ಹನೂರು: ತಾಲೂಕಿನ ಮಲೆಮಹದೇಶ್ವರ ವನ್ಯಜೀವಿ ವಲಯದ ಏರನಕಲ್ಲು ಅರಣ್ಯ ಪ್ರದೇಶದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಮೃತಪಟ್ಟಿದ್ದಾನೆ.ಹನೂರು ತಾಲೂಕಿನ ತೋಕೆರೆ ಗ್ರಾಮದ ಚೆನ್ನಮಾದಯ್ಯ ಆನೆ ದಾಳಿಗೆ ಬಲಿಯಾದ ವ್ಯಕ್ತಿ.
ಈತ ಹಳೇ ಮಾರ್ಟಳ್ಳಿ ಗ್ರಾಮದಿಂದ ಸ್ವಗ್ರಾಮ ತೋಕರೆಗೆ ತೆರಳುತ್ತಿದ್ದಾಗ ಏರನಕಲ್ಲು ಅರಣ್ಯ ಪ್ರದೇಶದಲ್ಲಿ ಆನೆ ದಾಳಿ ನಡೆಸಿದೆ. ಪರಿಣಾಮ ಚೆನ್ನ ಮಾದಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ರಾಮಾಪುರ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನೆಡೆಸಲು ಮೃತ ದೇಹ ರವಾನಿಸಿದ್ದಾರೆ.