ಜ್ಯೋತಿಷ್ಯದ ದೃಷ್ಟಿಯಿಂದ ಹನುಮಾನ್ ಜನ್ಮೋತ್ಸವದ ದಿನವೂ ಬಹಳ ಮುಖ್ಯವಾಗಿದೆ. ಈ ದಿನ ತೆಗೆದುಕೊಂಡ ಪರಿಹಾರ ಕ್ರಮಗಳು ಜಾತಕದಿಂದ ಮಂಗಳ ದೋಷವನ್ನು ತೆಗೆದುಹಾಕುತ್ತದೆ. ಜೀವನದ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತದೆ ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತದೆ. ಅದೇ ರೀತಿ ಜ್ಯೋತಿಷ್ಯದಲ್ಲಿ, ಈ ರಾಶಿಯವರೆಂದರೆ ಭಗವಾನ್ ಹನುಮನಿಗೆ ಅತ್ಯಂತ ಪ್ರಿಯ. ಎಂತಹುದ್ದೇ ಸ್ಥಿತಿಯಲ್ಲೂ ಕೂಡ ಹನುಮಾನ್ ಈ ರಾಶಿಯವರನ್ನು ಬಿಟ್ಟು ಕೊಡುವುದಿಲ್ಲ. ಇದರಿಂದಾಗಿ ಅವರ ಜೀವನದಲ್ಲಿ ಕಷ್ಟಗಳು ಮತ್ತು ಅಡೆತಡೆಗಳು ಕಡಿಮೆಯಾಗುತ್ತವೆ ಮತ್ತು ಹಣದ ಕೊರತೆಯಿಲ್ಲ. ಬಜರಂಗಬಲಿಯು ಯಾವ ರಾಶಿಯವರ ಮೇಲೆ ದಯೆತೋರುತ್ತಾನೆ.
ಮೇಷ ರಾಶಿ
ಹನುಮಂತನು ಮೇಷ ರಾಶಿಯವರಿಗೆ ತುಂಬಾ ಕರುಣಾಮಯಿ. ಹಾಗಾಗಿಯೇ ಈ ಜನರ ಜೀವನದಲ್ಲಿ ಸಮಸ್ಯೆಗಳು ಬರುವುದು ಅಪರೂಪ ಮತ್ತು ಬಂದರೂ ಬೇಗ ಪರಿಹಾರವಾಗುತ್ತೆ. ಹನುಮಾನ್ ಜಿ ಕೃಪೆಯಿಂದ, ಈ ಜನರು ಧೈರ್ಯಶಾಲಿಗಳು, ನಿರ್ಭೀತರು, ಬುದ್ಧಿವಂತರು ಮತ್ತು ಬಲವಾದ ಇಚ್ಛಾಶಕ್ತಿಯುಳ್ಳವರಾಗಿರುತ್ತಾರೆ. ಅವರು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ.
ಸಿಂಹ ರಾಶಿ
ಬಜರಂಗಬಲಿ ಯಾವಾಗಲೂ ಸಿಂಹ ರಾಶಿಯ ಜನರನ್ನು ರಕ್ಷಿಸುತ್ತಾನೆ. ಈ ಜನರು ಎಷ್ಟೇ ದೊಡ್ಡ ತೊಂದರೆಗೆ ಸಿಲುಕಿದರೂ, ಅವರು ಅದರಿಂದ ಹೊರಬರುತ್ತಾರೆ. ಈ ಜನರು ಜೀವನದಲ್ಲಿ ಎಂದಿಗೂ ಸಂಪತ್ತಿನ ಕೊರತೆಯನ್ನು ಎದುರಿಸುವುದಿಲ್ಲ. ಅಲ್ಲದೆ ಯಾವ ಕ್ಷೇತ್ರಕ್ಕೆ ಹೋದರೂ ಉನ್ನತ ಸ್ಥಾನ ಪಡೆಯುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರು ಸಹ ಹನುಮಂತನಿಂದ ಆಶೀರ್ವದಿಸಲ್ಪಡುತ್ತಾರೆ. ಈ ಜನರು ಕೂಡ ದೊಡ್ಡ ಕಷ್ಟದಿಂದ ಹೊರಬರುತ್ತಾರೆ. ಅವರಿಗೂ ಎಂದೂ ಹಣದ ಕೊರತೆ ಇರಲ್ಲ. ಹನುಮಾನ್ ಜೀ ಹೆಸರಿನಲ್ಲಿ ಕೆಲಸ ಮಾಡಿದರೆ ಖಂಡಿತ ಯಶಸ್ಸು ಸಿಗುತ್ತದೆ.
ಕುಂಭ ರಾಶಿ
ಶನಿಯು ಕುಂಭ ರಾಶಿಯ ಅಧಿಪತಿಯಾಗಿದ್ದು, ಹನುಮಂತನ ಭಕ್ತನಾಗಿರುವ ಶನಿದೇವನು ಇವರಿಗೆ ಎಂದಿಗೂ ತೊಂದರೆ ನೀಡುವುದಿಲ್ಲ ಎಂದು ನಂಬಲಾಗಿದೆ. ಆಂಜನೇಯನಲ್ಲಿ ಬೇಡಿಕೊಂಡರೆ ಕುಂಭ ರಾಶಿಯವರ ಕಷ್ಟಗಳು ಕ್ಷಣ ಮಾತ್ರದಲ್ಲಿ ದೂರವಾಗುತ್ತವೆ. ಹನುಮಂತನ ಕೃಪೆಯಿಂದ ಕುಂಭ ರಾಶಿಯವರಿಗೆ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ. ಅವರು ಶ್ರಮಶೀಲರು, ಪ್ರಾಮಾಣಿಕರು ಮತ್ತು ಸಾಕಷ್ಟು ಹಣ ಮತ್ತು ಗೌರವವನ್ನು ಪಡೆಯುತ್ತಾರೆ.