ಮನೆ ಸುದ್ದಿ ಜಾಲ ಗುರುಪೂರ್ಣಿಮಾ: ಅಕ್ಷರಾಭ್ಯಾಸದಲ್ಲಿ ತೊಡಗಿದ ಮಕ್ಕಳು

ಗುರುಪೂರ್ಣಿಮಾ: ಅಕ್ಷರಾಭ್ಯಾಸದಲ್ಲಿ ತೊಡಗಿದ ಮಕ್ಕಳು

0

ಮಂಡ್ಯ: ಮಂಡ್ಯ ಎಜುಕೇಷನ್‌ ಸೊಸೈಟಿ ಶಾಲೆಯಲ್ಲಿ ಗುರುಪೂರ್ಣಿಮಾ ಅಂಗವಾಗಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಅಕ್ಷರಾಭ್ಯಾಸಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಪತ್ರಕರ್ತ ಶ್ರೀಪಾದು ಅವರು, ಅಕ್ಷರಾಭ್ಯಾಸ ಮಾಡಲು ಯಾವುದೇ ಜಾತಿಬೇಧವಿರುವುದಿಲ್ಲ, ಎಲ್ಲ ಜಾತಿಯಲ್ಲಿಯೂ ಮಹನೀಯರು ಹುಟ್ಟಿದ್ದಾರೆ. ತಾಯಿ ತಂದೆಗೆ ಮೊದಲು ಗೌರವ ನೀಡುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಅಕ್ಷರಾಭ್ಯಾಸವು ಮಗುವಿಗೆ ಅಕ್ಷರ ಕಲಿಸುವ ಸಾಂಪ್ರದಾಯಿಕ ಹಬ್ಬವಾಗಿದೆ. ಹಿಂದಿನಿಂದಲೂ ಈ ಸಂಸ್ಕೃತಿ ನಡೆದು ಬಂದಿದೆ. ಮಗುವಿಗೆ ಅಕ್ಷರ ಕಲಿಸುವ ಮುನ್ನಾ ತಂದೆ ತಾಯಂದಿರು ತಮಗಿಷ್ಟವಾದ ದೇವಾಲಯದಲ್ಲಿ ಅಥವಾ ಶಾಲೆಗಳಲ್ಲಿ ಅಕ್ಷರಾಭ್ಯಾಸದಂತಹ ಕಾರ್ಯಕ್ರಮ ಆಯೋಜಿಸಿ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸುತ್ತಾರೆ ಎಂದು ಅಭಿಪ್ರಾಯ ಪಟ್ಟರು.

ಮಂಡ್ಯ ಎಜುಕೇಷನ್‌ ಟ್ರಸ್ಟ್‌ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ ಮಾತನಾಡಿ, ಕನ್ನಡ ಭಾಷೆಗೆ ಹೆಚ್ಚು ಒತ್ತು ನೀಡುವುದು ಮುಖ್ಯವಾಗಬೇಕು. ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ಇಂಗ್ಲಿಷ್‌ ಸೇರಿದಂತೆ ಇತರೆ ಭಾಷೆಯ ಜ್ಞಾನವು ಮಕ್ಕಳಿಗೆ ಇರಲಿ, ಆದರೆ ಕನ್ನಡ ಭಾಷೆಗೆ ಮೊದಲ ಪ್ರಾಧಾನ್ಯತೆ ನೀಡಬೇಕು. ಶಿಕ್ಷಣದ ಆರಂಭವು ಮಗುವಿಗೆ ಒಂದು ಮೈಲಿಗಲ್ಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ತಂದೆತಾಯಿ, ತಾತ ಅಜ್ಜಿಯರೊಂದಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್‌ ಅಧ್ಯಕ್ಷ ಜಿ.ಕೆ.ಗುಂಡೂರಾವ್‌, ನಿರ್ದೇಶಕರಾದ ರಘುನಂದನ್‌, ಸತ್ಯನಾರಾಯಣ್‌ರಾವ್‌, ವೆಂಕಟೇಶ್‌, ಮುಖ್ಯಶಿಕ್ಷಕಿ ಅನಿತಾ ಸೇರಿದಂತೆ ಇತರರು ಭಾಗವಹಿಸಿದ್ದರು.