ಮನೆ ರಾಜ್ಯ ಮುಡಾ ನಾಮನಿರ್ದೇಶಿತ ಸದಸ್ಯರಾಗಿ ಹೆಚ್.ವಿಶ್ವನಾಥ್ ನೇಮಕ

ಮುಡಾ ನಾಮನಿರ್ದೇಶಿತ ಸದಸ್ಯರಾಗಿ ಹೆಚ್.ವಿಶ್ವನಾಥ್ ನೇಮಕ

0

ಮೈಸೂರು(Mysuru): ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾಗಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ನೇಮಕವಾಗಿದ್ದಾರೆ.

ಸರ್ಕಾರದ ಅಧೀನ ಕಾರ್ಯದರ್ಶಿ(ನಗರಾಭಿವೃದ್ದಿ ಇಲಾಖೆ) ಸತೀಶ್ ಕಬಾಡಿ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರಗಳ ಕಾಯ್ದೆ,1987ರ ಕಲಂ3(3)(ಡಿ) ರನ್ವಯ ಕಲಂ.3(4)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನ ಚಲಾಯಿಸಿ ವಿಧಾನ ಪರಿಷತ್ ಸದಸ್ಯರಾದ ಅಡಗೂರು ಹೆಚ್.ವಿಶ್ವನಾಥ್ ಅವರನ್ನು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.