ಮನೆ ಸುದ್ದಿ ಜಾಲ ಅಂತರ್ಜಲ ಅಭಿವೃದ್ದಿಪಡಿಸಲು ಅಂತರ್ಜಲ ಜನ ಜಾಗೃತಿ ಕಾರ್ಯಾಗಾರ: ಶ್ರೀನಿವಾಸ್

ಅಂತರ್ಜಲ ಅಭಿವೃದ್ದಿಪಡಿಸಲು ಅಂತರ್ಜಲ ಜನ ಜಾಗೃತಿ ಕಾರ್ಯಾಗಾರ: ಶ್ರೀನಿವಾಸ್

0

ಮೈಸೂರು(Mysuru):  ಅಂತರ್ಜಲವನ್ನು ಅಭಿವೃದ್ದಿಪಡಿಸಲು ಅಂತರ್ಜಲ ಜನಜಾಗೃತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಂಜನಗೂಡು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀನಿವಾಸ್ ತಿಳಿಸಿದರು.


ಅಂತರ್ಜಲ ನಿರ್ದೇಶನಾಲಯ, ಬೆಂಗಳೂರು ಮತ್ತು ಹಿರಿಯ ಭೂವಿಜ್ಞಾನಿ, ಜಿಲ್ಲಾ ಅಂತರ್ಜಲ ಕಛೇರಿ, ಮೈಸೂರು ನಗರದ ನಜರ್‌ಬಾದ್‌’ನ ತಾಲ್ಲೂಕು ಕಛೇರಿಯ ಸಂಕೀರ್ಣದಲ್ಲಿರುವ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂತರ್ಜಲ ಜನ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವರ್ಷವು ಆಯೋಜಿಸುವಂತೆ ಅಂತರ್ಜಲ ಅಭಿವೃದ್ಧಿ, ಸದ್ಬಳಕೆ, ಸಂರಕ್ಷಣೆ, ಮಳೆನೀರಿನ ಸಂಗ್ರಹಣೆ, ಮತ್ತು ಮರುಬಳಕೆ, ತೆರೆದ ಕೊಳವೆ ಬಾವಿಗಳಲ್ಲಿ ಚಿಕ್ಕ ಮಕ್ಕಳು ಬೀಳುವ ಅವಘಡಗಳನ್ನು ನಿಂಯತ್ರಿಸುವ ಹಾಗೂ ಅಂತರ್ಜಲ ಅಧಿನಿಯಮಗಳ ಬಗ್ಗೆ ಸರ್ಕಾರದ ಅನುಷ್ಠಾನಾಧಿಕಾರಿಗಳಿಗೆ ಹಮ್ಮಿಕೊಳ್ಳುವ ಕಾರ್ಯಾಗಾರವನ್ನು ಮೈಸೂರು & ನಂಜನಗೂಡು ತಾಲ್ಲೂಕುಗಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ನೀರು ಸರಬರಾಜು ಇಂಜಿನಯರ್ ಹಾಗೂ ಇತರೆ ಅಧಿಕಾರಿಗಳಿಗೆ ಒಂದು ದಿನದ ಅಂತರ್ಜಲ ಕಾರ್ಯಾಗಾರವನ್ನು ನಡೆಸಲಾಯಿತು.
ನಂಜನಗೂಡು ತಾಲ್ಲೂಕಿನ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಈ ಹಿಂದೆ ಕುಡಿಯುವ ನೀರಿನ ಆಹಾಕಾರವಿದ್ದ ಕಾರಣ ಟ್ಯಾಂಕರ್‌’ಗಳಲ್ಲಿ ನೀರನ್ನು ಒದಗಿಸಿದ ಉದಾಹರಣೆಗಳಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಉತ್ತಮ ಮಳೆಯಿಂದಾಗಿ ಕೆರೆಗಳ ಪುನಶ್ಚೇತನ ಹಾಗೂ ಅಂತರ್ಜಲ ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಫಲಶೃತಿಯಾಗಿ ಇಂದು ಕುಡಿಯುವ ನೀರಿಗಾಗಿ ಬವಣೆ ಇಲ್ಲದಂತಾಗಿದೆ. ಇನ್ನು ಮುಂದೆಯೂ ಸಹ ಜಲಶಕ್ತಿ ಕಾರ್ಯಕ್ರಮದಡಿಯಲ್ಲಿ ನೀರು ಹಾಗೂ ನೈರ್ಮಲ್ಯಕ್ಕೆ ಪ್ರಾಮುಖ್ಯತೆ ನೀಡಿ ಉತ್ತಮ ಯೋಜನೆಗಳನ್ನು ಹಮ್ಮಿಕೊಂಡು “ಮಳೆ ಬಿದ್ದ ಜಾಗದಲ್ಲಿಯೇ ನೀರನ್ನು ಹಿಡಿದಿಡಿ” ( Catch the Rain Where it Falls    ) ಎಂಬ ಸಿದ್ಧಾಂತದೊಂದಿಗೆ ಕಾರ್ಯ ನಿರ್ವಹಿಸಿದರೆ ಜಲ ನಿರ್ವಹಣೆಯಲ್ಲಿ ಸುಸ್ಥಿರತೆ ಕಾಣಬಹುದು ಎಂದರು.
ಮೈಸೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಗಿರೀಶ್ ಹೆಚ್.ಡಿ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈಗಾಗಲೇ ಹಲವು ಪಿ.ಡಿ.ಓ ಗಳು ಶ್ರಮವಹಿಸಿ ಹಲವು ಜನಪರ ಯೋಜನೆಗಳನ್ನು ಯಶಸ್ವಿಗೊಳಿಸಿರುವ ಯಶೋಗಾತೆಗಳನ್ನು ಸ್ಮರಿಸಿದರು. ಅಂತರ್ಜಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಮ್ಮಿಕೊಂಡಿರುವ ಫಲವಾಗಿ ಜಿಲ್ಲೆಯಲ್ಲಿ ಉತ್ತಮ ಮಳೆಯಿಂದಾಗಿ ಅಂತರ್ಜಲ ಮಟ್ಟದಲ್ಲಿ ಚೇತರಿಕೆ ಕಂಡಿದ್ದು, ಮುಂದಿನ ದಿನಗಳಲ್ಲಿಯೂ ಸಹ ಅಂತರ್ಜಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವಿರುತ್ತದೆ ಎಂದು ತಿಳಿಸಿದರು.
ಮೈಸೂರು ಜಿಲ್ಲೆಯ ನಿವೃತ್ತ ಭೂವಿಜ್ಞಾನಿ, .ಕೆ.ವಿ ಆರ್ ಚೌಧರಿ, ಹಿರಿಯ ಭೂವಿಜ್ಞಾನಿಗಳಾದ ಸೌಮ್ಯ.ಕೆ.ಜಿ ಮತ್ತು ಶೋಭಾರಾಣಿ ಪಿ ಎಸ್, ಚಾಮರಾಜನಗರ ಹಿರಿಯ ಭೂವಿಜ್ಞಾನಿ ಧನಲಕ್ಷಿö್ಮ ಆರ್, ಇವರುಗಳಿಂದ ಅಂತರ್ಜಲ ವಿಷಯದ ಬಗ್ಗೆ ಪ್ರಾತ್ಯಕ್ಷತೆಯೊಂದಿಗೆ ಉಪನ್ಯಾಸಗಳನ್ನು ನೀಡಲಾಯಿತು.
ಇಸ್ರೋದ ನಿವೃತ್ತ ವಿಜ್ಞಾನಿಗಳದ ಪ್ರೋ.ವಿ ಜಗನ್ನಾಥ್, ಸಹಾಯಕ ನಿರ್ದೇಶಕರದ ರಘುನಾಥ್, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು.