ಹಲಗೂರು: ಸಮೀಪದ ತೊರೆಕಾಡನಹಳ್ಳಿ ಬಿ. ಡಬ್ಲ್ಯೂ. ಎಸ್. ಎಸ್. ಬಿ. ಕ್ವಾಟ್ರಸ್ ನ ಏಳು ಮನೆಗಳ ಬಾಗಿಲು ಮುರಿದಿರುವ ದುಷ್ಕರ್ಮಿಗಳು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದಾರೆ.
ಕ್ವಾಟ್ರಸ್ ನಿವಾಸಿಗಳಾದ ಚಿಕ್ಕ ಪುಟ್ಟಯ್ಯ ಮತ್ತು ನಾಗೇಶ್ ಅವರ ಮನೆಗಳು ಸೇರಿದಂತೆ ಏಳು ಮನೆಗಳ ಬಾಗಿಲು ಮುರಿದು, ಸುಮಾರು 60 ಗ್ರಾಂ ಚಿನ್ನ ಹಾಗೂ 23,000 ನಗದು ಕಳ್ಳತನವಾಗಿದೆ.
ವಿಷಯ ತಿಳಿದು ಶ್ವಾನದಳಗಳೊಂದಿಗೆ ಆಗಮಿಸಿದ ಡಿ ವೈ ಎಸ್ ಪಿ ಕೃಷ್ಣಪ್ಪ, ಸಿಪಿಐ ಶ್ರೀಧರ್, ಎಸ್ಐ ಮಹೇಂದ್ರ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂಬಂಧ ಹಲಗೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.














