ಮೈಸೂರು(Mysuru): ನಿಮಗೆ ಈ ವಯಸ್ಸಿನಲ್ಲಿ ಓಲೈಕೆ ಬೇಕಿಲ್ಲ. ನಿಮಗೆ ಅಕ್ಟೋಬರ್ ನಲ್ಲಿ ಜ್ಞಾನಪೀಠ ಪ್ರಶಸ್ತಿ ಸಿಗುತ್ತೆ. ಜ್ಙಾನಪೀಠ ಪ್ರಶಸ್ತಿಗಾಗಿ ಈ ರೀತಿಯ ಓಲೈಕೆ ಸರಿಯಲ್ಲ ಹಿರಿಯ ಸಾಹಿತಿ ಎಸ್.ಎಲ್ ಬೈರಪ್ಪ ವಿರುದ್ಧ ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿಯಿಂದ ನನಗೆ ಪದ್ಮ ವಿಭೂಷಣ ಪ್ರಶಸ್ತಿ ಬಂದಿದೆ ಎಂದು ಹೇಳಿಕೆ ನೀಡಿರುವ ಎಲ್.ಭೈರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಮೋದಿಯಿಂದ ಈ ಪ್ರಶಸ್ತಿ ಬಂದಿದೆ ಎಂಬುದು ಸುಳ್ಳು . ನಿಮ್ಮ ಬರವಣಿಗೆಯಿಂದ ಈ ಪ್ರಶಸ್ತಿ ಬಂದಿದೆ. ನಿಮ್ಮ ಹೇಳಿಕೆ ಪ್ರಶಸ್ತಿಗೆ ಅವಮಾನ ಮಾಡಿದಂತೆ. ನೀವು ಬರೆವಣಿಗೆ ಆರಂಭಿಸಿದಾಗ ಮೋದಿ ಎಲ್ಲಿದ್ರು ಅನ್ನೊದೆ ಗೊತ್ತಿಲ್ಲ ಎಂದು ಕಿಡಿಕಾರಿದರು.
ಪ್ರಧಾನಿ, ರಾಷ್ಟ್ರಪತಿ ಸ್ಥಾನಗಳನ್ನು ಹೊರತುಪಡಿಸಿ ರಾಜಕೀಯದಲ್ಲಿರುವ ಇನ್ನುಳಿದ ಎಲ್ಲಾ ಪ್ರಮುಖ ಸ್ಥಾನಗಳನ್ನು ಎಸ್. ಎಂ ಕೃಷ್ಣ ಅಲಂಕರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅಕ್ಷರ, ಆರೋಗ್ಯ, ಅನ್ನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದು ಹೇಳಿದರು.
ವೈಬ್ರೆಂಟ್ ಗುಜರಾತ್ ಮಾದರಿಯಲ್ಲಿ ವೈಬ್ರೆಂಟ್ ಕರ್ನಾಟಕ ಎಂಬ ಮಾದರಿಗೆ ಎಸ್ ಎಂ ಕೃಷ್ಣ ಕಾರಣರಾದರು. ಹಲವು ಪ್ರಥಮಗಳಿಗೆ ಎಸ್ ಎಂ ಕೃಷ್ಣ ಕಾರಣೀಭೂತರಾಗಿದ್ದಾರೆ. ಅವರ ಬಳಿಕ ಮತ್ಯಾರು ಕೂಡ ಮುಖ್ಯಮಂತ್ರಿ ಸ್ಥಾನಕ್ಕೆ ಕೃಷ್ಣರಂತೆ ನ್ಯಾಯ ಒದಗಿಸಲಿಲ್ಲ ಎಂದು ಎಸ್.ಎಂ ಕೃಷ್ಣರನ್ನು ಹಾಡಿ ಹೊಗಳಿದರು.
ಮೈಸೂರು ಬೆಂಗಳೂರು ಹೈವೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಡುವಂತೆ ಎಸ್ ಎಂ ಕೃಷ್ಣರು ಪತ್ರ ಬರೆದಿದ್ದಾರೆ. ಎಸ್ ಎಂ ಕೃಷ್ಣ ಅವರಿಂದ, ಸಂಸದ ಪ್ರತಾಪ್ ಸಿಂಹ ಹಾಗೂ ನನ್ನಂತಹವರು ಕಲಿಯುವುದು ಬಹಳಷ್ಟಿದೆ ಎಂದು ಸಂಸದ ಪ್ರತಾಪ್ ಸಿಂಹಗೆ ಕುಟುಕಿದರು.
ಮೈಕ್ ಕಿತ್ತುಕೊಂಡ ಸಿಎಂ ವರ್ತನೆ ಸರಿಯಲ್ಲ
ಕಾಗಿನೆಲೆ ಶ್ರೀಗಳು ಮಾತನಾಡುವಾಗ ಸಿಎಂ ಬೊಮ್ಮಾಯಿ ಮೈಕ್ ಕಿತ್ತುಕೊಂಡ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ವಿಶ್ವನಾಥ್, ಈ ವಿಚಾರದಿಂದ ನನಗೆ ಬಹಳ ನೋವಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಈ ವರ್ತನೆ ಸರಿಯಲ್ಲ. ಯಾವುದಾದರೂ ದೊಡ್ಡ ಸಮುದಾಯದ ಮಠದ ಶ್ರೀಗಳು ಮಾತನಾಡುವಾಗ ಈ ರೀತಿ ಮೈಕ್ ಕಡಿದು ಕೊಂಡಿದ್ದರೆ ಬಿಡುತ್ತಿದ್ದರಾ? ಎಂದು ಸಿಎಂ ಬೊಮ್ಮಾಯಿಗೆ ಹೆಚ್.ವಿಶ್ವನಾಥ್ ಪ್ರಶ್ನಿಸಿದರು.