ಮನೆ ರಾಜಕೀಯ ಕೆ ಎಸ್ ಆರ್ ಎಫ್ ಹಾಗೂ ಕೆ ಆರ್ ಇ ಡಿ ಪಿ ಮೂಲಕ ನ್ಯಾನೋ...

ಕೆ ಎಸ್ ಆರ್ ಎಫ್ ಹಾಗೂ ಕೆ ಆರ್ ಇ ಡಿ ಪಿ ಮೂಲಕ ನ್ಯಾನೋ ಟೆಕ್ನಾಲಜಿ ಸಂಶೋಧನೆಗೆ ಹೆಚ್ಚಿನ ಒತ್ತು: ಸಚಿವ ಎನ್ ಎಸ್ ಬೋಸರಾಜು

0

ಬೆಂಗಳೂರು: ಕರ್ನಾಟಕವನ್ನು ನ್ಯಾನೋ ಟೆಕ್ನಾಲಜಿಯ ಕ್ಷೇತ್ರದ ಪ್ರಮುಖ ಸಂಶೋಧನಾ ರಾಜ್ಯ ವನ್ನಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಕರ್ನಾಟಕ ರಿಸರ್ಚ್ ಫೌಂಡೇಶನ್ ಹಾಗೂ ಇ-ಕೆಆರ್‌ಡಿಐಪಿ (e-KRDIP ಕರ್ನಾಟಕ ಆರ್‌&ಡಿ ಇನ್ನೋವೇಷನ್‌ ಫ್ಲಾಟ್‌ಫಾರಂ Karnataka R&D Innovation Platform e-KRDIP) ಮೂಲಕ ನ್ಯಾನೋ ಸಂಶೋಧನೆಗೆ ಒತ್ತು ನೀಡಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ತಿಳಿಸಿದರು.

Join Our Whatsapp Group

ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ಇಂಡಿಯಾ ನ್ಯಾನೋ 2024 ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.

ಬೆಂಗಳೂರು ನಗರ ವಿಶ್ವದ ಪ್ರಮುಖ ಕರ್ನಾಟಕ ರಾಜ್ಯ ಕೈಗಾರಿಕಾ ಸ್ನೇಹಿ ರಾಜ್ಯಗಳಲ್ಲಿ ಪ್ರಮಖವಾಗಿದೆ. ಸ್ಟಾರ್ಟ್‌ ಅಪ್‌ಗಳ ಪ್ರೋತ್ಸಾಹಕ್ಕೆ, ಹೊಸ ಉದ್ಯಮಗಳ ಸ್ಥಾಪನೆಗೂ ರಾಜ್ಯ ಸರಕಾರ ಉತ್ತಮ ಸಹಕಾರ ನೀಡುತ್ತಿದೆ. ರಾಜ್ಯ ಸರಕಾರದ ಕ್ರಾಂತಿಕಾರಿ ಯೋಜನೆಗಳ ಪರಿಣಾಮದಿಂದ ವಿಶ್ವದ ಪ್ರಮುಖ ಸಂಸ್ಥೆಗಳು ಕರ್ನಾಟಕ ರಾಜ್ಯದಲ್ಲಿ ತಮ್ಮ ಘಟಕಗಳನ್ನು ಪ್ರಾರಂಭಿಸಿವೆ. ರಾಜ್ಯದಲ್ಲಿ ಸಂಶೋಧನೆಗೆ ಉತ್ತಮ ಪರಿಸರವಿದ್ದು, ಉತ್ತಮ ಮಾನವ ಸಂಪನ್ಮೂಲ ಕೂಡಾ ಲಭ್ಯವಿದೆ.

ರಾಜ್ಯದಲ್ಲಿ ಸ್ಟಾರ್ಟ್‌ ಅಪ್‌ಗಳು ಮತ್ತು ಉದ್ದಿಮೆಗಳು ನೂತನ ಉತ್ಪನ್ನಗಳ ಸಂಶೋಧನೆಗೆ ಮತ್ತು ಉತ್ಪಾದನೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸಂಶೋಧನಾ ಫೌಂಡೇಶನ್‌ ಸ್ಥಾಪಿಸಲಾಗಿದೆ.  ರಾಜ್ಯವನ್ನು ಸಂಶೋಧನಾ ಹಬ್‌ ಆಗಿಸುವ ನಿಟ್ಟಿನಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಹೊಸ ಸಂಶೋಧನೆಗಳು ಫಲ ಜನ ಸಾಮಾನ್ಯರಿಗೆ, ಸ್ಟಾರ್ಟ್‌ ಅಪ್‌ಗಳಿಗೆ, ಉದ್ದಿಮೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಇ-ಕೆಆರ್‌ಡಿಐಪಿ (ಕರ್ನಾಟಕ ಆರ್‌&ಡಿ ಇನ್ನೋವೇಷನ್‌ ಫ್ಲಾಟ್‌ಫಾರಂ Karnataka R&D Innovation Platform e-KRDIP) ಯನ್ನು ಕೂಡಾ ಸ್ಥಾಪಿಸಲಾಗುತ್ತಿದೆ. ಈ ಎರಡು ಸಂಸ್ಥೆಗಳ ಮೂಲಕ ನ್ಯಾನೋ ಟೆಕ್ನಾಲಜಿ ಸಂಶೋಧನೆ ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಬೆಂಗಳೂರು ಇಂಡಿಯಾ ನ್ಯಾನೋ 2024 ಮಹತ್ವದ ಸಮಾವೇಶ ವಾಗಿದ್ದು ಆಗಸ್ಟ್ 1 ರಿಂದ 3 ರ ವರೆಗೆ ನಡೆಯಲಿದೆ. ಈ ಬಾರಿ ನ್ಯಾನೋ ಟೆಕ್ನಾಲಜಿ ಫಾರ್ ಸಸ್ಟೆನಬಲ್ ಕ್ಲೈಮೇಟ್, ಎನರ್ಜಿ ಮತ್ತು ಹೆಲ್ತ್ ಕೇರ್ ಥೀಮ್ ಅಡಿಯಲ್ಲಿ ನಡೆಯಲಿದ್ದು.   ಈಗಾಗಲೇ ನಮ್ಮ ಇಲಾಖೆಯ ಅಡಿಯಲ್ಲಿ ಸಂಶೋಧನೆ ಗೆ ಅಗತ್ಯ ಅನುದಾನ ನೀಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಸಂಶೋಧನೆ ಅಗತ್ಯವಿದ್ದು ಈ ಬಗ್ಗೆ ಅಗತ್ಯ ಕಾರ್ಯಕ್ರಮಗಳಿಗೆ ಸರಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ ಎಂದರು.

ಕಾರ್ಯಕ್ರಮ ದಲ್ಲಿ ಇಲಾಖೆಯ ಕಾರ್ಯದರ್ಶಿ ಗಳಾದ ಏಕ್ ರೂಪ ಕೌರ್, ಕೆಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಪವನ್ ಕುಮಾರ್ ಮಾಲಪಟಿ, ನ್ಯಾನೋ ಟೆಕ್ನಾಲಜಿ ವಿಷನ್ ಗ್ರೂಪ್ ನ ಚೇರ್ಮನ್ ಪ್ರೊ. ನವಕಾಂತ್ ಭಟ್, ಬೆಂಗಳೂರು ಇಂಡಿಯಾ ನ್ಯಾನೋ 2024 ಕಾರ್ಯಕ್ರಮ ದ ಉಸ್ತುವಾರಿ ಪ್ರೊ. ಪಿ ಎಸ್ ಅನಿಲ್ ಕುಮಾರ್ ಉಪಸ್ಥಿತರಿದ್ದರು.

ಹಿಂದಿನ ಲೇಖನಧಾರ್ಮಿಕ ಸಭೆಗಳಲ್ಲಿ ಮತಾಂತರ ಮುಂದುವರೆದರೆ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗುತ್ತಾರೆ: ಅಲಾಹಾಬಾದ್ ಹೈಕೋರ್ಟ್
ಮುಂದಿನ ಲೇಖನವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡದಿದ್ದರೆ ತೀವ್ರ ಹೋರಾಟ: ಆರ್‌.ಅಶೋಕ ಖಡಕ್‌ ಎಚ್ಚರಿಕೆ