ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಹಾಕಲು ನಾಳೆಯೇ ಕೊನೆಯ ದಿನವಾಗಿದೆ.
ಒಟ್ಟು 30 ಮ್ಯಾನೇಜರ್ ಹಾಗೂ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನಾಳೆ ಅಂದರೆ ಜನವರಿ 31, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗಾಗಿ hal-india.co.in ಗೆ ಭೇಟಿ ನೀಡಬಹುದು. ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಹುದ್ದೆಯ ಮಾಹಿತಿ:
ಹೆಡ್ ಆಫ್ ಕಸ್ಟಮರ್ ಸರ್ವೀಸ್ – 4
ಫ್ಲೀಟ್ ಸಿಂಗಲ್ ಪಾಯಿಂಟ್ ಆಫ್ ಕಾಂಟ್ಯಾಕ್ಟ್ (SPOC)- 6
ಮ್ಯಾನೇಜರ್ (ಕಸ್ಟಮರ್ ಸರ್ವೀಸ್)- 6
ಎಂಜಿನಿಯರ್ (ಕಸ್ಟಮರ್ ಸರ್ವೀಸ್)- 14
ವಿದ್ಯಾರ್ಹತೆ:
ಅಭ್ಯರ್ಥಿಗಳು ಕಡ್ಡಾಯವಾಗಿ ಪದವಿ, ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಏರೋನಾಟಿಕಲ್/ಪ್ರೊಡಕ್ಷನ್ ಇಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಹೆಡ್ ಆಫ್ ಕಸ್ಟಮರ್ ಸರ್ವೀಸ್ – 48 ವರ್ಷ
ಫ್ಲೀಟ್ ಸಿಂಗಲ್ ಪಾಯಿಂಟ್ ಆಫ್ ಕಾಂಟ್ಯಾಕ್ಟ್ (SPOC)- 48 ವರ್ಷ
ಮ್ಯಾನೇಜರ್ (ಕಸ್ಟಮರ್ ಸರ್ವೀಸ್)- 45 ವರ್ಷ
ಎಂಜಿನಿಯರ್ (ಕಸ್ಟಮರ್ ಸರ್ವೀಸ್)- 35 ವರ್ಷ
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕ:
SC/ST/PWD ಅಭ್ಯರ್ಥಿಗಳಿಗೆ- ಅರ್ಜಿ ಶುಲ್ಕ ಇಲ್ಲ
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ- 500 ರೂ.
ಪಾವತಿಸುವ ಬಗೆ- ಚಲನ್
ಉದ್ಯೋಗದ ಸ್ಥಳ:
ಲಕ್ನೋ, ನಾಸಿಕ್, ಬೆಂಗಳೂರು
ಆಯ್ಕೆ ಪ್ರಕ್ರಿಯೆ:
ಸ್ಕ್ರೀನಿಂಗ್ ಟೆಸ್ಟ್
ಲಿಖಿತ ಪರೀಕ್ಷೆ
ಸಂದರ್ಶನ
ವೇತನ:
ಹೆಡ್ ಆಫ್ ಕಸ್ಟಮರ್ ಸರ್ವೀಸ್ – ಮಾಸಿಕ ₹ 90,000-2,40,000
ಫ್ಲೀಟ್ ಸಿಂಗಲ್ ಪಾಯಿಂಟ್ ಆಫ್ ಕಾಂಟ್ಯಾಕ್ಟ್ (SPOC)- ಮಾಸಿಕ ₹ 80,000-2,22,000
ಮ್ಯಾನೇಜರ್ (ಕಸ್ಟಮರ್ ಸರ್ವೀಸ್)- ಮಾಸಿಕ 60,000- 1,80,000
ಎಂಜಿನಿಯರ್ (ಕಸ್ಟಮರ್ ಸರ್ವೀಸ್)- ಮಾಸಿಕ 40,000- 1,40,000
ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಮುಖ್ಯ ವ್ಯವಸ್ಥಾಪಕರು (HR)
ನೇಮಕಾತಿ ವಿಭಾಗ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
ಕಾರ್ಪೊರೇಟ್ ಕಚೇರಿ
15/1 ಕಬ್ಬನ್ ರಸ್ತೆ
ಬೆಂಗಳೂರು – 560001
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 03/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜನವರಿ 31, 2023