ಮನೆ ಕಾನೂನು ತಾತ-ಅಜ್ಜಿಯರನ್ನೂ ಸಿಲುಕಿಸಲಾಗಿದೆ: ಐಪಿಸಿ ಸೆಕ್ಷನ್‌ 498ಎ ದುರ್ಬಳಕೆಗೆ ಎಚ್ಚರಿಕೆ ಗಂಟೆ ಬಾರಿಸಿದ ಬಾಂಬೆ ಹೈಕೋರ್ಟ್‌

ತಾತ-ಅಜ್ಜಿಯರನ್ನೂ ಸಿಲುಕಿಸಲಾಗಿದೆ: ಐಪಿಸಿ ಸೆಕ್ಷನ್‌ 498ಎ ದುರ್ಬಳಕೆಗೆ ಎಚ್ಚರಿಕೆ ಗಂಟೆ ಬಾರಿಸಿದ ಬಾಂಬೆ ಹೈಕೋರ್ಟ್‌

0

ಭಾರತೀಯ ದಂಡ ಸಂಹಿತೆ ಸೆಕ್ಷನ್‌ 498ಎ (ಪತಿ ಹಾಗೂ ಅವರ ಕಡೆಯವರಿಂದ ಪತ್ನಿಯ ಮೇಲೆ ಕ್ರೌರ್ಯ) ದುರ್ಬಳಕೆಯ ಬಗ್ಗೆ ಬುಧವಾರ ಬಾಂಬೆ ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

Join Our Whatsapp Group

ವೈವಾಹಿಕ ದೌರ್ಜನ್ಯದ ಸಂತ್ರಸ್ತರಿಗೆ ಅನುಕಂಪ ವ್ಯಕ್ತಪಡಿಸಿರುವ ನ್ಯಾಯಮೂರ್ತಿಗಳಾದ ಎ ಎಸ್‌ ಗಡ್ಕರಿ ಮತ್ತು ನೀಲಾ ಗೋಖಲೆ ಅವರ ನೇತೃತ್ವದ ವಿಭಾಗೀಯ ಪೀಠವು ಸೆಕ್ಷನ್‌ 498ಎ ದುರ್ಬಳಕೆಯಾಗುತ್ತಿದೆ ಎಂದಿದೆ.

ವಯಸ್ಸಾದ ತಾತ-ಅಜ್ಜಿಯಂದಿರು ಹಾಗೂ ಹಾಸಿಗೆ ಹಿಡಿದಿರುವವರನ್ನೂ ಇಂಥ ಪ್ರಕರಣಗಳಲ್ಲಿ ಆರೋಪಿಗಳನ್ನಾಗಿಸಲಾಗುತ್ತಿದೆ ಎಂದು ಪೀಠ ಹೇಳಿದ್ದು, ಇದಕ್ಕೆ ನಮ್ಮ ಸಹಮತವಿಲ್ಲ ಎಂದಿದೆ.

ಐಪಿಸಿ ಸೆಕ್ಷನ್‌ 498ಎ ಅಡಿ ಅಪರಾಧವನ್ನು ರಾಜೀ ಮಾಡಿಕೊಳ್ಳಬಹುದಾದ ಅಪರಾಧವನ್ನಾಗಿ ಮಾಡಿದರೆ ಸಾವಿರಾರು ಪ್ರಕರಣಗಳನ್ನು ಇತ್ಯರ್ಥಪಡಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಪತಿ-ಪತ್ನಿ, ಅತ್ತೆ ಮತ್ತು ನಾದಿನಿ ನಡುವಿನ ಪ್ರಕರಣ ರಾಜಿಯಾದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್‌ 498ಎ ಅಡಿ ಪ್ರಕರಣ ವಜಾ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯ ಮೇಲಿನಂತೆ ಹೇಳಿದೆ.