ಚಿಕ್ಕಮಗಳೂರು: ಗ್ಯಾರಂಟಿ ಗೊಂದಲಗಳ ಬಗ್ಗೆ ಬಜೆಟ್ ವೇಳೆ ಎಲ್ಲಾ ಚರ್ಚೆ ಆಗುತ್ತದೆ. ಗ್ಯಾರಂಟಿಗಳನ್ನು ಗೊಂದಲದ ಗೂಡು ಮಾಡಿದ್ದಾರೆ, ಎಲ್ಲಾ ಚರ್ಚೆ ಆಗುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕ ಸ್ಥಾನದ ಬಗ್ಗೆ ನಾಳೆ ಸಂಜೆ ಗೊತ್ತಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ ನೋಟೀಸ್ ಕ್ಯಾರೇ ಅನ್ನದ ನಾಯಕರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲವನ್ನೂ ರಾಜ್ಯಾಧ್ಯಕ್ಷರು ನೋಡಿಕೊಳ್ಳುತ್ತಾರೆ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ರಾಜಕೀಯ ಮಾತನಾಡೋಕೆ ಇಲ್ಲಿಗೆ ಬರಬೇಕಾ ಬೆಂಗಳೂರಿನಲ್ಲೇ ಮಾತನಾಡ್ತೀವಿ. ನಾವು ಬಂದಿರೋದು ಅಶೋಕ್ ಹುಟ್ಟುಹಬ್ಬ ಆಚರಣೆಗೆ ಅಷ್ಟೆ ಎಂದರು.
ನೋಡೋಣ ಏನೇನು ಮಾಡ್ತಾರೆ, 200 ಯೂನಿಟ್ ಅಂದ್ರು, ವರ್ಷದ ಸರಾಸರಿ ಅಂದರು ನೋಡೋಣ. ಬಹಳ ಗೊಂದಲ ಮಾಡಿ, ಪವರ್ ರೇಟ್ ಕೂಡ ಹೆಚ್ಚು ಮಾಡಿದ್ದಾರೆ ಜನರಿಗೆ ಎಲೆಕ್ಟ್ರಿಕ್ ಶಾಕ್ ಕೂಡ ನೀಡಿದ್ದಾರೆ, ನೋಡೋಣ ಮುಂದೆ ಏನ್ಮಾಡ್ತಾರೆ ಎಂದು ಹೇಳಿದರು.
Saval TV on YouTube