳಿತ ಮಂಡಳಿ ಸದಸ್ಯರಾಗಿದ್ದ ನಮೋಶಿ ಮತ್ತಿತರರು ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ಟೈಫಂಡ್ ಮೊತ್ತವನ್ನು ಪಾವತಿಸಿಲ್ಲ ಮತ್ತು ಉಳಿಕೆ ಸೀಟುಗಳ ಶುಲ್ಕವನ್ನು ಮರು ಪಾವತಿಸಿಲ್ಲ ಎಂಬುದಾಗಿ ಆರೋಪಿಸಿದ್ದರು.

ಅಲ್ಲದೇ, 2024ರಲ್ಲಿ ನಮೋಶಿ ಮತ್ತಿತರರು ಆ ಸೀಟುಗಳನ್ನು ಇತರ ವಿದ್ಯಾರ್ಥಿಗಳಿಗೆ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ವಿದ್ಯಾರ್ಥಿಗಳಿಂದ ಸಹಿ ಇಲ್ಲದ ಚೆಕ್‌ಗಳನ್ನು ಪಡೆದು 65,17,36,800 ರೂ.ಗಳಷ್ಟು ಮೊತ್ತವನ್ನು ಡ್ರಾ ಮಾಡಿದ್ದಾರೆ. ಅದನ್ನು ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ ಎಂಬುದಾಗಿ ಆರೋಪಿಸಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 2018ರ ಮಾರ್ಚ್ 31ರಂದು ಸೊಸೈಟಿಯ ಅಡಿಯಲ್ಲಿ ಶಿಕ್ಷಣ ಸಂಸ್ಥೆಯ ಮಾಜಿ ಆಡಳಿತ ಮಂಡಳಿ ಸದಸ್ಯರ ವಿರುದ್ಧ ವಂಚನೆ ದೂರು ದಾಖಲಾಗಿದೆ. ಆ ಪ್ರಕರಣದಲ್ಲಿನ ಆರೋಪಿಗಳು ಸೇಡು ತೀರಿಸಿಕೊಳ್ಳಲು ಅರ್ಜಿದಾರರ ವಿರುದ್ಧ ಪ್ರತಿದೂರು ದಾಖಲಿಸಿದ್ದರು ಎಂದು ತಿಳಿಸಿದ್ದರು.