Saval TV on YouTube
ಮೈಸೂರು(Mysuru): ಇಲ್ಲಿನ ಜೆಎಸ್ಎಸ್ ಆಸ್ಪತ್ರೆಗೆ ಲಯನ್ಸ್ ಕ್ಲಬ್ ಆಫ್ ಬೆಂಗಳೂರು–ಜ್ಞಾನಾಲಯ ವತಿಯಿಂದ ಅತ್ಯಾಧುನಿಕ ‘ಸಂಚಾರಿ ಚಿಕಿತ್ಸಾ ಘಟಕ’ ನೀಡಲಾಗಿದೆ.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬುಧವಾರ ಹಸ್ತಾಂತರಿಸಲಾಯಿತು.
ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಅಧಿಕಾರಿಗಳಾದ ಎಸ್.ಪಿ.ಮಂಜುನಾಥ್, ಶಿವಕುಮಾರ ಸ್ವಾಮಿ, ಮಹೇಶ್ ಆರ್. ಮತ್ತು ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಅಧಿಕಾರಿಗಳಾದ ಡಾ.ಬಿ.ಮಂಜುನಾಥ, ಡಾ.ಸುಮಾ, ಜೆಎಸ್ಎಸ್ ಆಸ್ಪತ್ರೆಯ ಅಧಿಕಾರಿಗಳಾದ ಡಾ.ಮಧು ಸಿ.ಪಿ., ಡಾ.ಶ್ಯಾಮಪ್ರಸಾದ್ ಶೆಟ್ಟಿ, ಕೆ.ಎಂ.ಭಗವಾನ್, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಜ್ಞಾನಾಲಯದ ಶಿವಕುಮಾರ್ ಮತ್ತು ಮಾದಯ್ಯ ಹಾಜರಿದ್ದರು.














