ಮನೆ ಸುದ್ದಿ ಜಾಲ ಹಡಪದ ಅಪ್ಪಣ್ಣ ಅವರು ಜಗಜ್ಯೋತಿ ಬಸವಣ್ಣನವರ ಆಪ್ತ ಶಿವಶರಣ : ಪಿ.ಎಂ. ನರೇಂದ್ರಸ್ವಾಮಿ

ಹಡಪದ ಅಪ್ಪಣ್ಣ ಅವರು ಜಗಜ್ಯೋತಿ ಬಸವಣ್ಣನವರ ಆಪ್ತ ಶಿವಶರಣ : ಪಿ.ಎಂ. ನರೇಂದ್ರಸ್ವಾಮಿ

0

ಮಂಡ್ಯ : ಜಗಜ್ಯೋತಿ ಬಸವಣ್ಣನವರ ಆಪ್ತರ ಬಳಗದಲ್ಲಿ ಒಬ್ಬರಾಗಿ ಸಾಮಾಜಿಕ ಸುಧಾರಣೆಯಲ್ಲಿ ಭಾಗಿಯಾದರು ಶಿವಶರಣ ಹಡಪದ ಅಪ್ಪಣ್ಣನವರು ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಹಾಗೂ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.

ಇಂದು (ಜು.10) ಜಿಲ್ಲಾಡಳಿತ. ಕನ್ನಡ ಮತ್ತು ಸಂಸ್ಕೃತ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಶಿವಶರಣ ಹಡಪದ ಅಪ್ಪಣ್ಣ ನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶಾಸಕ ಪಿ. ಎಂ. ನರೇಂದ್ರಸ್ವಾಮಿ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು. ಕಾಯಕ ಸಮಾಜಕ್ಕೆ ಸರ್ಕಾರ ಯೋಜನೆಗಳನ್ನು ರೂಪಿಸಿ ಸನಾಜದ ಮುಖ್ಯ ವಾಹಿನಿಗೆ ತರಲು ಸದಾ ಪ್ರಯತ್ನಿಸುತ್ತದೆ. ಕಾಯಕ ಸಮುದಾಯ ಒಗ್ಗಟ್ಟು ಹಾಗೂ ಒಮ್ಮತ ಅಭಿಪ್ರಾಯದಿಂದ ಮುಂದೆ ಬರಬೇಕು ಆಗಮಾತ್ರ ಸಂವಿಧಾನದ ಮೂಲ ಆಶಯಗಳು ಸಂಪೂರ್ಣವಾಗಿ ಈಡೇರಿಸಲು ಸಾಧ್ಯ, ಬದುಕಿಗಾಗಿ ಕಾಯಕವನ್ನು ನಂಬಿರುವ ಸಮಾಜ ಯಾರ ವಂಚನೆಗೂ ಒಳಗಾಗಬಾರದು ಎಂದು ಹೇಳಿದರು.

. ಗ್ಯಾರಂಟಿ ಯೋಜನೆಗಳು ಬಡ ಜನರ ಜೀವನವನ್ನು ಸುಧಾರಿಸಿದೆ. ಮಹಿಳೆಯರಿಗೆ ಸಮಾನತೆಯನ್ನು ನೀಡುವ ಸಲುವಾಗಿ 2 ಸಾವಿರ ನೀಡಿ ಉಚಿತವಾಗಿ ಸಂಚಾರ ಮಾಡಲು ಶಕ್ತಿ ಯೋಜನೆಯನ್ನು ಸರ್ಕಾರ ನೀಡಿದೆ ಇದರಿಂದ ಆರ್ಥಿಕವಾಗಿ, ಸಾಮಾಜಿಕವಾಗಿ. ಶೈಕ್ಷಣಿಕವಾಗಿ ಮಹಿಳೆಯರನ್ನು ಮುನ್ನಡೆಸಲು ನಮ್ಮ ಸರ್ಕಾರ ಮುಂದಾಗಿದೆ ಎಂದರು.

ಬಸವಣ್ಣರವರ ಆಪ್ತರಾಗಿ ಸಾಮಾಜಿಕ ಹೋರಾಟ ದಲ್ಲಿ ಮುಂಚೂಣಿಯಲ್ಲಿದ್ದ ಹಡಪದ ಅಪ್ಪಣ್ಣ ರವರು 250 ವಚನವನ್ನು ಬರೆದು ಸಮಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ವಚನಗಳು ಇಂದಿಗೂ ಪ್ರಸ್ತುತ ಹಾಗೂ ಅವರ ವಚನಗಳಲ್ಲಿ ತಿಳಿಸಿರುವ ಮೌಲ್ಯಗಳನ್ನು ಸಾರ್ವಜನಿಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ನಗರ ಸಭಾ ಅಧ್ಯಕ್ಷ ಎಂ. ವಿ. ಪ್ರಕಾಶ್ ಮಾತನಾಡಿ. ಸವಿತಾ ಸಮಾಜದ ಜನಾಂಗ ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ನಗರದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ ಆದ್ದರಿಂದ ಪ್ಲಾಸ್ಟಿಕ್ ಬಳಕೆಯನ್ನು ಮೊದಲು ಸಂಪೂರ್ಣವಾಗಿ ನಿಷೇಧಿಸಬೇಕು ನಂತರ ತಂಬಾಕು, ಮದ್ಯಪಾನ ಸೇವನೆಯಿಂದ ದೂರ ಇರುವ ಮೂಲಕ ಉತ್ತಮ ಆರೋಗ್ಯ ವೃದ್ಧಿಸಿಕೊಳ್ಳಬೇಕು. ವೃತ್ತಿ ಧರ್ಮವನ್ನು ಎಲ್ಲರೂ ಪಾಲಿಸುವುದರ ಜೊತೆಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ವನ್ನು ಸಹ ನೀಡಬೇಕು ಎಂದರು.

 ನಂತರ ಉಪನ್ಯಾಸಕಿ ಡಾ. ಅನಿತಾ ವಿಶೇಷ ಉಪನ್ಯಾಸ ನೀಡಿ 12 ನೇ ಶತಮಾನದಲ್ಲಿ ರಾಜಪ್ರಭುತ್ವಕ್ಕೆ ಸೆಡ್ಡು ಹೊಡೆದು ಶರಣರು ವಚನಗಳನ್ನು ರಚಿಸಿದ್ದಾರೆ. ಜಾತಿ ಮುಕ್ತವಾದ ಸಮಸಮಾಜದ ನಿರ್ಮಾಣ ಮಾಡುವುದು ಶರಣರ ಪ್ರಮುಖ ಉದ್ದೇಶವಾಗಿತ್ತು ಎಂದರು.

12 ನೇ ಶತಮಾನದ ಸಾಮಾಜಿಕ ಆಂದೋಲನದಲ್ಲಿ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಮುಂತಾದ ಮಹಿಳೆಯರು ಸಹ ಭಾಗವಹಿಸಿದ್ದಾರೆ, ಹಡಪದ ಅಪ್ಪಣ್ಣ ಜಗಜ್ಯೋತಿ ಬಸವಣ್ಣನವರ ಆಪ್ತ ಕಾರ್ಯದರ್ಶಿಗಳಾಗಿ ಅನುಭವ ಮಂಟಪದಲ್ಲಿದ್ದರು, ಹಡಪದ ಅಪ್ಪಣ್ಣನವರು ತಮ್ಮ ಕಾರ್ಯವೈಖರಿಯಿಂದ “ನಿಜಸುಖಿ” ಎಂಬ ಬಿರುದು ಪಡೆದಿದ್ದರು ಎಂದು ತಿಳಿಸಿದರು.

ನಂತರ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡಿದರು.ಸಮಾಜದಲ್ಲಿ ಸಾಧನೆ ಮಾಡಿ ಉತ್ತಮ ಸ್ಥಾನ ಪಡೆದ ಡಾ. ಗುಣಶೇಖರ್ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಶ್ರವಣಶ್ರಮ ಮಠದ ಶಂಕರನAದ ಗುರೂಜಿ, ನಗರಸಭೆ ಸದಸ್ಯ ಶಿವಲಿಂಗು, ಶ್ರೀಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ. ವಿ. ನಂದೀಶ್, ಮುಖಂಡರುಗಳಾದ ಸುರೇಶ್, ಕೆಂಪರಾಜು, ಅಂಜನಪ್ಪ, ಪರಮೇಶ್ವರ್, ಜಗದೀಶ್, ರಾಮಲಿಂಗ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.