ಮನೆ ರಾಜಕೀಯ ಜೆಡಿಎಸ್ ಅಧಿಕೃತ ವೆಬ್’ಸೈಟ್ ನಿಂದ ಜಿ.ಟಿ.ದೇವೇಗೌಡರ ಫೋಟೋ ಔಟ್

ಜೆಡಿಎಸ್ ಅಧಿಕೃತ ವೆಬ್’ಸೈಟ್ ನಿಂದ ಜಿ.ಟಿ.ದೇವೇಗೌಡರ ಫೋಟೋ ಔಟ್

0

ಮೈಸೂರು(Mysuru):ಜೆಡಿಎಸ್​ ವೆಬ್​ಸೈಟ್​ನಿಂದ ಜಿ.ಟಿ.ದೇವೇಗೌಡರ ಫೋಟೋ, ಹೆಸರನ್ನು ತೆಗೆದುಹಾಕಲಾಗಿದ್ದು, ಹೊಸ ಬೆಳವಣಿಗೆಗೆ ಮುನ್ನುಡಿ ದೊರೆತಿದೆ.

ಹಳೆ ಮೈಸೂರು ಭಾಗದ ಪ್ರಭಾವಿ ನಾಯಕರಾಗಿದ್ದರೂ ಜಿಟಿಡಿ ಅವರ ಫೋಟೋ ಮತ್ತು ಹೆಸರನ್ನು ಪಕ್ಷದ ಎಲ್ಲಾ ಪೋಸ್ಟರ್ ನಿಂದಲೂ ತೆಗೆಯಲಾಗುತ್ತಿದೆ. ಜೆಡಿಎಸ್ ಅಧಿಕೃತ ವೆಬ್‌ಸೈಟ್‌ನಲ್ಲಿ ಜೆಡಿಎಸ್ ನ ಎಲ್ಲಾ ಶಾಸಕರು ಮತ್ತು ಸಂಸದರ ಫೋಟೋಗಳು ಮತ್ತು ಹೆಸರುಗಳಿವೆ. ಆದರೆ ಜಿ.ಟಿ.ದೇವೇಗೌಡರ ಹೆಸರೇ ಇಲ್ಲ.

https://jds.ind.in/ ಹೆಸರಿನಲ್ಲಿ ಪಕ್ಷ ಸಂಘಟನೆಯ ಅಧಿಕೃತ ವೆಬ್​ಸೈಟ್ ರಚನೆ ಮಾಡಲಾಗಿದೆ. ಈ ವೆಬ್​ಸೈಟ್​​ನಲ್ಲಿ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರ ಹೆಸರು ಹಾಗೂ ಕಚೇರಿ ವಿಳಾಸದ ಜತೆಗೆ ದೂರವಾಣಿ ಸಂಖ್ಯೆಯನ್ನು ಒಳಗೊಂಡ ಮಾಹಿತಿ ನೀಡಲಾಗಿದೆ.

ಸದರಿ ವೆಬ್​ಸೈಟ್ ನಲ್ಲಿ ಜೆಡಿಎಸ್ ಹಿರಿಯ ಶಾಸಕರಾಗಿರುವ ಜಿ.ಟಿ.ದೇವೇಗೌಡರ ಕುರಿತ ಸಣ್ಣ ಮಾಹಿತಿಯೂ ಇಲ್ಲ. ಮೈಸೂರಿನ ಶಾಸಕ ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ಕೆ.ಮಹದೇವು ಅವರ ಸಂಪೂರ್ಣ ಮಾಹಿತಿ ಈ ವೆಬ್​ಸೈಟ್​​ನಲ್ಲಿದೆ. ಈಗಾಗಲೇ ಮೈಸೂರು ಭಾಗದ ಜೆಡಿಎಸ್ ಮುಖಂಡರ ಜಾಹೀರಾತು ಫಲಕದಲ್ಲಿ ಜಿಟಿಡಿ ಅವರ ಫೋಟೋ ತೆಗೆಯಲಾಗಿದೆ.

ದೇವೇಗೌಡರ ಬೆಂಬಲಿಗರು ಅದರಲ್ಲೂ ಮೈಸೂರಿನ ಗ್ರಾಮಾಂತರ ಭಾಗದ ಜನರು ತಮ್ಮ ನಾಯಕನ ಮುಂದಿನ ನಡೆ  ಏನು ಎಂದು ತಿಳಿಯುವ ಕುತೂಹಲದಲ್ಲಿದ್ದಾರೆ. ಕ್ಷೇತ್ರದಲ್ಲಿ ಅವರಿಗಿರುವ ಪ್ರಭಾವವನ್ನು ಪರಿಗಣಿಸಿ ಜೆಡಿಎಸ್ ಮುಖಂಡ ಹಾಗೂ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಇತ್ತೀಚೆಗೆ ದೇವೇಗೌಡರನ್ನು ಭೇಟಿ ಮಾಡಿ ಪಕ್ಷದಲ್ಲಿಯೇ ಉಳಿಯುವಂತೆ  ಮನವಿ ಮಾಡಿದ್ದರು.