ಮನೆ ಅಪರಾಧ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದ ಹೆಚ್.ಡಿ.ಕೋಟೆ ಬಿಇಒ

ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದ ಹೆಚ್.ಡಿ.ಕೋಟೆ ಬಿಇಒ

0

ಮೈಸೂರು (Mysuru): ಹೆಚ್‌.ಡಿ.ಕೋಟೆ ಬಿಇಒ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಇವರ ಜೊತೆಗೆ ಕಚೇರಿ ಅಧೀಕ್ಷಕ ಕೂಡ ಸಿಕ್ಕಿ ಬಿದ್ದಿದ್ದಾರೆ.

ಹೆಚ್‌.ಡಿ.ಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಚಂದ್ರಕಾಂತ್‌ ಹಾಗೂ ಕಚೇರಿ ಅಧೀಕ್ಷಕ ಶಂಕರ್‌ ಅವರು ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ನಿವೃತ್ತಿ ವೇತನ ದಾಖಲಾತಿಗಳನ್ನು ಸಿದ್ಧ ಮಾಡಿಕೊಡಲು ನಿವೃತ್ತ ಶಿಕ್ಷಕರೊಬ್ಬರಿಂದ ಚಂದ್ರಕಾಂತ್‌ 5000 ರೂ. ಹಾಗೂ ಶಂಕರ್‌ 2000 ರೂ. ಒಟ್ಟು ಏಳು ಸಾವಿರ ರೂ. ಲಂಚ ಸ್ವೀಕರಿಸುವಾಗ ಎಸಿಬಿ ತಂಡ ಅವರನ್ನು ಬಂಧಿಸಿದ್ದಾರೆ.

ಮೈಸೂರು ವಿಭಾಗದ ಎಸಿಬಿ ಎಸ್ಪಿ ಜೆ.ಸಜೀತ್‌ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆ ನಡೆಸಲಾಗಿದೆ.

ನಂಜನಗೂಡು ತಾಲೂಕು ರಾಂಪುರ ನಿವಾಸಿ ನಿವೃತ್ತ ಶಿಕ್ಷಕರೊಬ್ಬರು ಪೆನ್ಷನ್‌ ದಾಖಲೆಗಳನ್ನು ರೆಡಿ ಮಾಡಿ ಬೆಂಗಳೂರಿನ ಮಹಾಲೆಕ್ಕಾಧಿಕಾರಿಗಳಿಗೆ ಕಳುಹಿಸುವ ಸಂಬಂಧ ಬಿಇಒ ಕಚೇರಿಗೆ ಅರ್ಜಿ ಕಳಿಸಿದ್ದರು.

ಕಚೇರಿ ದ್ವಿತೀಯ ದರ್ಜೆ ಸಹಾಯಕ ರವಿ ಎಂಬಾತನು ಈ ಕೆಲಸ ಮಾಡಲು 9 ಸಾವಿರ ರೂ. ಬೇಡಿಕೆ ಇಟ್ಟಿದ್ದನು. ಬಿಇಒಗೆ 5 ಸಾವಿರ ರೂ. ಅಧೀಕ್ಷನಿಗೆ 2 ಹಾಗೂ ತನಗೆ 2 ಸಾವಿರ ರೂ. ಕೊಡುವಂತೆ ಹೇಳಿದ್ದನು.

ಆದರೆ ಇಂದು ಕಚೇರಿಗೆ ರಜೆ ಹಾಕಿದ್ದರಿಂದ ಬಚಾವ್‌ ಆಗಿದ್ದಾನೆ. ಉಳಿದ ಇಬ್ಬರು ಅಧಿಕಾರಿಗಳು ಬಲೆಗೆ ಬಿದ್ದಿದ್ದಾರೆ. ರವಿ ಬಂಧನಕ್ಕೂ ಬಲೆ ಬೀಸಲಾಗಿದೆ.

ಹಿಂದಿನ ಲೇಖನರಾಜ್ಯದ 18 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್‌ ಘೋಷಣೆ
ಮುಂದಿನ ಲೇಖನಶ್ರೀಲಂಕಾ ವಿರುದ್ಧದ ಟಿ20 ಸರಣಿ: ಭಾರತ ಮಹಿಳಾ ತಂಡ ಶುಭಾರಂಭ