ಹನೂರು: ನಾಯಿಯ ದಾಳಿಯಿಂದ ಜಿಂಕೆಯನ್ನು ರಕ್ಷಿಸಿದ ಸ್ಥಳೀಯರು ಅರಣ್ಯಾಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ.
ಹನೂರು ಪಟ್ಟಣದ ಹೊರವಲಯದ ಹರತಕನಳ್ಳ ಅರಣ್ಯ ಪ್ರದೇಶದಿಂದ ಮುಖ್ಯ ರಸ್ತೆಯಲ್ಲಿ ಅಹಾರಕ್ಕಾಗಿ ಅಲೆಯುವುದನ್ನು ಗಮನಿಸಿದ ನಾಯಿಗಳ ಹಿಂಡು ಏಕಾಏಕಿ ದಾಳಿ ನಡೆಸಲು ಮುಂದಾಗಿವೆ. ಇದನ್ನು ಗಮನಿಸಿದ ಯುವಕರು ನಾಯಿಗಳಿಂದ ಜಿಂಕೆಯನ್ನು ರಕ್ಷಿಸಿ ಹನೂರು ಬಫರ್ ವಲಯದ ಅರಣ್ಯ ಅಧಿಕಾರಿ ಪ್ರವೀಣ್ ರವರ ಸಮ್ಮುಖಕ್ಕೆ ಹಸ್ತಾಂತರಿಸಿದರು.
ಅರಣ್ಯಾಧಿಕಾರಿಗಳು ಜಿಂಕೆಯನ್ನು ಕಾಡಿಗೆ ಬಿಟ್ಟಿದ್ದಾರೆ.
Saval TV on YouTube