ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮೀ ಯೋಜನೆ ಜಾರಿಗೆ ಸರ್ಕಾರ ಸಿದ್ದತೆಯನ್ನ ನಡೆಸಿದ್ದು, ಪ್ರಜಾಪ್ರತಿನಿಧಿ ನೇಮಕಕ್ಕೆ ಸರ್ಕಾರ ನಿರ್ಧಾರ ಮಾಡಿದೆ.
ಈ ಕುರಿತಾಗಿ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದು, ಪ್ರಜಾಪ್ರತಿನಿಧಿಗಳಿಗೆ ಗೌರವಧನ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ನಿರ್ಧಾರಿಸಿದೆ. ಓರ್ವ ಮಹಿಳೆ ಸೇರಿದಂತೆ ಪ್ರತಿ 1 ಸಾವಿರ ಜನರಿಗೆ ಅಥವಾ 1 ಗ್ರಾಮಕ್ಕೆ ಇಬ್ಬರು ಪ್ರಜಾಪ್ರತಿನಿಧಿ ನೇಮಕ ಮಾಡಲಾಗುತ್ತಿದೆ. ಪ್ರಜಾಪ್ರತಿನಿಧಿಗಳನ್ನ ಒಂದು ತಿಂಗಳ ಅವಧಿಗೆ ಮಾತ್ರ ನೇಮಕಕ್ಕೆ ಸರ್ಕಾರ ಮುಂದಾಗಿದೆ.
ಪ್ರಜಾಪ್ರತಿನಿಧಿ ನೇಮಕಾತಿ ಕುರಿತು ಮಾರ್ಗಸೂಚಿ ಪ್ರಕಟ
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುವ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಂಟಾಗುವ ಒತ್ತಡವನ್ನು ತಪ್ಪಿಸಲು ಹಾಗೂ ಅರ್ಜಿದಾರರಿಗೆ ಅನುಕೂಲವಾಗುವಂತೆ Mobile App ಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವುದು, ಈ Mobile App ನ ಮೂಲಕ ಅರ್ಜಿ ಭರ್ತಿ ಮಾಡಿ ಸಲ್ಲಿಸಲು ಪುಜಾ ಪ್ರತಿನಿಧಿಯವರನ್ನು ನೇಮಕ ಮಾಡುವುದು.
“ಪ್ರಜಾ ಪ್ರತಿನಿಧಿ”ರವರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ತಂತ್ರಜ್ಞಾನ ಅಡೆ ತಡೆಗಳನ್ನು ಎದುರಿಸುತ್ತಿರುವ ನಾಗರಿಕರಿಗೆ ಸಹಾಯ ಮಾಡುತ್ತಾರೆ. ಕರ್ನಾಟಕ ಸರ್ಕಾರವು ಅಭಿವೃದ್ಧಿ ಪಡಿಸಿದ ಮೊಬೈಲ್ ಅಪ್ಲಿಕೇಶನ್ ಅನ್ನು ಅವರು ನೋಂದಣಿಗಾಗಿ ಬಳಸುತ್ತಾರೆ, “ಪ್ರಜಾ ಪ್ರತಿನಿಧಿ”ರವರು ಉದ್ದೇಶಿತ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡುತ್ತಾರೆ ಮತ್ತು ನಾಗರಿಕರ ಪರವಾಗಿ ಅರ್ಜಿ ಸಲ್ಲಿಸುತ್ತಾರೆ, “ಪ್ರಜಾ ಪ್ರತಿನಿಧಿ ರವರು ಈ ಸೇವೆಯನ್ನು ಸ್ವಯಂ ಪ್ರೇರಣೆಯಿಂದ ಮಾಡುತ್ತಿದ್ದು ಅವರಿಗೆ ಯಾವುದೇ ಶುಲ್ಕ ಪಾವತಿಸುವಂತಿಲ್ಲ.
“ಪ್ರಜಾ ಪ್ರತಿನಿಧಿಗಳು ಆಯಾ ತಾಲ್ಲೂಕಿನ ನಿವಾಸಿಗಳಾಗಿದ್ದು, 10ನೇ ತರಗತಿ ಉತ್ತೀರ್ಣರಾಗಿರಬೇಕು ಹಾಗೂ ಗೃಹಲಕ್ಷ್ಮಿ ಯೋಜನೆಯಡಿ ಸ್ವಯಂ ಸೇವಕರಾಗಿ ಕೆಲಸ ನಿರ್ವಹಿಸಹಿಸಲು ಆಸಕ್ತಿಯುವುಳ್ಳವರಾಗಿರಬೇಕು. ಇನ್ನೂ ಆಯ್ಕೆಯಾದ “ಪ್ರಜಾ ಪ್ರತಿನಿಧಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯಿಂದ ಡಿಜಿಟೈಸ್ ಮಾಡಲಾಗುತ್ತದೆ. ಪಡಿತರ ಚೀಟಿ ವಿವರಗಳನ್ನು ಪರಿಶೀಲಿಸುವ ಮೂಲಕ ‘ಪ್ರಜಾ ಪುತಿನಿಧಿ”ಗಳು ನಿಯೋಜಿಸಲಾದ ಎಂದು ಗ್ರಾಮಕ್ಕೆ ಅಥವಾ ವಾರ್ಡ್ ಗಳ ಸೇರಿದ್ದಾರೆ ಮತ್ತು ಮೊಬೈಲ್ ಸಂಖ್ಯೆಗಳು ಪುನರಾವರ್ತನೆಯಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿಯು ಖಚಿತಪಡಿಸಿಕೊಳ್ಳಬೇಕು. ವಿದ್ಯಾರ್ಹತೆಯನ್ನು ಭೌತಿಕವಾಗಿ ಪರಿಶೀಲಿಸುವುದು, ಒದಗಿಸಿದ ಲಾಗಿನ್ ಅನ್ನು ಬಳಸಿಕೊಂಡು ಸೇವಾ ಸಿಂಧು ಪೋರ್ಟಲ್‌ಗೆ ವಿವರಗಳನ್ನು ಅಳವಡಿಸಲಾಗುವುದು, ಅಪ್ಲಿಕೇಶನ್ ಸಹ ಮೊಬೈಲ್ ಸಂಖ್ಯೆ ಮತ್ತು ಆರ್ ಸಿ ಸಂಖ್ಯೆಯನ್ನು ಡಿ-ಡಪ್ಲಿಕೇಟ್ ಮಾಡುತ್ತದೆ.