ಹನೂರು: ಮನೆಯಲ್ಲಿ ಅಕ್ರಮವಾಗಿ ಜಿಂಕೆ ಕೊಂಬು, ಚಿಪ್ಪು ಹಂದಿಯ ಚಿಪ್ಪುಗಳನ್ನು ಶೇಖರಣೆ ಮಾಡಿದ್ದ ವ್ಯಕ್ತಿಯೊಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಹನೂರು ತಾಲ್ಲೂಕಿನ ಜಲ್ಲಿಪಾಳ್ಯ ಗ್ರಾಮದ ಚಿನ್ನತಂಬಿ ಬಂಧಿತ ಆರೋಪಿ. ಜಲ್ಲಿಪಾಳ್ಯ ಗ್ರಾಮದ ಚಿನ್ನತಂಬಿ ಮನೆಯಲ್ಲಿ ಅಕ್ರಮವಾಗಿ ವನ್ಯ ಪ್ರಾಣಿಗಳ ಕಳೇಬರವನ್ನು ಶೇಖರಣೆ ಮಾಡಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯ ಅಧಿಕಾರಿ ಗಿರಿಧರ್, ಉಪವಲಯ ಅರಣ್ಯ ಅಧಿಕಾರಿ ಗಿರೀಶ್ ಸಿಬ್ಬಂದಿಗಳಾದ ಅಮೀನ್ ಸಾಬ್ ಮುಕಾಂದರ, ಕಾಶಿಲಿಂಗ ನರೋಟೆ, ಅರಣ್ಯಪಾಲಕ ದೀಕ್ಷಿತ್, ಕ್ಷೇಮಾಭಿವೃದ್ಧಿ ನೌಕರ ನಟರಾಜು ಮುರುಗ, ಮಹೇಂದ್ರ, ಮೋಹನ್, ಶಿವರಾಜು, ರಮೇಶ್, ವಾಹನ ಚಾಲಕ ಸರವಣನ್ ದಾಳಿ ನಡೆಸಿದ್ದರು.
ಬಂಧಿತನಿಂದ ಜಿಂಕೆ ಕೊಂಬು, ಚಿಪ್ಪು ಹಂದಿಯ ಚಿಪ್ಪುಗಳು ಮತ್ತು ಉಗುರು, ಕಸಾಪ್ ಕತ್ತಿ, ನಾಲ್ಕು ಉರುಳುಗಳು, ಪ್ಲಾಸ್ಟಿಕ್ ಹಿಡಿಯ ಚಾಕನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.