ಚಿತ್ರದುರ್ಗ(Chitradurga): ಪೋಕ್ಸೋ ಕಾಯ್ದೆಯಡಿ ಬಂಧಿತರಾಗಿ ಜೈಲು ಸೇರಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶ್ರೀ ಎಸ್ ಜೆ ಎಂ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಬಿ ವಸ್ತ್ರದಮಠ್ ಅವರಿಗೆ ಪವರ್ ಆಫ್ ಅಟರ್ನಿಯನ್ನು ಹಸ್ತಾಂತರಿಸಿದ್ದಾರೆ.
ಎಸ್ ಜೆ ಎಂ ವಿದ್ಯಾಪೀಠದ ಚೆಕ್ ಸಹಿ ಸೇರಿ ವಿವಿಧ ಆಡಳಿತಾತ್ಮಕ ನಿರ್ಧಾರಕ್ಕಾಗಿ ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ವಸ್ತ್ರದಮಠ ಅವರಿಗೆ ಪವರ್ ಆಫ್ ಅಟಾರ್ನಿ ನೀಡಲಾಗಿದೆ. ಅಧಿಕೃತವಾಗಿ ನೋಟರಿ ಮಾಡಿ ಮುರುಘಾಶ್ರೀ ಪವರ್ ಆಫ ಅಟಾರ್ನಿ ನೀಡಿದ್ದಾರೆ.
ಪವರ್ ಆಫ್ ಅಟರ್ನಿ ನೀಡಲು ನ್ಯಾಯಾಂಗ ಬಂಧನದಲ್ಲಿರುವ ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಹೈಕೋರ್ಟ್ ಅನುಮತಿ ನೀಡಿತ್ತು.














