ಬೆಂಗಳೂರು : ಬೆಂಗಳೂರು ನಗರ ಒಂದೇ ಸಂಸ್ಥೆಯಿಂದ ನಿರ್ವಹಣೆ ಕಷ್ಟ ಎಂದು ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿ 5 ಪಾಲಿಕೆಗಳಾಗಿ ವಿಂಗಡಿಸಿ ಆಡಳಿತ ನಡೆಸುವುದಕ್ಕೆ ಆದೇಶ ಮಾಡಿದೆ.
ಸೆ.2 ರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ಜಾರಿಯಾಗಲಿದ್ದು, ಈ ಹಿಂದೆ ಬಿಬಿಎಂಪಿ ಜಾರಿ ಇತ್ತು. ಆದರೆ, ಇನ್ಮುಂದೆ ಗ್ರೇಟರ್ ಬೆಂಗಳೂರು ಆಡಳಿತ ಜಾರಿಯಲ್ಲಿ ಇರಲಿದೆ. 5 ಪಾಲಿಕೆಗಳು ಯಾವ್ಯಾವು? ಮತ್ತೆ ಐದು ಪಾಲಿಕೆಗಳ ಕಚೇರಿ ಎಲ್ಲಿ ಬರುತ್ತೆ ಎಂಬ ಪ್ರಶ್ನೆಗಳು ಜನರಲ್ಲಿವೆ. ಅದಕ್ಕೆ ಉತ್ತರ ಕೂಡ ಸಿಕ್ಕಿದೆ ಹಾಗೂ ಐದು ಪಾಲಿಕೆಗಳಿಗೆ 10 ಕಚೇರಿಯನ್ನು ಗುರುತು ಮಾಡಲಾಗಿದೆ.
5 ಪಾಲಿಕೆಗಳಿಗೆ 10 ತಾತ್ಕಾಲಿಕ ಕಚೇರಿಗಳ ಗುರುತು –
ಗ್ರೇಟರ್ ಬೆಂಗಳೂರು ಪ್ರಾಧಿಕಾರ – ಕಾರ್ಪೋರೇಷನ್ ಸರ್ಕಲ್ ಕೇಂದ್ರ ಕಚೇರಿ ಮುಖ್ಯ ಕಟ್ಟಡ ಅನೆಕ್ಸ್ 1 – ಅನೆಕ್ಸ್ 2
ಬೆಂಗಳೂರು ನಗರ ಕೇಂದ್ರ ನಗರ ಪಾಲಿಕೆ – ಹಾಲಿ ಪೂರ್ವ ವಲಯ ಕಚೇರಿ, ಕೇಂದ್ರ ಕಚೇರಿ ಅನೆಕ್ಸ್ ಕಟ್ಟಡ
ಬೆಂಗಳೂರು ಪೂರ್ವ ನಗರ ಪಾಲಿಕೆ – ಮಹಾದೇವಪುರ ವಲಯ ಕಚೇರಿ, ಕೆ.ಆರ್ ಪುರಂ ಕಚೇರಿ
ಪಶ್ಚಿಮ ವಲಯ – ಆರ್.ಆರ್ ನಗರ ವಲಯ ಕಚೇರಿ, ಹಾಲಿ ಪಾಲಿಕೆ ಸೌಧ ಚಂದ್ರ ಲೇಔಟ್
ಬೆಂಗಳೂರು ಉತ್ತರ ನಗರ ಪಾಲಿಕೆ – ಹಾಲಿ ಯಲಹಂಕ ವಲಯ ಕಚೇರಿ, ಹಾಲಿ ದಾಸರಹಳ್ಳಿ ವಲಯ ಕಚೇರಿ
ಬೆಂಗಳೂರು ದಕ್ಷಿಣ ನಗರ ಪಾಲಿಕೆ – ಹಾಲಿ ದಕ್ಷಿಣ ವಲಯ ಕಚೇರಿ, ಹಾಲಿ ಬೊಮ್ಮನಹಳ್ಳಿ ವಲಯ ಕಚೇರಿ
ಯಾವ್ಯಾವ ಪಾಲಿಕೆಗೆ ಎಷ್ಟೆಷ್ಟು ವಿಧಾನಸಭಾ ಕ್ಷೇತ್ರ ಹಂಚಿಕೆ? –
ಬೆಂಗಳೂರು ಪಶ್ಚಿಮ ನಗರ ಪಾಲಿಕೆ – 10 ವಿಧಾನಸಭಾ ಕ್ಷೇತ್ರ
ಬೆಂಗಳೂರು ಕೇಂದ್ರ ನಗರ ಪಾಲಿಕೆ – 7 ವಿಧಾನಸಭಾ ಕ್ಷೇತ್ರ
ಬೆಂಗಳೂರು ಪೂರ್ವ ನಗರ ಪಾಲಿಕೆ – 2 ವಿಧಾನಸಭಾ ಕ್ಷೇತ್ರ
ಬೆಂಗಳೂರು ಉತ್ತರ ನಗರ ಪಾಲಿಕೆ – 7 ವಿಧಾನಸಭಾ ಕ್ಷೇತ್ರ
ಬೆಂಗಳೂರು ದಕ್ಷಿಣ ನಗರ ಪಾಲಿಕೆ – 8 ವಿಧಾನಸಭಾ ಕ್ಷೇತ್ರ
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ 15 ಐಎಎಸ್, 20 ಕ್ಕೂ ಹೆಚ್ಚು ಕೆಎಎಸ್ ಮತ್ತು ಇಬ್ಬರು ಐಪಿಎಸ್ ಅಧಿಕಾರಗಳ ಹುದ್ದೆಯನ್ನು ರಚನೆ ಮಾಡಲಾಗಿದೆ. ಐದು ಪಾಲಿಕೆಗಳಿಗೂ 28 ವಿಧಾನಸಭಾ ಕ್ಷೇತ್ರಗಳನ್ನ ಹಂಚಿಕೆ ಮಾಡಲಾಗಿದೆ.














