ಮನೆ ರಾಜ್ಯ ಹೆಚ್ಚಿನ ವಿವರಣೆ ಕೋರಿ 11 ಮಸೂದೆ ವಾಪಾಸ್ ಕಳಿಸಿದ ರಾಜ್ಯಪಾಲರು

ಹೆಚ್ಚಿನ ವಿವರಣೆ ಕೋರಿ 11 ಮಸೂದೆ ವಾಪಾಸ್ ಕಳಿಸಿದ ರಾಜ್ಯಪಾಲರು

0

ಬೆಂಗಳೂರು: ಸುಮಾರು 11 ಮಸೂದೆಗಳಿಗೆ ಹೆಚ್ಚಿನ ವಿವರಣೆಗಳನ್ನು ಕೋರಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಸರ್ಕಾರಕ್ಕೆ ವಾಪಸ್‌ ಕಳುಹಿಸಿದ್ದಾರೆ.

Join Our Whatsapp Group

ಇವುಗಳಲ್ಲಿ ಆರು ಮಸೂದೆಗಳು ಮುಂಗಾರು ಅಧಿವೇಶನದಲ್ಲಿ ಅಂಗೀಕಾರಗೊಂಡಿದ್ದವು, ಅವುಗಳನ್ನು ಇದೇ ತಿಂಗಳು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಉಳಿದವು ಇದೇ ವರ್ಷದ ಮಾರ್ಚ್‌ ಮತ್ತು ಒಂದು ಮಸೂದೆ 2023 ರ ಡಿಸೆಂಬರ್‌ನಲ್ಲಿ ಕಳುಹಿಸಲಾಗಿತ್ತು.

ವಾಪಾಸ್‌ ಆಗಿರುವ ಮಸೂದೆಗಳೆಂದರೆ, ಕರ್ನಾಟಕ ಸಾರ್ವಜನಿಕ ಪರೀಕ್ಷಾ(ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ತಡೆ) ಮಸೂದೆ 2023, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ದತ್ತಿ ಮಸೂದೆ 2024, ಕರ್ನಾಟಕ ನಗರ ಮತ್ತು ಪಟ್ಟಣಗಳ ಯೋಜನೆ(ತಿದ್ದುಪಡಿ) ಮಸೂದೆ 2023, ಗದಗ ಬೆಟಗೇರಿ ವಾಣಿಜ್ಯ, ಸಂಸ್ಕೃತಿ ಮತ್ತು ಪ್ರದರ್ಶನಗಳ ಪ್ರಾಧಿಕಾರ ಮಸೂದೆ 2023, ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ 2024, ಕರ್ನಾಟಕ ಪುರಸಭೆಗಳು ಇತರ ಕಾನೂನು ತಿದ್ದುಪಡಿ ಮಸೂದೆ,2024, ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮಸೂದೆ 2024, ಕರ್ನಾಟಕ ಸಹಕಾರ ಸಂಘಗಳ ಸೊಸೈಟಿಗಳ ತಿದ್ದುಪಡಿ ಮಸೂದೆ 2024, ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆ, ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಮಸೂದೆ 2024, ಕರ್ನಾಟಕ ಶಾಸಕಾಂಗ (ತಡೆ ಮತ್ತು ಅನರ್ಹತೆ) ತಿದ್ದುಪಡಿ ಮಸೂದೆ.

ರಾಜ್ಯಪಾಲರು ಕೆಲವು ಮಸೂದೆಗಳಿಗೆ ಹೆಚ್ಚಿನ ವಿವರಣೆಗಳನ್ನು ಕೇಳಿ ವಾಪಸ್‌ ಕಳಿಸುವುದು ಸಾಮಾನ್ಯ ಪ್ರಕ್ರಿಯೆ. ತೃಪ್ತಿಕರ ಉತ್ತರ ಸಿಕ್ಕಿದ ನಂತರವೇ ಅವರು ಅಂಕಿತ ಹಾಕುತ್ತಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ.