ಮನೆ ಸ್ಥಳೀಯ ಜುಲೈ 5 ರಿಂದ 14 ರವರೆಗೆ ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ ನಲ್ಲಿ ಗುಜರಾತ್ ಕರಕುಶಲ...

ಜುಲೈ 5 ರಿಂದ 14 ರವರೆಗೆ ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ ನಲ್ಲಿ ಗುಜರಾತ್ ಕರಕುಶಲ ಉತ್ಸವ

0

ಮೈಸೂರು: ಜೆಎಸ್‌ಎಸ್ ಮಹಾವಿದ್ಯಾಪೀಠದ ಜೆಎಸ್‌ಎಸ್ ಮೈಸೂರು ಹಾತ್‌ ನಲ್ಲಿ ಸತತವಾಗಿ 9 ನೇ ಬಾರಿ ವಿಶೇಷವಾಗಿ ದೇಶದ ಪ್ರಾಂತೀಯ ಮೇಳವಾದ ಗುಜರಾತ್ ಹ್ಯಾಂಡಿ ಕ್ರಾಫ್ಟ್ ಉತ್ಸವ – 2024 ರನ್ನು ಜುಲೈ 05 ರಿಂದ 14ರ ವರೆಗೆ ಏರ್ಪಡಿಸಲಾಗಿದೆ.

Join Our Whatsapp Group

ಮೇಳದ ವಿಶೇಷತೆಗಳು: ರಾಜ್ಯ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುವ ಕುಶಲಕರ್ಮಿಗಳು ಒಂದೇ ಸೂರಿನಡಿಯಲ್ಲಿ ಕರಕುಶಲ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡುತ್ತಾರೆ. ಗುಜರಾತ್ ರಾಜ್ಯದ ವಿವಿಧ ಭಾಗಗಳ ಪ್ರಸಿದ್ಧ ಹಾಗೂ ಕ್ರೀಯಾಶೀಲರಾಗಿರುವ ಸುಮಾರು 70 ಕ್ಕೂ ಹೆಚ್ಚು ಕುಶಲಕರ್ಮಿಗಳು ಮೇಳದಲ್ಲಿ ಭಾಗವಹಿಸುವರು. ಕುಶಲಕರ್ಮಿಗಳು ತಯಾರಿಸಿದ ಪಟೋಲ ಸೀರೆಗಳು, ಬಾಂದಿನಿ ಸೀರೆಗಳು, ಕಸೂತಿ ಮಾಡಿದ ಬೆಡ್ ಶೀಟ್‌ಗಳು, ಟವಲ್‌ಗಳು; ಕುಶನ್ ಕವರ್‌ಗಳು, ಪರಿಸರ ಸ್ನೇಹಿ ಆಭರಣಗಳು, ಡ್ರೆಸ್ ಮೆಟೀರಿಯಲ್‌ಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಬೀಡ್ ವರ್ಕ್, ಮೆಟಲ್ ವರ್ಕ್, ಕುರ್ತಿಗಳು, ಚನಿಯಾ ಚೋಲಿ, ಬಾಂದಿನಿ ಹಾಗೂ ಇನ್ನಿತರ ಆಕರ್ಷಣೀಯ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಿದ್ದಾರೆ.

ಸಾಂಸ್ಕೃತಿಕ ಸಂಜೆ 5 ರಿಂದ 7 – ಜುಲೈ -2024 ರ ತನಕ ಸಂಜೆ ಗಂಟೆ 06 ರಿಂದ 08 ರ ತನಕ ಗುಜರಾತಿನ ಪ್ರಸಿದ್ಧ ಸಾಂಸ್ಕೃತಿಕ ಕಲಾ ತಂಡಗಳಿಂದ ಗರ್ಭಾ ನೃತ್ಯ ಪ್ರದರ್ಶನ ಗೊಳ್ಳಲಿದೆ ಮೈಸೂರಿನ ಕಲಾ ರಸಿಕರು ಉಚಿತವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇದೊಂದು ಸುವರ್ಣ ಅವಕಾಶವಾಗಿದೆ.

ಗುಜರಾತ್ ಕರಕುಶಲ ವಸ್ತುಗಳ ನೈಜ ಪ್ರಾತ್ಯಕ್ಷತೆ ಮತ್ತು ತರಬೇತಿ : ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಕಾರ್ಪೋರೇಟ್ ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಆಸಕ್ತಿಯುಳ್ಳವರಿಗೆ ಗುಜರಾತಿನ ಪಾರಂಪರಿಕ ಕಲೆಯ ಬಗ್ಗೆ ತರಬೇತಿಯನ್ನು ಗುಜರಾತಿನ ಕುಶಲಕರ್ಮಿಗಳು ಈ ಮೇಳದ ಸಂದರ್ಭದಲ್ಲಿ ನೀಡಲಿದ್ದಾರೆ.

ಗುಜರಾತ್ ಹ್ಯಾಂಡಿ ಕ್ರಾಫ್ಟ್ ಉತ್ಸವದ ಉದ್ಘಾಟನೆಯು  ಜುಲೈ 05ರ  ಶುಕ್ರವಾರದಂದು ಸಂಜೆ 4.00 ಘಂಟೆಗೆ ಏರ್ಪಡಿಸಲಾಗಿದೆ.

ಮೇಳದ ಉದ್ಘಾಟನೆಯನ್ನು  ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ನಿರ್ದೇಶಕಿ ಪಿ.ಐ. ಶ್ರೀವಿದ್ಯಾ ಇವರು ನೆರವೇರಿಸಲಿರುವರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ. ಬೆಟಸೂರಮಠ ವಹಿಸಿಕೊಳ್ಳುವರು. ವಿಶೇಷ ಅತಿಥಿಗಳಾಗಿ ಗುಜರಾತ್ ಇಂಡೆಕ್ಸ್-ಸಿ ವ್ಯವಸ್ಥಾಪಕ ನಿರ್ದೇಶಕರು ಎನ್.ಡಿ. ಪರ್ಮಾರ್, ಜಿಲ್ಲಾ ಪಂಚಾಯತ್  ಮುಖ್ಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಕೆ.ಎಂ. ಗಾಯಿತ್ರಿ,  ಕೆ.ಎಂ.ಎ.ಎಸ್ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಅಶಾದ್ ಉರ್ ರಹಮಾನ್ ಶರೀಫ್,  ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಜವಳಿ ಮಂತ್ರಾಲಯ ನಿರ್ದೇಶಕ ಡಾ. ಯತೀಂದ್ರ ಲಕ್ಷ್ಮಣ್ಣ

  (ಕ್ಲಾಸ್ -1) ಇಂಡೆಕ್ಸ್-ಸಿ ವ್ಯವಸ್ಥಾಪಕ ಆರ್.ಎಸ್. ಚಾ, ಹಿರಿಯ ಅಧಿಕಾರಿ ಎಸ್.ಆರ್. ಪ್ರಜಾವತಿ, ಮಾರುಕಟ್ಟೆ ವ್ಯವಸ್ಥಾಪಕ ಡಾ. ಸ್ನೇಹಲ್ ಮಕ್ವಾನಾ ಭಾಗವಹಿಸುವರು.

ಈ ಮೇಳಕ್ಕೆ ಪ್ರವೇಶವು ಉಚಿತವಾಗಿರುತ್ತದೆ. ಈ ವಸ್ತು ಪ್ರದರ್ಶನದಲ್ಲಿ ಭಾಗವಹಿಸುತ್ತಿರುವ ಗುಜರಾತ್ ರಾಜ್ಯದ ಕುಶಲಕರ್ಮಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರುಗಳು ಭೇಟಿ ನೀಡಿ ಪ್ರೋತ್ಸಾಹಿಸಬೇಕೆಂದು ಈ ಮೂಲಕ ಕೋರಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮೈಸೂರು ನಗರ ಬಸ್ ನಿಲ್ದಾಣದಿಂದ ಪ್ರತಿ ನಿತ್ಯ ಬಸ್ ನಂ.117/1 ರ ಬಸ್ಸುಗಳು ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ಗೆ ಸಂಚರಿಸಲಿದೆ.

ಹಿಂದಿನ ಲೇಖನಕ್ಷಮಿಸುವ ಮೂಲಕ ಬಿಡುಗಡೆ ಹೊಂದಿ
ಮುಂದಿನ ಲೇಖನಭಾರಿ ಮಳೆಗೆ ಚಾರ್ಮಾಡಿ ಘಾಟಿಯ ರಸ್ತೆ, ತಡೆಗೋಡೆಯಲ್ಲಿ ಬಿರುಕು: ಕುಸಿಯುವ ಭೀತಿ