ಮನೆ ಸುದ್ದಿ ಜಾಲ ಗೃಹ ಲಕ್ಷ್ಮಿಯಿಂದ ಗೃಹಿಣಿಯರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಿದೆ: ಚಿಕ್ಕಲಿಂಗಯ್ಯ

ಗೃಹ ಲಕ್ಷ್ಮಿಯಿಂದ ಗೃಹಿಣಿಯರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಿದೆ: ಚಿಕ್ಕಲಿಂಗಯ್ಯ

0


ಮಂಡ್ಯ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಬಡ ಜನರ ಜೀವನಮಟ್ಟ ಸುಧಾರಣೆ ಕಂಡಿದ್ದು, ಅದರಲ್ಲೂ ಗೃಹಲಕ್ಷ್ಮಿ ಹಾಗೂ ಶಕ್ತಿಯೋಜನೆಯಿಂದ ಗೃಹಿಣಿಯರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಚಿಕ್ಕಲಿಂಗಯ್ಯ ಅವರು ಅಭಿಪ್ರಾಯ ಪಟ್ಟರು.

ಅವರು ಇಂದು ಜಿಲ್ಲಾ ಪಂಚಾಯತ್ ನ ಮಿನಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಧಿಕಾರದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೃಹಲಕ್ಷ್ಮೀ ಯೋಜನೆಯಿಂದ ಕೂಲಿ, ಕಾರ್ಮಿಕರು ಹಾಗೂ ಬಡವರಿಗೆ ಅನುಕೂಲವಾಗುತ್ತಿದ್ದು, ಬಾಕಿಯಿರುವ ಫೆಬ್ರವರಿ ಹಾಗೂ ಮಾರ್ಚ್ ಮಾಹೆಯ ಹಣವನ್ನು ಫಲಾನುಭವಿಗಳಿಗೆ ಒದಗಿಸಲು ಕ್ರಮಕೈಗೊಳ್ಳಿ ಎಂದರು.

ಅAಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಸಮೀಕ್ಷೆ ನಡೆಸಿ ಅರ್ಹ ಪಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿಲ್ಲದಿದ್ದರೆ ಅವರ ಮಾಹಿತಿ ಸಂಗ್ರಹಿಸಿ ತಾಲ್ಲೂಕುವಾರು ವರದಿ ನೀಡಿ ಎಂದು ಅಧಿಕಾರಿಗಳಿಗೆ ಹೇಳಿದರು. ಸಾರ್ವಜನಿಕರು ಕಳೆದ ಮಾಹೆ ಪಡಿತರ ಅಂಗಡಿಯಿAದ ಪಡೆದ ರಾಗಿಯಲ್ಲಿ ಹೆಚ್ಚು ದೂಳು ಇರುವುದಾಗಿ ತಿಳಿಸಿದ್ದು, ಅಧಿಕಾರಿಗಳು ಪಡಿತರ ಅಂಗಡಿಯಲ್ಲಿ ಅಕ್ಕಿ ರಾಗಿಯನ್ನು ಸಾರ್ವಜನಿಕರಿಗೆ ಒದಗಿಸುವ ಮೊದಲು ಪರಿಶೀಲಿಸಬೇಕು ಎಂದರು.

 ಅನ್ನಭಾಗ್ಯ ಯೋಜನೆಯಡಿ 2023ರ ಜುಲೈ ನಿಂದ 2024 ರ ಡಿಸೆಂಬರ್ ವರೆಗೆ 7350911 ಫಲಾನುಭವಿಗಳು ಪ್ರತಿಫಲ ಪಡೆದಿದ್ದು, ಒಟ್ಟು 403 ಕೋಟಿ ರೂ ಅನುದಾನ ಬಿಡುಗಡೆಯಾಗಿರುತ್ತದೆ. ಅಧಿಕಾರಿಗಳು ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿAದ ಒದಗಿಸಿರುವ ಅಕ್ಕಿ, ರಾಗಿಯ ಸಂಪೂರ್ಣ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ನೀಡಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ 2025 ರ ಏಪ್ರಿಲ್ ನಿಂದ ಜೂನ್ ವರೆಗೆ 1,96,53,042 ಟಿಕೇಟ್ ಪಡೆದು ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಒಟ್ಟು 61.96 ಕೋಟಿ ರೂಗಳಷ್ಟು ಹಣ ವೆಚ್ಚವಾಗಿರುತ್ತದೆ ಎಂದರು.ಜಿಲ್ಲೆಯಲ್ಲಿ ಎಷ್ಟು ಮಾರ್ಗಗಳಿವೆ, ಎಷ್ಟು ಬಸ್ಸುಗಳು ಕಾರ್ಯನಿರ್ವಹಿಸುತ್ತಿವೆ ಹಾಗೂ ಒಂದು ಬಸ್ಸು ದಿನಕ್ಕೆ ಎಷ್ಟು ಬಾರಿ ಸಂಚರಿಸುತ್ತದೆ ಎಂಬುವುದರ ತಾಲ್ಲೂಕುವಾರು ಮಾಹಿತಿ ಕಲ್ಪಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ಪ್ರತಿಫಲ ಪಡೆಯುತ್ತಿರುವ ಫಲಾನುಭವಿಗಳು ಮೂರು ತಿಂಗಳಿಗೊಮ್ಮೆ ವಿದ್ಯಾಭ್ಯಾಸ ಹಾಗೂ ಉದ್ಯೋಗ ಮಾಡುತ್ತಿರುವುದರ ಬಗ್ಗೆ ಮಾಹಿತಿ ನೀಡಿ ನೋಂದಣಿಯಲ್ಲಿ ದೃಢೀಕರಣ ಇಲ್ಲವಾದಲ್ಲಿ ಯುವನಿಧಿ ಹಣ ಖಾತೆಗೆ ಬರುವುದಿಲ್ಲ ಎಂದು ತಿಳಿಸಿದರು.

 ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಧನುಷ್, ಉಪಾಧ್ಯಕ್ಷರುಗಳಾದ ಪ್ರಶಾಂತ್ ಬಾಬು, ರಾಜೇಂದ್ರ ಎಸ್. ಹೆಚ್, ಹನುಮಂತಯ್ಯ, ಸದಸ್ಯರುಗಳಾದ ಅಜಯ್ ಕುಮಾರ್, ಕೃಷ್ಣೇಗೌಡ, ಕುಮಾರ, ರುದ್ರಪ್ಪ, ವೀಣಾ ಕೋಂ ಶಂಕರ್ ಹಾಗೂ ಮಹಮದ್ ಅನ್ಸರ್ ಉಪಸ್ಥಿತರಿದ್ದರು.