ಚಿಕ್ಕಮಗಳೂರು: ರಾಜ್ಯದಲ್ಲಿ ಸರ್ಕಾರ ರಚನೆಯಾಗಿ 6 ತಿಂಗಳಿಂದ ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ. ಸರ್ಕಾರ ಬಿಳುತ್ತದೆ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದು ವಿರೋಧ ಪಕ್ಷದವರು ಹೇಳಿದ ತಕ್ಷಣ ಸರ್ಕಾರ ಬೀಳುವುದಿಲ್ಲ. 5 ವರ್ಷ ಈ ಸರ್ಕಾರ ಗಟ್ಟಿಯಾಗಿರಲಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಅ. 9ರ ಬುಧವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರ ಬಿಳುತ್ತದೆ. ಮುಖ್ಯಮಂತ್ರಿ ಬದಲಾವಣೆಯಾಗುತ್ತದೆ ಎಂಬ ಕುರಿತು ಚರ್ಚೆಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಸಿ, ಯಾರು ಹೇಳಿದ್ದು ನಿಮಗೆ, ವಿಪಕ್ಷಗಳು ಡೇ ಓನ್ ನಿಂದ ಹೇಳುತ್ತಿದೆ. ಈಗ 18 ತಿಂಗಳು ಕಳೆದಿದೆ. ವಿರೋಧ ಪಕ್ಷದವರು ಹೇಳುತ್ತಾರೆಂದು ಸರ್ಕಾರ ಬೀಳುವುದಿಲ್ಲ ಎಂದರು.
ಜಾತಿ ಗಣತಿ ವರದಿ ಪರ ವಿರೋಧ ಸಂಬಂಧ ಮಾತನಾಡಿದ ಅವರು, ವರದಿ ಕುರಿತು ಕ್ಯಾಬಿನೆಟ್ ನಲ್ಲಿ ಚರ್ಚೆಯಾಗಬೇಕು. ಸದನಕ್ಕೆ ಬರಬೇಕು. ಅದರಲ್ಲಿ ಏನಿದೆ ಎಂದು ನೋಡೋಣ ಎಂದು ಹೇಳಿದರು.
ಕೋಳಿವಾಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಮೂಡಾ ಹಗರಣಕ್ಕೂ ಹರಿಯಾಣ ಚುನಾವಣೆಗೂ ಏನು ಸಂಬಂಧ, ಮೂಡಾ ನಮ್ಮ ರಾಜ್ಯಕ್ಕೆ ಸೀಮಿತವಾಗಿರುವ ವಿಚಾರ. ಅದರ ಪಾಡಿಗೆ ಅದು ತನಿಖೆ ನಡೆಯುತ್ತಿದೆ ಎಂದರು.
ಜಮ್ಮು ಕಾಶ್ಮೀರ ಮತ್ತು ಹರಿಯಾಣ ಚುನಾವಣೆ ರಾಜ್ಯದ ಮೇಲೆ ಪರಿಣಾಮ ಬೀರುವುದಿಲ್ಲ, ರಾಜ್ಯದಲ್ಲಿ ಚುನಾವಣೆಗೆ ಇನ್ನೂ ಮೂರುವರೆ ವರ್ಷ ಇದೆ. ಆಗ ಯಾವ ವಿಚಾರಗಳು ಮುನ್ನೆಲೆಯಲ್ಲಿ ಇರುತ್ತೋ ನೋಡೋಣ ಎಂದರು.














