ಗುಂಡ್ಲುಪೇಟೆ: ತಾಲ್ಲೂಕಿನ ಮುಸ್ಲಿಂ ಬಾಂಧವರು ಪಟ್ಟಣದ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ರಂಜಾನ್ ಹಬ್ಬವನ್ನು ಆಚರಿಸಿದರು.
ನಗರದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಈದ್ಗಾ ಮೈದಾನದ ಬಳಿ ತೆರಳಿ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಷಯ ಕೋರಿದರು.
ಒಂದು ತಿಂಗಳು ಉಪವಾಸ ವ್ರತ ಕೈಗೊಂಡು ರಂಜಾನ್ ಅಚರಿಸಲಾಯಿತು. ಮಕ್ಕಳು, ಹಿರಿಯರು ಮತ್ತು ಯುವಕರು ಹೊಸ ಬಟ್ಟೆಗಳನ್ನು ಧರಿಸಿ ಎಲ್ಲರೂ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ನೆಂಟರಿಷ್ಟರು ಸಮಾಜದ ಬಂಧುಗಳ ಜೊತೆಗೆ ಸಂಭ್ರಮದಿಂದ ಹಬ್ಬವನ್ನು ಅಚರಿಸಿದರು.
ಈ ಸಂದರ್ಭದಲ್ಲಿ ಜಾಮಿಯಾ ಮಸೀದಿ ಗುರುಗಳಾದ ಜಾಬೀರ್ ಹಜ್ರತ್ ಪವಿತ್ರ ರಂಜಾನ್ ತಿಂಗಳ ಕುರಿತು ಹಲವು ವಿಚಾರಗಳನ್ನು ತಿಳಿಸಿದರು, ಲಬಾಬಿನ್ ಮಸೀದಿ ಗುರುಗಳಾದ ಅಬ್ದುಲ್ ಕರೀಮ್ ರವರು ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕ ಗಣೇಶ್ ಪ್ರಸಾದ್, ಪುರಸಭೆ ಅಧ್ಯಕ್ಷ ಮಧುಸೂದನ್, ನಾಜಿಮುದ್ದೀನ್, ಇಲಿಯಾಸ್, ಜಾಮಿಯಾ ಮಸೀದಿ ಅಧ್ಯಕ್ಷ ಸರ್ದಾರ್, ಶಾಹುಲ್, ನವೀದ್, ನಿಜಾಮುದ್ದೀನ್, ಜಾಫರ್, ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್, ಮುಸ್ಲಿಂ ಮುಖಂಡರುಗಳು ಹಾಗೂ ಸಾವಿರಾರು ಮುಸಲ್ಮಾನ್ ಬಾಂಧವರು ಹಾಜರಿದ್ದರು.